Gokarna|ಗೋಕರ್ಣ ಕುಡ್ಲೆ ಬೀಚ್ ನಲ್ಲಿ ಸಮುದ್ರಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ
Advertisement
ಕಾರವಾರ :- ಸಮುದ್ರಪಾಲಾಗುತಿದ್ದ ಪ್ರವಾಸಿಗನನ್ನು ಲೈಪ್ ಗಾರ್ಡ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಗೋಕರ್ಣದ(gokarna) ಕುಡ್ಲೆ ಬೀಚ್ (kudle beach) ನಲ್ಲಿ ಇಂದು ಸಂಜೆ ನಡೆದಿದೆ.
Gokarna -ಕುಡ್ಲೆ ಬೀಚ್ ನಲ್ಲಿ ಪ್ರವಾಸಿಗನ ರಕ್ಷಣೆ ಮಾಡಿದ ಲೈಫ್ ಗಾರ್ಡ ಸಿಬ್ಬಂದಿ
ತುಮಕೂರಿನ ಮಂಜುನಾಥ (೩೨) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದಾನೆ.ಇಂದು ಸ್ನೇಹಿತರ ಜೊತೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಮಂಜುನಾಥ ,ಕುಡ್ಲೆ ಬೀಚ್ ನಲ್ಲಿ ಈಜುವಾಗ ಸುಳಿಗೆ ಸಿಲುಕಿ ತೇಲಿ ಹೋಗಿದ್ದನು ,ಈ ವೇಳೆ ರಕ್ಷಣೆಗೆ ಕೂಗಿದಾಗ ಬೀಚ್ ಗಾರ್ಡ ಗಳಾದ ನಾಗೇಂದ್ರ ಕೋರ್ಲೆ,ಗಿರೀಶ್ ಗೌಡ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್ ,ಗೋಕರ್ಣ ಅಡ್ವೆಂಚರ್ಸ್ ಬೋಟ್ ನ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಘಟನೆ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.