Haliyal|ಹಳಿಯಾಳ ಡ್ರಾಪ್ ಕೇಳಿದವ ಚಾಕು ಇರಿದ!
ಹಳಿಯಾಳ ಡ್ರಾಪ್ ಕೇಳಿದವ ಚಾಕು ಇರಿದ!

ಕಾರವಾರ:- ಬೈಕ್ ನಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ(Haliyal) ಪಟ್ಟಣದ ಚವ್ಹಾಣ್ ಫ್ಲ್ಯಾಟ್ ಬಡಾವಣೆಯಲ್ಲಿ ನಡೆದಿದೆ.
ಹೊಸೂರಗಲ್ಲಿಯ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ (43) ಎಂಬಾತನಿಗೆ ವಸೀಂ ಅಸ್ಲಂ ಶೇಖ್ (27), ಎಂಬಾತ ಕೃತ್ಯ ಎಸಗಿ ಪರಾರಿಯಾದವನಾಗಿದ್ದಾನೆ.
ಹೊಸೂರಗಲ್ಲಿಯ ಮಕ್ತುಂ ಹುಸೇನ್ ಬುಡ್ಡೇಸಾಬ್ ಮುಲ್ಲಾ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತಿದ್ದ ಆರೋಪಿ ವಾಸೀಂ ಕಟ್ಟಡ ಕಾರ್ಮಿಕನಾಗಿದ್ದನು.
ನಿನ್ನೆ ದಿನ ಬೈಕ್ ನಲ್ಲಿ ಡ್ರಾಪ್ ಕೇಳಿ ಹಿಂದೆ ಕುಳಿತ ಆರೋಪಿ ವಾಸಿಂ ಬೈಕ್‌ನಲ್ಲಿ ಹೋಗುತ್ತಿರುವಾಗಲೇ ಹಿಂದಿನಿಂದ ಕುತ್ತಿಗೆ ಕೆಳಭಾಗಕ್ಕೆ ನಾಲ್ಕೈದುಬಾರಿ ಚಾಕು ಇರಿದಿದ್ದಾನೆ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಇನ್ನು ರಕ್ತ ಸುರಿಯುತಿದ್ದು ಹುಸೇನ್ ನನ್ನು ಹಳಿಯಾಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ:-Haliyal:ಹಣ್ಣಿನ ಬಾಕ್ಸ್ ತರೆದ ಭಜರಂಗದಳ ಕಾರ್ಯಕರ್ತರಿಗೆ ಶಾಕ್! ಒಳಗಿತ್ತು ಹಿಂಸಾತ್ಮಕ ರೀತಿಯಲ್ಲಿ ಗೋವುಗಳು
ಘಟನೆ ಸಂಬಂಧಿಸಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ,ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.