Honnavar| ಬೈಕ್ ಓವರ್ ಟೇಕ್ ವಿಚಾರ -ಹಿಂದೂ ಯುವಕನಿಗೆ ಮುಸ್ಲಿಂ ಯುವಕನಿಂದ ಮಾರಕಾಸ್ತ್ರದಿಂದ ಇರಿತ
Honnavar| ಬೈಕ್ ಓವರ್ ಟೇಕ್ ವಿಚಾರ -ಹಿಂದೂ ಯುವಕನಿಗೆ ಮುಸ್ಲಿಂ ಯುವಕನಿಂದ ಮಾರಕಾಸ್ತ್ರದಿಂದ ಇರಿತ
ಕಾರವಾರ/Honnavar news:- ಬೈಕ್ ಓವರ್ ಟೇಕ್ ವಿಚಾರಕ್ಕೆ ಹಿಂದೂ ಹಾಗೂ ಮುಸ್ಲಿಂ ಯುವಕರ ನಡುವೆ ಜಗಳವಾಗಿದಗದು ಈ ಜಗಳ ಹಿಂದೂ ಯುವಕನಿಗೆ ಮುಸ್ಲಿಂ ಯುವಕ ಚಾಕು ಇರಿದಿದ್ದಾನೆ .
ಈ ಘಟನೆ ನಡೆದಿರುವುದು ಹೊನ್ನಾವರ ತಾಲೂಕಿನ ಗೇರುಸೊಪ್ಪ ರಸ್ತೆಯ ಮಾವಿನಹೊಳೆ ಬಳಿ.ಹೊನ್ನಾವರದ ಸಂಶಿ ನಿವಾಸಿ ಅದ್ನಾನ್ ನದೀಂ ಶೇಕ್ (26), ಚಾಕು ಇರಿದ ಆರೋಪಿಯಾಗಿದ್ದು ,
ಹೊನ್ನಾವರ ಕುದ್ರಿಗಿ ನಿವಾಸಿ ವಿವೇಕ್ ಸುರೇಶ್ ನಾಯ್ಕ (26), ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ.
ಘಟನೆ ಆಗಿದ್ದೇನು?
ಬೈಕ್ ಓವರ್ ಟೇಕ್ ವಿಚಾರಕ್ಕೆ ಮುಸ್ಲಿಂ ಹಾಗೂ ಹಿಂದು ಯುವಕರ ನಡುವೆ ಗಲಾಟೆಯಾಗಿದೆ.
ಮುಸ್ಲಿಂ ಯುವಕ ತನ್ನ ಕೈಯಲ್ಲಿದ್ದ ಬೈಕ್ ಚಾವಿಯ ಜೊತೆಯಿದ್ದ ಸಣ್ಣ ಚಾಕುವಿನಿಂದ ಹಿಂದೂ ಯುವಕನ ಮುಖಕ್ಕೆ ಮತ್ತು ಕಿವಿಯ ಬಳಿ ಚಾಕು ಇರಿದಿದ್ದಾನೆ.
ಇನ್ನು ಗಂಭೀರ ಗಾಯಗೊಳಗಾದ ಯುವಕನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅದೃಷ್ಟವಶಾತ್ ಗ ಗಾಯಾಳು ಯುವಕನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.ಆರೋಪಿ ಅದ್ನಾನ್ ನದೀಂ ಶೇಕ್‌ನನ್ನು ಬಂಧಿಸಿದ ಹೊನ್ನಾವರ ಠಾಣಾ ಪೊಲೀಸರು ಕೊಲೆ ಯತ್ನ ಸಂಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.