For the best experience, open
https://m.kannadavani.news
on your mobile browser.
Advertisement

Honnavar: ಗೇರುಸೊಪ್ಪ ಜಲಾಶಯದ ಬಳಿಯೇ ಧರೆ ಕುಸಿತ!

Honnavar News: ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಬಳಿಯಲ್ಲಿ ಭೂಕುಸಿತ! ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಜಲಾಶಯದ ತಡೆಗೋಡೆ ಬಳಿ ಮಣ್ಣು ಕೊಚ್ಚಿಕೊಂಡು ಹೋಗಿದ್ದರೂ ಡ್ಯಾಮ್‌ಗೆ ಯಾವುದೇ ಅಪಾಯ ಇಲ್ಲವೆಂದು ಅಧಿಕೃತ ಮಾಹಿತಿ.
11:00 PM Sep 13, 2025 IST | ಶುಭಸಾಗರ್
Honnavar News: ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಬಳಿಯಲ್ಲಿ ಭೂಕುಸಿತ! ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಜಲಾಶಯದ ತಡೆಗೋಡೆ ಬಳಿ ಮಣ್ಣು ಕೊಚ್ಚಿಕೊಂಡು ಹೋಗಿದ್ದರೂ ಡ್ಯಾಮ್‌ಗೆ ಯಾವುದೇ ಅಪಾಯ ಇಲ್ಲವೆಂದು ಅಧಿಕೃತ ಮಾಹಿತಿ.
honnavar  ಗೇರುಸೊಪ್ಪ ಜಲಾಶಯದ ಬಳಿಯೇ ಧರೆ ಕುಸಿತ

Honnavar: ಗೇರುಸೊಪ್ಪ ಜಲಾಶಯದ ಬಳಿಯೇ ಧರೆ ಕುಸಿತ! 

Advertisement

ಕಾರವಾರ :- ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಸಾಮಾನ್ಯ ಎನ್ನುವಂತಾಗಿದೆ. ಜುಲೈ ತಿಂಗಳಲ್ಲಿ ಕಾರವಾರ (karwar) ತಾಲೂಕಿನ ಕದ್ರಾ ಭಾಗದ ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಘಟನಕಕ್ಕೆ ತೆರಳುವ ರಸ್ತೆಯಲ್ಲಿ ಭೂಕುಸಿತವಾಗಿ ಸಂಚಾರವೇ ಬಂದ್ ಆಗಿತ್ತು.

ಇದಾದ ನಂತರ ಜಿಲ್ಲೆಯ ಕೆಲವುಕಡೆ ಸಣ್ಣ ಪ್ರಮಾಣದ ಗುಡ್ಡ ಕುಸಿತ(landslide) ಆಗಿದ್ದವು.ಆದ್ರೆ ಇದೀಗ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಜಲಾಶಯದ ಬಳಿಯೇ ಧರೆ ಕುಸಿತವಾಗಿದೆ. ಕೆಲವು ದಿನಗಳ ಹಿಂದೆ ಗೇರುಸೊಪ್ಪ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ಹೊರಬಿಡಲಾಗಿತ್ತು. ಈ ಸಂದರ್ಭದಲ್ಲಿ  ಜಲಾಶಯದ ತಡೆಗೋಡೆ ಬಳಿಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಇದೀಗ ಇದೇ ಭಾಗದಲ್ಲಿ ಧರೆ ಕುಸಿದು ಮರವುಸಹ ಬಿದ್ದಿದೆ.

Karwar:ಕೊಡಸಳ್ಳಿ ಗುಡ್ಡ ಕುಸಿತ:ಆರು ಜನರ ರಕ್ಷಣೆ ,ಪರೀಕ್ಷೆ ಬರೆಯಲು ಜೀವ ಪಣಕ್ಕಿಟ್ಟ ವಿದ್ಯಾರ್ಥಿನಿ!

ಇನ್ನು ಈ ಭಾಗದಲ್ಲಿ ತಡೆಗೋಡೆ ಪಕ್ಕದಲ್ಲೇ ಧರೆ ಕುಸಿದಿದ್ದು ಡ್ಯಾಮ್ ಗೆ ಯಾವುದೇ ಸಮಸ್ಯೆಗಳಾಗಿಲ್ಲ. ಧರೆ ಕುಸಿದ ಮೇಲ್ಭಾಗದಲ್ಲಿ ಮರಗಿಡಗಳು ಇದ್ದು ಮತ್ತೆ ಕುಸಿತವಾಗುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ