ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

India news: GST slab ನಲ್ಲಿ ಪರಿಷ್ಕರಣೆ| ಯಾವ ವಸ್ತು ಇಳಿಕೆ,ಏರಿಕೆ ವಿವರ ಇಲ್ಲಿದೆ.

ನವದೆಹಲಿ: 8 ವರ್ಷಗಳ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ (GST Slab) ಪರಿಷ್ಕರಣೆ ಮಾಡಲಾಗುತ್ತಿದೆ.
10:27 PM Sep 03, 2025 IST | ಶುಭಸಾಗರ್
ನವದೆಹಲಿ: 8 ವರ್ಷಗಳ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ (GST Slab) ಪರಿಷ್ಕರಣೆ ಮಾಡಲಾಗುತ್ತಿದೆ.

India news: GST slab ನಲ್ಲಿ ಪರಿಷ್ಕರಣೆ| ಯಾವ ವಸ್ತು ಇಳಿಕೆ,ಏರಿಕೆ ವಿವರ ಇಲ್ಲಿದೆ.

Advertisement

ನವದೆಹಲಿ: 8 ವರ್ಷಗಳ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ (GST Slab) ಪರಿಷ್ಕರಣೆ ಮಾಡಲಾಗುತ್ತಿದೆ.

ಹಾಲಿ ಇರುವ ಶೇ.5, ಶೇ.12, ಶೇ.8 ಶೇ.28 ತೆರಿಗೆ ಪದ್ಧತಿ ಬದಲಿಗೆ 2 ಸ್ಲ್ಯಾಬ್‌ಗಳಿಗೆ ಅಂದರೆ ಶೇ.5 ಹಾಗೂ ಶೇ.18ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ `ಲಾಭ & ಪಾಪ’ ಟ್ಯಾಕ್ಸ್ ಅಂತ ಹೆಸರಿಡಲಾಗ್ತಿದೆ.

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

 ಈ ಪ್ರಸ್ತಾಪಕ್ಕೆ ಈಗಾಗಲೇ ಜಿಎಸ್‌ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದೆ.

ದೆಹಲಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿರುವ ಜಿಎಸ್‌ಟಿ ಕೌನ್ಸಿಲ್‌ (GST Council) ಸಭೆ ನಡೆಯುತ್ತಿದ್ದು ಜಿಎಸ್‌ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿಯ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

GST ಮೀಟಿಂಗ್.

ಶೇ.12 ರ ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು ಶೇ.5 ಕ್ಕೆ ಇಳಿಕೆ ಹಾಗೂ ಶೇ.28 ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು ಶೇ.18ಕ್ಕೆ ಇಳಿಸಲು ತೀರ್ಮಾನವಾಗಿದೆ. ಹೊಸ ಜಿಎಸ್‌ಟಿ ಪದ್ಧತಿಯಿಂದ ಕರ್ನಾಟಕ ಸರ್ಕಾರಕ್ಕೆ 15 ಸಾವಿರ ಕೋಟಿ ರೂ. ತೆರಿಗೆ ನಷ್ಟವಾಗುವ ಸಾಧ್ಯತೆಯಿದೆ. ಕರ್ನಾಟಕದ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಜಿಎಸ್‌ಟಿ ಸಭೆಯಲ್ಲಿ ಭಾಗಿ ಆಗಿದ್ದಾರೆ.

ಯಾವುದು ಅಗ್ಗ?

ಆರೋಗ್ಯ: ಜೀವ ರಕ್ಷಕ ಔಷಧಿಗಳು ಅಗ್ಗ
ಕ್ಯಾನ್ಸರ್ ಔಷಧಿಗೆ ಜಿಎಸ್‌ಟಿಯೇ ಇಲ್ಲ
ಅಗತ್ಯ ಔಷಧಿಗಳು ಶೇ.12ರಿಂದ ಶೇ.5ಕ್ಕೆ ಇಳಿಕೆ
ವೈಯಕ್ತಿಕ ಹೆಲ್ತ್ & ಲೈಫ್ ಇನ್ಶುರೆನ್ಸ್‌ಗೆ ಜಿಎಸ್‌ಟಿ ಇಲ್ಲ.

ಇದನ್ನೂ ಓದಿ:-Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ

ದಿನ ಬಳಕೆ ವಸ್ತುಗಳು – ಶೇ.12ರಿಂದ ಶೇ.5ಕ್ಕೆ ಇಳಿಕೆ
ಪನೀರ್, ಪಿಜ್ಜಾ ಬ್ರೆಡ್, ಹಪ್ಪಳ, ಹಣ್ಣಿನ ರಸ, ಎಳನೀರು, ಬಟರ್, ಚೀಸ್, ಪಾಸ್ತಾ & ಐಸ್‌ಕ್ರೀಂ

 ಆಟೋಮೊಬೈಲ್– ಶೇ.28ರಿಂದ ಶೇ.18ಕ್ಕೆ ಇಳಿಕೆ,1200 ಸಿಸಿ ಒಳಗಿನ ಸಣ್ಣ ಕಾರುಗಳು -350 ಸಿಸಿ ಒಳಗಿನ ಬೈಕ್‌ಗಳು ,ವಾಹನಗಳ ಬಿಡಿ ಭಾಗಗಳು.

ವಸತಿ ಆತಿಥ್ಯ & ಮನರಂಜನೆ – ಶೇ.12ರಿಂದ ಶೇ.5ಕ್ಕೆ ಇಳಿಕೆ
ಹೊಟೇಲ್ ವಾಸ್ತವ್ಯ ಸಿನಿಮಾ ಟಿಕೆಟ್‌ಗಳು

ಬುಕ್ಕಿಂಗ್ – ಶೇ.12ರಿಂದ ಶೇ.5ಕ್ಕೆ ಇಳಿಕೆ
7,500 ರೂ. ಮೇಲ್ಪಟ್ಟ ಬುಕ್ಕಿಂಗ್‌ಗೆ

ಕೃಷಿ & ರಸಗೊಬ್ಬರ : ಶೇ.18ರಿಂದ ಶೇ.5ಕ್ಕೆ ಇಳಿಕೆ
ಸಲ್ಫರಿಕ್ ಆಸಿಡ್, ನೈಟ್ರಿಕ್ ಆಸಿಡ್, ಅಮೋನಿಯಾ

ಜವಳಿ: ಶೇ.12ರಿಂದ ಶೇ.5ಕ್ಕೆ ಇಳಿಕೆ
ಸಿಂಥೆಟಿಕ್ ನೂಲು, ಕೈಯಿಂದ ಫೈಬರ್ ನೂಲು, ಕಾರ್ಪೆಟ್, ಕರಕುಶಲ ವಸ್ತುಗಳು)

ಸೋಲಾರ್ ಕುಕ್ಕರ್: ಶೇ.12ರಿಂದ ಶೇ.5ಕ್ಕೆ ಇಳಿಕೆ

ಲೇಖನ ಸಾಮಾಗ್ರಿ – ಶೇ.12ರಿಂದ ಶೇ.5ಕ್ಕೆ ಇಳಿಕೆ
ಮ್ಯಾಪ್, ಚಾರ್ಟ್‌ಗಳು, ನೋಟ್‌ಬುಕ್‌ಗಳು, ಪೆನ್ಸಿಲ್ **ರಬ್ಬರ್ – ಮೊದಲು ಶೇ.12ರಷ್ಟಿತ್ತು. ಈಗ ಜಿಎಸ್‌ಟಿ ಇಲ್ಲ. )

ಬಾತ್‌ರೂಮ್ ವಸ್ತುಗಳು
ಟೂಥ್‌ಪೌಡರ್ (ಶೇ.12ರಿಂದ ಶೇ.5ಕ್ಕೆ ಇಳಿಕೆ)
ಟೂಥ್‌ಪೇಸ್ಟ್ (ಶೇ.18ರಿಂದ ಶೇ.5ಕ್ಕೆ ಇಳಿಕೆ)
ಶಾಂಪೂ, ಸೋಪು, ಎಣ್ಣೆ (ಶೇ.18ರಿಂದ ಶೇ.5ಕ್ಕೆ ಇಳಿಕೆ)
ಛತ್ರಿ: ಶೇ.12ರಿಂದ ಶೇ.5ಕ್ಕೆ ಇಳಿಕೆ .

ಯಾವುದು ಏರಿಕೆ?

ಶೇ.40 ಜಿಎಸ್‌ಟಿ-ತಂಬಾಕು & ಪಾನ್ ಮಸಾಲ ( ಪಾಪದ ಸುಂಕ)ಐಷಾರಾಮಿ ವಾಹನಗಳು20-40 ಲಕ್ಷ ಬೆಲೆಯ ಎಲೆಕ್ಟ್ರಿಕ್‌ ವಾಹನಗಳು – ಶೇ.5ರಿಂದ ಶೇ.18ಕ್ಕೆ ಏರಿಕೆ.

40 ಲಕ್ಷ ರೂ. ಮೀರಿದ ಐಷಾರಾಮಿ ಇವಿಗಳು – ಶೇ.40

ಪ್ರಕೃತಿ ಮೆಡಿಕಲ್ ,ಕಾರವಾರ.

ಕಲ್ಲಿದ್ದಲು ಮತ್ತು ಕೆಲವು ಇಂಧನ ಉತ್ಪನ್ನಗಳು – ಶೇ.5ರಿಂದ ಶೇ.18ಕ್ಕೆ ಏರಿಕೆ
ಸೆಸ್ ತೆಗೆದುಹಾಕಿದ ನಂತರ ಕಲ್ಲಿದ್ದಲು 5% ರಿಂದ 18% ಕ್ಕೆ ಏರಬಹುದು, ಇದು ವಿದ್ಯುತ್ ಉತ್ಪಾದಕರಿಗೆ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯುತ್ ಸುಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆಗಳು – 12% ರಿಂದ 18%ಕ್ಕೆ ಏರಿಕೆ

 

Advertisement
Tags :
GST CouncilGST in IndiaGST new ratesGST on daily goodsGST slab cutGST slab hikeGST slab revisionGST tax changesGST update 2024india newsKarnataka GST impact
Advertisement
Next Article
Advertisement