Ration card :ಉಚಿತ ಪಡಿತರ ರದ್ದು : ನಿಯಮ ಬದಲಿಸಿದ ಕೇಂದ್ರ ಸರ್ಕಾರ
Ration card :ಉಚಿತ ಪಡಿತರ ರದ್ದು : ನಿಯಮ ಬದಲಿಸಿದ ಕೇಂದ್ರ ಸರ್ಕಾರ
ನವದೆಹಲಿ:- ರಾಜ್ಯವೂ ಸೇರಿದಂತೆ ದೇಶದಲ್ಲಿ ಬಡವರಿಗೆ ಸಹಾಯವಾಗಲು ಉಚಿತ ರೇಷನ್ ( ration) ನೀಡಲಾಗುತಿತ್ತು. ಆದರೇ ಇದರ ಉಪಯೋಗ ಬಡವರಿಗೆ ಆಗುವ ಜೊತೆ ನಕಲಿ ಪಡಿತರ ಚೀಟಿ ಹೊಂದಿದವರು ಸಹ ಪಡೆಯುತಿದ್ದರು. ಆದ್ರೆ ಇದೀಗ ಕೇಂದ್ರ ಸರ್ಕಾರ ( central government) ಉಚಿತ ಪಡಿತರ ಪಡೆಯುವವರಿಗಾಗಿ ದೊಡ್ಡ ಬದಲಾವಣೆ ಮಾಡುತಿದ್ದು ,21 ಮೇ 2025 ರಿಂದ ಇಡೀ ದೇಶದಲ್ಲಿ ಜಾರಿಗೆ ತರಲಿದೆ.
ಹೌದು ರಾಜ್ಯ ಸರ್ಕಾರ ನಕಲಿ ರೇಷನ್ ಕಾರ್ಡ ( ration card) ಹೊಂದಿದವರ ಪತ್ತೆ ಕಾರ್ಯ ಮಾಡಿ ರದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಸಹ ಹೊಸ ಹೆಜ್ಜೆ ಇಟ್ಟಿದೆ. ಹಾಗಿದ್ರೆ ಏನದು ಬದಲಾವಣೆ? ಉಚಿತ ಪಡಿತರ ಯಾರಿಗೆ ದೊರೆಯಲಿದೆ ಅಂತೀರಾ ,ಹೌದು ಉಚಿತ ಪಡಿತರ ಪಡೆಯುವವರಿಗೆ ಮಾನದಂಡ ನಿಗದಿ ಮಾಡಿದೆ ಕೇಂದ್ರಸರ್ಕಾರ.
ಇದನ್ನೂ ಓದಿ:-Breaking news : ಸಮುದ್ರದ ಅಲೆಗೆ ಕೊಚ್ಚಿಹೋದ ಏಳು ಜನ ವಿದ್ಯಾರ್ಥಿನಿಯರು ಓರ್ವ ವಿದ್ಯಾರ್ಥಿನಿ ಸಾವು ಮೂವರು ಕಾಣೆ!

ಯಾರಿಗೆ ಉಚಿತ ಪಡಿತರ ಸಿಗುವುದಿಲ್ಲ?
ಯಾವ ರೇಷನ್ ಕಾರ್ಡ ದಾರರು ಮಾಸಿಕ ಆದಾಯ 10,000 ರೂಪಾಯಿಗಿಂತ ಹೆಚ್ಚಿರುವವರಿಗೆ ಇನ್ಮುಂದೆ ಉಚಿತ ಪಡಿತರ ರದ್ದಾಗಲಿದೆ. ಐದು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರ ಹೆಸರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ, ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತ ದೊಡ್ಡ ಮನೆಗಳನ್ನು ಹೊಂದಿರುವವರಿಗೂ ಉಚಿತ ಪಡಿತರ ರದ್ದು ಮಾಡಲಾಗುತ್ತದೆ.
ಸರ್ಕಾರಿ ನೌಕರರನ್ನು ಹೊಂದಿರುವ ಕುಟುಂಬಗಳು ಇನ್ಮುಂದೆ ಉಚಿತ ಪಡಿತರಕ್ಕೆ ಅರ್ಹರಾಗಿರುವುದಿಲ್ಲ. ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚಿರುವವರು ಈ ಸೌಲಭ್ಯದಿಂದ ಹೊರಗಿಡಲಾಗುತ್ತದೆ.
ಪ್ರಮುಖ ಸೂಚನೆಗಳು ಏನು?
ಪಡಿತರ ಚೀಟಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಸಬ್ಸಿಡಿಯ ಸರಿಯಾದ ವಿತರಣೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದೆ. ವಂಚನೆ ಮತ್ತು ಸುಳ್ಳು ಹಕ್ಕು ಸ್ಥಾಪನೆಗಳನ್ನು ನಿಷೇಧಿಸಬೇಕು, ಸರ್ಕಾರಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ,ಯೋಜನೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗಬೇಕು ,ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಬೇಕು ಎಂಬುದಾಗಿದ್ದು ರಾಜ್ಯಗಳಿಗೆ ಈಗಾಗಲೇ ಸೂಚನೆ ಸಹ ನೀಡಿದೆ.
ಯಾರ ಪಡಿತರ ಚೀಟಿ ರದ್ದಾಗುತ್ತದೆ?
ಪಡಿತರ ದಾರನ ಮಾಸಿಕ 10,000 ರೂಪಾಯಿಗಿಂತ ಆದಾಯ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ. 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ.
ನಗರದಲ್ಲಿ 1,000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ
ಸರ್ಕಾರಿ ನೌಕರರಿರುವ ಕುಟುಂಬಗಳ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ. ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚಿರುವವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ.2 ಹೆಕ್ಟೇರ್‌ಗಿಂತ ಹೆಚ್ಚು ನೀರಾವರಿ ಭೂಮಿ ಹೊಂದಿರುವವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ.