For the best experience, open
https://m.kannadavani.news
on your mobile browser.
Advertisement

Joida|ಜಾತ್ರೆಗೆ ಹೋದ ಮಹಿಳೆ ಶವವಾಗಿಪತ್ತೆ

50-year-old Anganwadi worker, Ashwini Patil from Belagavi, found dead under Tinai Ghat bridge in Joida taluk. Police probe if it’s murder or suicide.
09:25 PM Oct 05, 2025 IST | ಶುಭಸಾಗರ್
50-year-old Anganwadi worker, Ashwini Patil from Belagavi, found dead under Tinai Ghat bridge in Joida taluk. Police probe if it’s murder or suicide.
joida ಜಾತ್ರೆಗೆ ಹೋದ ಮಹಿಳೆ ಶವವಾಗಿಪತ್ತೆ

Joida|ಜಾತ್ರೆಗೆ ಹೋದ ಮಹಿಳೆ ಶವವಾಗಿಪತ್ತೆ( Joida: Woman Found Dead Under Tinai Ghat Bridge | Suspicious Death)

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿ‌ನ ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿಯ ತೀನೈಘಾಟ್ ಸೇತುವೆ ಕೆಳಗೆ ಮಹಿಳೆಯ ಶವ ಪತ್ತೆಯಾಗಿದ್ದು ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಅಂಗನವಾಡಿ ಕಾರ್ಯಕರ್ತೆಯಾಗಿರುವ ಬೆಳಗಾವಿ ಖಾನಾಪುರದ ದುರ್ಗಾನಗರ, ನಂದಗಢ ನಿವಾಸಿ ಅಶ್ವಿನಿ ಬಾಬುರಾವ್ ಪಾಟೀಲ (50), ಮೃತ ಮಹಿಳೆಯಾಗಿದ್ದಾರೆ.

https://chat.whatsapp.com/HbI3YG8zHwtAYxenaKEbAg?mode=ems_copy_t

ಅಶ್ವಿನಿ ಪಾಟೀಲ್ ಅವರು ಅಕ್ಟೋಬರ್ 2ರಂದು ಕೇಕೇರಿ ಜಾತ್ರೆಗೆ ತೆರಳಿದ್ದರು,ಜಾತ್ರೆ ಮುಗಿಸಿ ವಾಪಾಸ್ ಬರೋವಾಗ ಬಿಡಿ ಬಳಿ ಇಳಿದಿದ್ದು, ನಂತರ ಮನೆಗೆ ತಲುಪಿರಲಿಲ್ಲ. ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಈಕೆಯ ಪುತ್ರ ಬೆಳಗಾವಿಯ ನಂದಗಢ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿ ಮೂರು ದಿನದ ನಂತರ ಅಶ್ವಿನಿ ಬಾಬುರಾವ್ ರವರ ಮೃತದೇಹ ತೀನೈಘಾಟ್ ಸೇತುವೆ ಕೆಳಗೆ ಶವ ದೊರೆತಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಜೊಯಿಡಾ ತಾಲೂಕಿನ ರಾಮನಗರ ಪೊಲೀಸರು ಪ್ರಾಥಮಿಕ ಪರಿಶೀಲನೆಯಲ್ಲಿ ತಲೆ ಮತ್ತು ಮುಖದಲ್ಲಿ ಗಂಭೀರ ಗಾಯಗಳು ಪತ್ತೆ ಮಾಡಿದ್ದಾರೆ.

Joida: Woman Found Dead Under Tinai Ghat Bridge | Suspicious Death
Joida: Woman Found Dead Under Tinai Ghat Bridge | Suspicious Death

ತನಿಖೆ ವೇಳೆ ಸ್ಥಳದ ಬಳಿ ಸಿಕ್ಕ ಮೊಬೈಲ್‌ನಲ್ಲಿ ಎರಡು ಸಂದೇಶಗಳು ಪತ್ತೆಯಾಗಿದೆ ,ಒಂದರಲ್ಲಿ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂಬ ಸಂದೇಶ,ಮತ್ತೊಂದರಲ್ಲಿ “ನಾನು ಬೆಂಗಳೂರು ಹೋಗುತ್ತಿದ್ದೇನೆ” ಎಂಬ ಸಂದೇಶ ಟೈಪ್ ಮಾಡಲಾಗಿತ್ತು.ಈ ಎರಡೂ ಸಂದೇಶಗಳಿಂದ ಕೊಲೆನಾ..? ಅಥವಾ ಆತ್ಮಹತ್ಯೆಯಾ..? ಎಂಬ ಅನುಮಾನ ಪೊಲೀಸರನ್ನು ಕಾಡುವಂತೆ ಮಾಡಿದೆ.

ಸದ್ಯ ಪೋಸ್ಟ್‌ಮಾರ್ಟಂ ವರದಿ ಬರುವವರೆಗೆ ಸಾವಿನ ನಿಜವಾದ ಕಾರಣ ಅಸ್ಪಷ್ಟೇ ಸ್ಪಷ್ಟವಾಗಬೇಕಿದ್ದು ತನಿಖೆ ಪ್ರಗತಿಯಲ್ಲಿದ್ದು ಘಟನೆ ಸಂಬಂಧ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ