For the best experience, open
https://m.kannadavani.news
on your mobile browser.
Advertisement

Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?

IAS officer Akriti Bansal accused of misusing Karnataka Bhavan funds, ₹27 lakh maternity claim & vehicle misuse; Jameer faces cultural disrespect charges.
03:15 PM Aug 31, 2025 IST | ಶುಭಸಾಗರ್
IAS officer Akriti Bansal accused of misusing Karnataka Bhavan funds, ₹27 lakh maternity claim & vehicle misuse; Jameer faces cultural disrespect charges.
karnataka ಈ ias ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು   ಪ್ರಶ್ನೆ ಮಾಡುವವರು ಯಾರು

Karnataka|ಈ IAS ಅಧಿಕಾರಿಗಳ ಸರ್ಕಾರಿ ಹಣದಲ್ಲಿ ಸ್ವಂತ ಖರ್ಚು ! ಪ್ರಶ್ನೆ ಮಾಡುವವರು ಯಾರು?

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ನವದೆಹಲಿ : ಕರ್ನಾಟಕ ಭವನದ (karnataka bavan) ಹೆಚ್ಚುವರಿ ನಿವಾಸಿ ಆಯುಕ್ತೆ ಆಕೃತಿ ಬನ್ಸಲ್ ಐಷರಾಮಿ ಜೀವನ ನಡೆಸುತ್ತಿದ್ದಾರೆ, ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಬೆಂಗಳೂರು ಮೂಲದ ಶ್ರೀನಿವಾಸ್ ಎಲ್ ಎನ್ನುವವರು ದೂರು ನೀಡಿದ್ದಾರೆ.

ಮೂರು ಪುಟಗಳ ದೂರು ಸಲ್ಲಿಸಿದ್ದು, ಆಕೃತಿ ಬನ್ಸಲ್ ಕರ್ನಾಟಕ ಭವನದಲ್ಲಿ ಹೇಗೆ ಅಧಿಕಾರ ದುರ್ಬಳಕೆ ಬಗ್ಗೆ ಮಾಡಿಕೊಂಡಿದ್ದಾರೆಂದು ವಿವರವಾಗಿ ದೂರು ನೀಡಿದ್ದಾರೆ. ಆಕೃತಿ ಬನ್ಸಲ್ ಹೆರಿಗೆ ಭತ್ಯೆಗಾಗಿ ಸುಮಾರು ರೂ.27 ಲಕ್ಷ ಕರ್ನಾಟಕ ಭವನದ ಅಕೌಂಟ್ಸ್ ಡಿಪಾರ್ಟ್‌ ಮೆಂಟ್‌ನಿಂದ ಪಡೆದಿದ್ದಾರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ದೊಡ್ಡ ಪ್ರಮಾಣದ ಹಣವನ್ನು ಒಂದೇ ತಿಂಗಳಲ್ಲಿ ಹಣ ಪಡೆದುಕೊಂಡಿದ್ದಾರೆ

Karnataka:ಕಾರ್ಮಿಕ ಮಂಡಳಿಯಲ್ಲಿ ಕೋಟ್ಯಾಂತರ ಅವ್ಯವಹಾರ|ಬಿಜೆಪಿ ಅವಧಿಯಲ್ಲಿ ಅಕ್ರಮ ,ಕಾಂಗ್ರೆಸ್ ಅವಧಿಯಲ್ಲಿ ಸಕ್ರಮ ದಿ ಫೈಲ್ ವರದಿ

ಆಕೃತಿ ಬನ್ಸಾಲ್ ಅವರಿಗೆ ಕರ್ನಾಟಕ ಭವನದ ಸಮೀಪವೇ ಸರ್ಕಾರಿ ನಿವಾಸ ನೀಡಲಾಗಿದೆ ಈ ಸರ್ಕಾರಿ ಮನೆಯನ್ನು ಸಂಬಂಧಿಕರಿಗೆ ನೀಡಿ ಅವರು ದೂರದ ತಂದೆ ತಾಯಿ ಮನೆಗೆ ಪ್ರಯಾಣಿಸಲು ನಿತ್ಯ ಕರ್ನಾಟಕ ಭವನದ ಸರ್ಕಾರಿ ವಾಹನ ಬಳಕೆ ಮಾಡುತ್ತಿದ್ದಾರೆ.

 ಇವರನ್ನು ಕರೆತರಲು ಹಾಗೂ ಹೋಗಿ ಬಿಟ್ಟು ಬರಲು ನಿತ್ಯ ಸುಮಾರು 150 ರಿಂದ 160 ಕಿ.ಮೀಗಳು ವ್ಯಯವಾಗುತ್ತಿದೆ.ಇದರಿಂದ ತಿಂಗಳಿಗೆ ಹೆಚ್ಚು ಕಡಿಮೆ 35,000/- ದಿಂದ 40,000/- ರೂಗಳಷ್ಟು ಪೆಟ್ರೋಲ್ / ಡೀಸಲ್‌ ಖರ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.

Karnataka|ಬೇಲಿಕೇರಿ ಅದಿರಿ ನಾಪತ್ತೆ ಪ್ರಕರಣ | ಸಚಿವ ಸಂಪುಟ ಉಪ ಸಮಿತಿ ವರದಿ ಅಂಗೀಕಾರ-ನಿವೃತ್ತ ಅಧಿಕಾರಿಗಳಿಗೂ ತನಿಖೆ! 

ಹೀಗೆ ವಾಹನ ಬಳಕೆಗೆ ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ, ವಾರಂತ್ಯದಲ್ಲಿ ಎರಡು ಕಾರಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡುತ್ತಿದ್ದಾರೆ ಇದಕ್ಕೂ ಯಾವುದೇ ಅನುಮತಿ ನೀಡಿಲ್ಲ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳು ಬಳಕೆ ಮಾಡದಷ್ಟು ಕರ್ನಾಟಕ ಭವನದ ವಾಹನಗಳನ್ನು ಮನಸೋಇಚ್ಛೆ ಬಳಕೆ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ದೂರಿದ್ದಾರೆ.

ಇದನ್ನು ಪ್ರಶ್ನೆ ಮಾಡಬೇಕಿರುವ ನಿವಾಸಿ ಆಯುಕ್ತೆ ಇಂಕೋಂಗ್ಲ ಜಮೀರ್ ಮೌನವಾಗಿದ್ದಾರೆ, ಇಂಕೋಂಗ್ಲ ಜಮೀರ್ ತಿಂಗಳಿಗೊಮ್ಮೆ ಕರ್ನಾಟಕ ಭವನದಲ್ಲಿ ಐಎಎಸ್‌ಗಳ ಪಾರ್ಟಿ ಮಾಡಿಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಗೌರವ ಇಲ್ಲ, ಭವನದ ಇತರೆ ಅಧಿಕಾರಗಳ ಬಗ್ಗೆಯೂ ಅಸಹನೆ ಹೊಂದಿದ್ದು ಈ ಹಿನ್ನಲೆ ಇಬ್ಬರು ಅಧಿಕಾರಿಗಳನ್ನು ಉತ್ತರ ಕರ್ನಾಟಕದ ಭಾಗಕ್ಕೆ ವರ್ಗಾವಣೆ ಮಾಡುವಂತೆ ಶಾಲೀನಿ ರಜನೀಶ್ ಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಭವನ ಏಕಿದೆ?

ಹೊಸದಾಗಿ ನಿರ್ಮಾಣಗೊಂಡ ದೆಹಲಿ ಕರ್ನಾಟಕ ಭವನ (ಸಂಗ್ರಹ ಚಿತ್ರ)

ದೆಹಲಿಯಲ್ಲಿ ಕರ್ನಾಟಕದ ವ್ಯವಹಾರ ಗಳನ್ನು ನೋಡಿಕೊಳ್ಳಲು ಹಾಗೂ ವಸತಿಗಾಗಿ ಕರ್ನಾಟಕ ಭವನ ನಿರ್ಮಾಣ ಮಾಡಲಾಗಿದೆ. ದೆಹಲಿಯಲ್ಲಿ ಮೂರು ಕರ್ನಾಟಕ ಭವನವಿದ್ದು ,ನ್ಯೂ ಡೆಲ್ಲಿ ಯ ರೇಸ್ ಕೋರ್ಸ ರಸ್ತೆ (ಹಿಂದಿನ ಪ್ರಧಾನಿ ನಿವಾಸ) ಬಳಿ ಕರ್ನಾಟಕ ಭವನ-1 ಇದೆ. ಇಲ್ಲಿಯೇ ಭವನದ ಆಡಳಿತ ಕಚೇರಿಕೂಡ ಇದೆ.ಈ ಭವನದಲ್ಲಿ ಜನಪ್ರತಿನಿಧಿಗಳಿಗೆ,ಸರ್ಕಾರಿ ನೌಕರರಿಗೆ ಊಟ,ವಸತಿ ಸಹ ನಿಗದಿ ದರದಲ್ಲಿ ನೀಡಲಾಗುತ್ತದೆ.

ಕನ್ನಡದ ವಿರೋಧಿ ಕಮಿಷಿನರ್ ಗಳು!

ಇನ್ನು ಈ ಭವನಗಳಿಗೆ IAS ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ. ಆದರೇ ಈ ಹಿಂದ ಬಂದ ಹಲವು ಆಯುಕ್ತರುಗಳು ಇಲ್ಲಿನ ಕರ್ನಾಟಕ ಭವನ ಸಿಬ್ಬಂದಿಗಳನ್ನು ಕೀಳಾಗಿ ನೋಡುತಿದ್ದ ಬಗ್ಗೆ ಹಲವು ದೂರುಗಳು ಕೇಳಿಬಂದಿತ್ತು.

ಇನ್ನು ಈ ಹಿಂದೆ ದೆಹಲಿ ಕರ್ನಾಟಕ ಭವನದ ಆಯುಕ್ತೆಯಾಗಿದ್ದ ಇಂಕೋಂಗ್ಲ ಜಮೀರ್ ಕರ್ನಾಟಕ ಜನರನ್ನು ಕೀಳಾಗಿ ನೋಡುತಿದ್ದ ಕಾರಣ ಹಾಗೂ ಕನ್ನಡ ಕಲಿಯದೇ ಮೊಂಡುತನ ತೋರುತಿದ್ದ ಕಾರಣ ಅಂದಿನ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ರವರು ಇವರನ್ನು ಕನ್ನಡ ಕಲಿಯಬೇಕು ಎಂಬ ಕಾರಣಕ್ಕೆ ಕರ್ನಾಟಕ್ಕೆ ವರ್ಗ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದರು.

ಇದರ ಫಲವಾಗಿ ನಿವಾಸಿ ಆಯುಕ್ತೆ ಇಂಕೋಂಗ್ಲ ಜಮೀರ್ ರನ್ನು ಕರ್ನಾಟಕದ ಗಡಿ ಜಿಲ್ಲೆ ಉತ್ತರ ಕನ್ನಡ ಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದರು.

ಉತ್ತರ ಕನ್ನಡ ಜಿಲ್ಲೆಗೆ ಬಂದ ಇಂಕೋಂಗ್ಲ ಜಮೀರ್ ಕನ್ನಡ ಕಲಿಯುವುದಿರಲಿ ,ಇಲ್ಲಿ ಉಂಡು ಮೈದು ಹೋಗಿದ್ದು , ತಮ್ಮ ರಾಜಕೀಯ ಪ್ರಭಾವ ಬಳಸಿ ದೆಹಲಿಯ ಕರ್ನಾಟಕ ಭವನಕ್ಕೆ ವಕ್ಕರಿಸಿ ಮತ್ತೆ ತಮ್ಮ ಹಳೆಯ ವರಸೆ ಶುರುವಿಟ್ಟುಕೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ