For the best experience, open
https://m.kannadavani.news
on your mobile browser.
Advertisement

Sirsi:ಕೊಚ್ಚಿಹೋದ ದೇವಿಮನೆ ರಸ್ತೆಗೆ ಒಂದುವಾರ ಗಡುವು- ಶಾಸಕ,ಎಸಿ ಗೆ ಸಿಕ್ಕು ಅಧಿಕಾರಿಗಳ ಆಶ್ವಾಸನೆ!

ಶಿರಸಿ:- ದೇವಿಮನೆ ಘಟ್ಟ ಭಾಗದಲ್ಲಿ ಬೆಣ್ಣೆಹೊಳೆಯ ನೀರು ಹರಿದು ತಾತ್ಕಾಲಿಕ ರಸ್ತೆ ಕೊಚ್ಚಿಹೋದ ಬೆನ್ನಲ್ಲೇ ಶಿರಸಿ (sirsi)ಸಹಾಯಕ ಆಯುಕ್ತರು ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಏಳು ದಿನದೊಳಗೆ ಹೊಸ ಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡುವ ಆಶ್ವಾಸನೆಯನ್ನು ನೀಡಿದ್ದು ಏಳು ದಿನದೊಳಗೆ ದೇವಿಮನೆ ಘಟ್ಟ
10:48 PM May 24, 2025 IST | ಶುಭಸಾಗರ್
ಶಿರಸಿ:- ದೇವಿಮನೆ ಘಟ್ಟ ಭಾಗದಲ್ಲಿ ಬೆಣ್ಣೆಹೊಳೆಯ ನೀರು ಹರಿದು ತಾತ್ಕಾಲಿಕ ರಸ್ತೆ ಕೊಚ್ಚಿಹೋದ ಬೆನ್ನಲ್ಲೇ ಶಿರಸಿ (sirsi)ಸಹಾಯಕ ಆಯುಕ್ತರು ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಏಳು ದಿನದೊಳಗೆ ಹೊಸ ಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡುವ ಆಶ್ವಾಸನೆಯನ್ನು ನೀಡಿದ್ದು ಏಳು ದಿನದೊಳಗೆ ದೇವಿಮನೆ ಘಟ್ಟ
sirsi ಕೊಚ್ಚಿಹೋದ ದೇವಿಮನೆ ರಸ್ತೆಗೆ ಒಂದುವಾರ ಗಡುವು  ಶಾಸಕ ಎಸಿ ಗೆ ಸಿಕ್ಕು ಅಧಿಕಾರಿಗಳ ಆಶ್ವಾಸನೆ

Sirsi:ಕೊಚ್ಚಿಹೋದ ದೇವಿಮನೆ ರಸ್ತೆಗೆ ಒಂದುವಾರ ಗಡುವು- ಶಾಸಕ,ಎಸಿ ಗೆ ಸಿಕ್ಕು ಅಧಿಕಾರಿಗಳ ಆಶ್ವಾಸನೆ!

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

ಶಿರಸಿ:- ದೇವಿಮನೆ ಘಟ್ಟ ಭಾಗದಲ್ಲಿ ಬೆಣ್ಣೆಹೊಳೆಯ ನೀರು ಹರಿದು ತಾತ್ಕಾಲಿಕ ರಸ್ತೆ ಕೊಚ್ಚಿಹೋದ ಬೆನ್ನಲ್ಲೇ ಶಿರಸಿ ಸಹಾಯಕ ಆಯುಕ್ತರು ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಏಳು ದಿನದೊಳಗೆ ಹೊಸ ಸೇತುವೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡುವ ಆಶ್ವಾಸನೆಯನ್ನು ನೀಡಿದ್ದು ಏಳು ದಿನದೊಳಗೆ ದೇವಿಮನೆ ಘಟ್ಟ ಭಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದಿದ್ದಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.

ಶಿರಸಿ ಕುಮಟಾ ಮಾರ್ಗದ ಅವಾಂತರ; ಆರ್ ಎನ್ ಎಸ್ ನಿರ್ಲಕ್ಷ್ಯಕ್ಕೆ ಭೀಮಣ್ಣ ಕೆಂಡಾಮಂಡಲ

ಶಿರಸಿಯ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿದ ಸಂದರ್ಭ

ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಸುತ್ತಿರುವ ಆರ್ ಎನ್ ಎಸ್ ಕಂಪನಿ ಬೇಜವಬ್ದಾರಿ ಕಾಮಗಾರಿಗಳ ವಿರುದ್ಧ  ಶಾಸಕ ಭೀಮಣ್ಣ ನಾಯ್ಕ ಆಕ್ಷೇಪ, ಅಸಮಧಾನ ವ್ಯಕ್ತಪಡಿಸಿ ಸ್ಥಳೀಯ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಭಿವೃದ್ಧಿ‌ ಕಾಮಗಾರಿ ನಿರ್ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರಕ್ಕೆ ಶನಿವಾರ ತಾಕೀತು ಮಾಡಿದರು.

ಇದನ್ನೂ ಓದಿ:-Sirsi : ಶಿರಗುಣಿ ಗ್ರಾಮಕ್ಕಿಲ್ಲ ಮೂಲ ಸೌಕರ್ಯ- ಬದುಕಲು ಬಿದಿರ ಗಳವೇ ಗತಿ! 

ಶುಕ್ರವಾರ ತಾಲೂಕಿನ ಬಂಡಲ ಹಾಗೂ ರಾಗಿಹೊಸಳ್ಳಿ ನಡುವಿನ ನಿರ್ಮಾಣ ಹಂತದಲ್ಲಿ ಇರುವ ಬೆಣ್ಣೆ ಹಳ್ಳ ಸೇತುವೆ ಪಕ್ಕ ಹಾಕಲಾಗಿದ್ದ ತಾತ್ಕಾಲಿಕ ಸೇತುವೆ  ಅತಿ‌ ಮಳೆಗೆ ತೊಳೆದು ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅವರು, ನಿರ್ಮಾಣ ಹಂತದಲ್ಲಿನ ಸೇತುವೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆಪಡೆದ ಕಂಪನಿ ಕಾರ್ಯ ಬೇಗ ಮುಗಿಸಲು ಅನುಕೂಲ ಆಗಲು ಆರು ತಿಂಗಳುಗಳ ಕಾಲ ಸಂಚಾರ ನಿರ್ಬಂಧವನ್ನು ಜಿಲ್ಲಾಡಳಿತದಿಂದ ಹೇರಲಾಗಿತ್ತು. ಆದರೂ ಕೆಲಸ ವೇಗವಾಗಿ ಮಾಡಲಾಗುತ್ತಿಲ್ಲ ಎಂದು ಅಸಮಧಾನಿಸಿದರು.

ಪ್ರಕೃತಿ ಮೆಡಿಕಲ್ ,ಕಾರವಾರ.

ಈ ಮಾರ್ಗದಲ್ಲಿ ಹಲವರು ಸಂಚಾರ ನಿರ್ಬಂಧ ಬೇಡ ಎಂದರೂ ಕೆಲಸ ಬೇಗ ಆಗಲಿ ಎಂದು ಎಲ್ಲರನ್ನೂ ಎದುರು ಹಾಕಿಕೊಂಡು ಸಂಚಾರ ನಿರ್ಬಂಧ ಮಾಡಿಸಿದೆವು. ಈಗ ಏನು ಉತ್ತರ ಕೊಡೋಣ ಅವರಿಗೆಲ್ಲ ಎಂದು ಹರಿಹಾಯ್ದ ಶಾಸಕರು,

ಕೇವಲ ಬೆಣ್ಣೆಹೊಳೆ ಸೇತುವೆ ಅಲ್ಲ,  ಉಳಿದ ಚಳ್ಳೆ ಹಳ್ಳ, ಮೊಸಳೆಗುಂಡಿ, ಚಂಡಮುರಕನಹಳ್ಳ ಸೇತುವೆಗಳ ಕಾಮಗಾರಿಯೂ ಹಾಗೇ ಇದೆ. ಸಮಯ ಕೊಟ್ಟರೂ ಅವಧಿಯೊಳಗೆ ಪೂರ್ಣ ಮಾಡಿಲ್ಲ ಎಂದರೆ ಇಷ್ಟೊಂದು ದೊಡ್ಡ ಗುತ್ತಿಗೆ ಸಂಸ್ಥೆ ಆಗಿಯೂ ಹೀಗಾದರೆ ಹೇಗೆ ಎಂದೂ ಕೇಳಿದರು.

ಇದನ್ನೂ ಓದಿ:-Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ – ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ 

ಬುಧವಾರದಿಂದ ಬೆಣ್ಣೆಹೊಳೆ ಸೇತುವೆ ಲಘು ವಾಹನಗಳಿಗೆ ತೆರವು ಮಾಡುವದಾಗಿ ಆರ್ ಎನ್ ಎಸ್ ಇಂಜನೀಯರ್ ನಿತಿನ್, ವಿಶ್ವನಾಥ ಶೇಟ್ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯೆ‌ ನೀಡಿದಾಗ ಶಾಲೆಗಳು ಆರಂಭವಾದ ಬಳಿಕವೂ ಆ ಮಕ್ಕಳಿಗೆ ಕೂಡ ತೊಂದರೆ ಆಗಬಾರದು. ಆ ಬಗ್ಗೆ ಕೂಡ ಈಗಿನಿಂದಲೇ ಲಕ್ಷ್ಯ ಹಾಕಬೇಕು, ರೈತರಿಗೆ, ಕಾರ್ಮಿಕರಿಗೆ ರಾಗಿಸಹೊಳ್ಳಿ, ಬಂಡಲ‌ ಸಂಪರ್ಕ ಸಮಸ್ಯೆ ಆಗದಂತೆ ಕೂಡ ನೋಡಿಕೊಳ್ಳಬೇಕು. ರೇಷನ್ ತರಲೂ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸ್ಥಳದಲ್ಲಿದ್ದ ಎಸಿ ಕಾವ್ಯಾರಾಣಿ ಕೆ. ಹಾಗೂ ವಾಯುವ್ಯ ಸಾರಿಗೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸಂಪರ್ಕ ಕಡಿತ

Kumta: ಕೊಚ್ಚಿಹೋದ ದೇವಿಮನೆ ಘಟ್ಟ ರಾಷ್ಟ್ರೀಯ  ಹೆದ್ದಾರಿ

ಶಿರಸಿ (sirsi)-ಕುಮಟಾ ಮಾರ್ಗದಲ್ಲಿ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ ಕೊಚ್ಚಿಹೋದ  ಕಾರಣದಿಂದ ಶಿರಸಿ ಕುಮಟಾ ಮಾರ್ಗ ಸಂಪರ್ಕ ಕಡಿತವಾಗಿದೆ. ಜೊತೆಗೆ ಹೆಬ್ರೆ ಹಾಗೂ ರಾಗಿಹೊಸಳ್ಳಿ, ಮುಂಡಗಾರು, ದೇವಿಮನೆ ಗ್ರಾಮಗಳಿಗೆ ಬಂಡಲ, ಶಿರಸಿ ಕಡಿತವಾಗಿದೆ.

ಸಹಾಯಕ ಆಯುಕ್ತರ ಭೇಟಿ-ಸ್ಥಳ ಪರಿಶೀಲನೆ

ಶಿರಸಿ ಎಸಿ ಭೇಟಿ ನೀಡಿದ ಸಂದರ್ಭ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶಿರಸಿ-ಕುಮಟಾ ಮಾರ್ಗದ ರಾಷ್ಟ್ರೀಯ ಹೆದ್ದಾರಿ 766E ರಸ್ತೆ ಬೆಣ್ಣೆಹೊಳೆ ನೀರಿನಿಂದ ಕೊಚ್ಚಿಹೋಗಿ  ಸಂಚಾರ ಸ್ಥಗಿತವಾದ ಹಿನ್ನಲೆಯಲ್ಲಿ ಶಿರಸಿಯ ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಸ್ಥಳಕ್ಕೆ ಭೇಡಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ನಿನ್ನೆ ದಿನ ಬೆಣ್ಣೆಹೊಳೆ ಹಳ್ಳದ ನೀರು ಬಂದು ಶಿರಸಿ-ಕುಮಟಾ ಹೆದ್ದಾರಿಯ ತಾತ್ಕಾಲಿಕ ರಸ್ತೆ (road) ಕೊಚ್ಚಿಹೋಗಿತ್ತು.

ಈ ಹಿನ್ನಲೆಯಲ್ಲಿ ಏಳು ದಿನದ ಒಳಗೆ ಸೇತುವೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಸದ್ಯ ಈ ರಸ್ತೆ ಸಂಪೂರ್ಣ ಬಂದ್ ಇದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ