Haliyala|ಕೆಲವು ಜನ ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ ಆರ್ ವಿ ದೇಶಪಾಂಡೆ ಹೇಳಿದ್ಯಾರಿಗೆ?
HALIYALA NEWS :-ರಾಜಕೀಯ ಕ್ಷೇತ್ರ ರಾಜಕೀಯ ಜನರಿಗೆ ಬಿಟ್ಟರೆ ಒಳ್ಳೆಯದು.ಇದರಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ ಅನವಶ್ಯಕವಾಗಿ ಗೊಂದಲ ನಿರ್ಮಾಣವಾಗುತ್ತೆ ಎಂದು ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ (RV Deshpande) ಸ್ವಾಮೀಜಿಗಳು ಮಾತಗಳಿಗೆ ಅಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:-Haliyala:ಬುರ್ಖಾ ಧರಿಸಿ ಬಂದ್ರು 22 ಲಕ್ಷಕ್ಕೂ ಹೆಚ್ಚು ಬಂಗಾರ ಬಾಚಿ ಹೋದರು!
ಇಂದು ಹಳಿಯಾಳದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಯಾವ ಮಂತ್ರಿ ಮಂಡಲದ ವಿಸ್ತರಣೆ ಇಲ್ಲಾ,ರಾಜ್ಯದಲ್ಲಿ ಯಾವ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬದಲಾವಣೆ ಇಲ್ಲಾ.ಈಗಾಗಲೇ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ.ಸಚಿವ ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾದ ಜಾಗವನ್ನ ತುಂಬೋದಾಗಿ ಹೇಳಿದ್ದಾರೆ.
ಇದನ್ನೂ ಓದಿ:-HALIYALA |ಪೊಲೀಸಪ್ಪನ ಮನೆಯ ಮುಂದೆ ಬಿದ್ದ ಮಗುವಿನ ಪಿಂಡ ಯಾರದ್ದು!ಪಿಂಡದ ಮೂಲಕ್ಕಾಗಿ ರೈತ ಸಂಘ ದೂರು ಏಕೆ?
ಮುಖ್ಯಮಂತ್ರಿಗಳ ಮಾತಿಗೆ ಗೌರವ ಕೊಟ್ಟು ಉಳಿಬೇಕು.ಕೆಲವು ಜನ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ.ಅವರ ವೋಟು ಇರೋದಿಲ್ಲ, ಅವರು ಎಂಎಲ್ಎ ಇರೋದಿಲ್ಲ.
ರಾಜಕೀಯ ಕ್ಷೇತ್ರ ರಾಜಕೀಯ ಜನರಿಗೆ ಬಿಟ್ಟರೆ ಒಳ್ಳೆಯದು ಇದರಲ್ಲಿ ಬೇರೆಯವರ ಹಸ್ತಕ್ಷೇಪ ಇರಬಾರದು , ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ ,ಹಾಗಾದ್ರೆ ನನಗೆ ಚೀಫ್ ಮಿನಿಸ್ಟರ್ ಮಾಡಿದ್ದಾರೆಯೇ ? ಪಕ್ಷದ, ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತೆ.ಎಲ್ಲರ ಅಭಿಪ್ರಾಯ ತೆಗೆದುಕೊಂಡು ನಿರ್ಧಾರ ಮಾಡುತ್ತೆ.
ಕೆಪಿಸಿಸಿ ಅಧ್ಯಕ್ಷರು ಅವ್ರೆ ಮುಂದುವರಿಯಬೇಕು.
ಅವರು ರಾಜೀನಾಮೆ ನೀಡಿದರೆ ಬೇರೆ ಬದಲಾವಣೆ ಮಾಡಬಹುದು ಎಂದರು.