Sirsi |ಕಾಗೇರಿಗೆ ಕೈ ಕೊಟ್ರ ಹೆಬ್ಬಾರ್! ಹೇಳಿದ್ರು ಅಸಮಧಾನದ ಗುಟ್ಟು! ಏನಂದ್ರು ವಿವರ ನೋಡಿ
ಕಾರವಾರ:-ನಾನು ಕಾಂಗ್ರೆಸ್ ಗೆ (congress) ಸೇರ್ಪಡೆ ಆಗುತ್ತೇನೆ ಎಂದು ಅವರಿಗೆ ಅರ್ಜಿ ಕೊಡಲು ಹೋಗಿಲ್ಲ.ನಾನು ಸೇರ್ಪಡೆ ಗೊಳ್ಳುತ್ತೇನೋ ಇಲ್ಲವೋ ಅನ್ನೋದನ್ನ ಹೇಳುತ್ತೇನೆ.
ನನ್ನ ಬೆಂಬಲಿಗರಿಂದ ಕಾಂಗ್ರೆಸ್ ಸೇರುವ ನಿರ್ಣಯ ಅರ್ಜೆಂಟ್ ಆಗಬಹುದು.ಬಿಜೆಪಿ ಯಿಂದ
ಅಂತರವನ್ನು ಕಾಯ್ದುಕೊಳ್ಳುವ ಸಂದರ್ಭ ಬಂದಾಗ ಕಾಯ್ದುಕೊಳ್ಳಲೇ ಬೇಕು ಎಂದು ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Mla shivaram hebbar) ಹೇಳಿದರು.
ಶಿರಸಿಯಲ್ಲಿ ತಾವು ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಯಾವ ರಾಜಕೀಯ ಪಕ್ಷಗಳು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ,ಎಲ್ಲಾ ರಾಜಕೀಯ ಪಕ್ಷಗಳಿಗೂ ಹೋಗ್ತಾರೆ,ಬರ್ತಾರೆ, ಕಾಂಗ್ರೆಸ್ ನವರು ಬಿಜೆಪಿಗೆ ಬರ್ತಾರೆ,ಬಿಜೆಪಿಯವರು ಕಾಂಗ್ರೆಸ್ ಗೆ ಬರ್ತಾರೆ.ಗುಜರಾತ್ ,ಹಿಮಾಚಲ ಪ್ರದೇಶ ದಲ್ಲಿ ಏನಾಯ್ತು?ನಾನು ಒಂದು ಓಟ್ ಹಾಕದಿದ್ದಕ್ಕೆ ಮಾತನಾಡುತ್ತಾರೆ.ಅವರು ಆರು ಓಟು ಹಾಕಿ ಸಸ್ಪೆಂಡ್ ಆದರಲ್ಲಾ ಅದರಬಗ್ಗೆ ಯಾರು ಮಾತನಾಡುವುದಿಲ್ಲ.
ಇದನ್ನೂ ಓದಿ:-Sirsi ಕಾಂಗ್ರೆಸ್ ಕಚೇರಿಯಲ್ಲಿ ಶಿವರಾಮ್ ಹೆಬ್ಬಾರ್ ಗೆ Pay Money ಕಾಟ!
ನೀತಿ ಎಂದರೇ ಕರ್ನಾಟಕಕ್ಕೂ (Karnataka) ಒಂದೇ ಇರಬೇಕು,ಮಹಾರಾಷ್ಟ್ರ, ಗುಜರಾತ್ ಹಿಮಾಚಲ ಪ್ರದೇಶಕ್ಕೂ ಒಂದೇ ಇರಬೇಕು ಎಂದರು. ಇನ್ನು ಬಿಜೆಪಿ ಲೋಕಸಭಾ ಅಭ್ಯರ್ಥಿ ಕಾಗೇರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಭ್ಯರ್ಥಿ ಆಗಿದ್ದಾರೆ ಕೆಲಸ ಮಾಡುತ್ತಾರೆ.ನಾನು ಯಾರಪರ ಕೆಲಸ ಮಾಡಬೇಕು ಎಂಬ ನಿರ್ಣಯ ಮಾಡಿ ಹೇಳುತ್ತೇನೆ.ಯಾರ ಸಮಾಧಾನ ,ಅಸಮಧಾನ ಹೈಕಮಾಂಡ್ ಕೇಳುವುದಿಲ್ಲ,ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ.
ನನಗೆ ಸಮಾಧಾನ ಆಗಿಲ್ಲ ಎಂದರ ಅವರು ಬದಲಿಸುತ್ತಾರಾ ?ಅವರಿಗೆ ಸಮಾಧಾನಕ್ಕೆ ಮಾಡಿಕೊಳ್ಳುತ್ತಾರೆ ಎಂದು ತಮ್ಮ ಎಂದಿನ ಅಸಮಧಾನ ಹೊರಹಾಕಿದ್ರು.