Karnataka|ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು ! ಬ್ರಾಹ್ಮಣರ ಜನಿವಾರಕ್ಕೂ ಬಂತು ಕುತ್ತು!?
ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳು ! ಬ್ರಾಹ್ಮಣರ ಜನಿವಾರಕ್ಕೂ ಬಂತು ಕುತ್ತು!?
ಶಿವಮೊಗ್ಗ/ಬೀದರ್ :- ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆಗೆ ಹಾಜರಾಗುವಾಗ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದೆಂಬ ನಿಯಮವಿದೆ ಆದರೆ ಈ ನಿಯಮದಲ್ಲಿ ಇರುವಂತೆ ನಡೆದುಕೊಳ್ಳುವ ಬದಲು ವಿದ್ಯಾರ್ಥಿಗಳ ಧಾರ್ಮಿಕ ಹಕ್ಕನ್ನೇ ಕಿತ್ತುಕೊಂಡ ಘಟನೆ ಶಿವಮೊಗ್ಗ ಹಾಗೂ ಬೀದರ್ ನಲ್ಲಿ ನಡೆದಿದೆ.
ಏ.17 ರಂದು ಶಿವಮೊಗ್ಗ ನಗರದ ಜೆ.ಎನ್.ಕಾಲೇಜಿನಲ್ಲಿ ನಡೆಯುತಿದ್ದ CET ಪರೀಕ್ಷೆಗೆ ಬ್ರಾಹ್ಮಣ ವಿದ್ಯಾರ್ಥಿಯೊಬ್ಬ ಹಾಜುರಾದಾಗ ಅಲ್ಲಿನ ಸೆಕ್ಯುರಿಟಿ ಹಾಗೂ ಅಧಿಕಾರಿಗಳು ಆತ ಹಾಕಿದ್ದ ಜನಿವಾರನ್ನು ತೆಗೆಸಿದ್ದಾರೆ. ಜನಿವಾರ ಹಾಕಿದರೇ ಸಿಇಟಿ ಪರೀಕ್ಷೆ ಬರೆಯಲು ಕೊಡುವುದಿಲ್ಲ ಎಂದು ಆತನಿಗೆ ಗದರಿಸಿದ್ದು ಜನಿವಾರ ತೆಗೆದಿಟ್ಟು ಪರೀಕ್ಷೆ ಬರೆಯಲು ತೆರಳಲು ಬಲವಂತ ಮಾಡಿದ್ದು ,ವಿದ್ಯಾರ್ಥಿ ಅನಿವಾರ್ಯವಾಗಿ ಜನಿವಾರ ತೆಗೆದಿಟ್ಟು ಪರೀಕ್ಷಾ ಕೇಂದ್ರಕ್ಕೆ ತೆರಳುವಂತೆ ಮಾಡಿ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ. ಇದಲ್ಲದೇ ಕೆಲವರಿಗೆ ಜನಿವಾರ ಕತ್ತರಿಸಲು ಕತ್ತರಿ ಹಿಡಿದಿದ್ದರು ಎಂದು ಅಖಿಲ ಭಾರತ ಬ್ರಾಹ್ಮಣ ಸಂಘ ದೂರಿದೆ. ಈ ಘಟನೆ ಕುರಿತು ಶಿವಮೊಗ್ಗದ ಜಿಲ್ಲಾಧಿಕಾರಿರವರಿಗೆ ಬ್ರಾಹ್ಮಣ ಸಂಘ ಮನವಿ ಸಲ್ಲಿಸಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಬೀದರ್ (Bedar) ನಲ್ಲೂ ಜನಿವಾರ ತೆಗೆಸಲು ಮುಂದಾದ ಅಧಿಕಾರಿಗಳು! ಪರೀಕ್ಷೆ ಬರೆಯದೇ ಬಂದ ವಿದ್ಯಾರ್ಥಿ
ಬೀದರ್ ನ ಗುಂಪಾ ಬಳಿ ಇರುವ ಸಾಯಿ ಸ್ಪೂರ್ತಿ ಕಾಲೇಜಿನಲ್ಲಿ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಅವಕಾಶ ನೀಡದ ಕಾಲೇಜು ಸಿಬ್ಬಂದಿಗಳು ಜನಿವಾರ ತೆಗೆಯುವಂತೆ ಹೇಳಿದ್ದಾರೆ. ಜನಿವಾರ ತೆಗೆಯಬೇಕು ಎಂಬ ಯಾವ ಸುತ್ತೋಲೆಯೂ ಇಲ್ಲ ಎಂದು ಪ್ರತಿಭಟಿಸಿದ್ದಕ್ಕೆ ಅಲ್ಲಿನ ಸಿಬ್ಬಂದಿಗಳು ನೀನು ಹಾಕಿಕೊಂಡ ಜನಿವಾರದ ದಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುವುದು ಎಂದು ಅಣಕಿಸಿದ್ದಾರೆ ಎಂದು ವಿದ್ಯಾರ್ಥಿಯ ತಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿ:-Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.
ಇನ್ನು ಜನಿವಾರ ತೆಗೆಯಲೇ ಬೇಕು ಎಂದು ಹಟಕ್ಕೆ ಬಿದ್ದಿದ್ದರಿಂದ ಆ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಹಿರಬಂದಿದ್ದಾರೆ. ಈ ಹಿಂದೆ ಇದೇ ಪರೀಕ್ಷಾ ಕೇಂದ್ರದಲ್ಲಿ ಎರಡು ಪರೀಕ್ಷೆಯನ್ನು ಬರೆದಿದ್ದ ಈ ವಿದ್ಯಾರ್ಥಿಗೆ ಆಗ ಕೇಳದ ಸಿಬ್ಬಂದಿ ಎರಡು ಪರೀಕ್ಷೆ ನಂತರ ಕೇಳಿದ್ದಾರೆ. ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತ ಈ ಬಡ ಬ್ರಾಹ್ಮಣ ವಿದ್ಯಾರ್ಥಿ ಆಸೆ ಮಣ್ಣುಪಾಲಾಗಿದೆ.
ಸರ್ಕಾರ ಬ್ರಾಹ್ಮಣರಿಗೆ ಯಾವ ಸೌಲತ್ತನ್ನೂ ನೀಡುವುದಿಲ್ಲ. ರಾಜ್ಯದಲ್ಲಿ ಶೋಷಿತ ಜನಾಂಗವಾಗಿರುವ ಬ್ರಾಹ್ಮಣ ಸಮುದಾಯ ತಮ್ಮ ಜ್ಞಾನದ ಶಕ್ತಿಯಿಂದಲೇ ಮುಂದುವರೆದವರು. ಹೀಗಿರುವಾಗ ಬ್ರಾಹ್ಮಣ ಜನರನ್ನು ಕರ್ನಾಟಕ ಸರ್ಕಾರ ತುಳಿದು ಹಾಕಲು ಪ್ರಯತ್ನಿಸುತ್ತಿದೆಯಾ ಎಂಬ ಅನುಮಾನ ಮೂಡುತಿದ್ದು ವಿದ್ಯಾರ್ಥಿಗಳ ಭವಿಷ್ಯದ ಕನಸು ಕಸಿದುಕೊಂಡ ಹಲಾಲುಕೋರ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬೇಕಿದೆ.
ಮುಂದೆ ಸುಮ್ಮನಿದ್ದರೇ ಸರ್ಕಾರ ಅಳಿದುಳಿದ ಬ್ರಾಹ್ಮಣರ ಸಂಸ್ಕೃತಿಯನ್ನು ಹಾಳುಮಾಡಿ ನುಂಗಿ ನೀರುಕುಡಿಯುವುದರಲ್ಲಿ ಅನುಮಾನವಿಲ್ಲ. ಇನ್ನಾದರೂ ಬ್ರಾಹ್ಮಣರು ಎಚ್ಚೆತ್ತುಕೊಳ್ಳಬೇಕು . ಮಠ ಮಾನ್ಯಗಳು ಇದರ ವಿರುದ್ಧ ಧ್ವನಿ ಎತ್ತಬೇಕಿದೆ.