Haveri: ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಕಂಡಕ್ಟರ್ !
ಹಾವೇರಿ:-ಹಾವೇರಿಯಲ್ಲಿ(Haveri) ಕಂಡಕ್ಟರ್ ಕಂ ಡ್ರೈವರ್ ಸಾರಿಗೆ ಬಸ್ (bus)ನಿಲ್ಲಿಸಿ, ಮಾರ್ಗದ ಮಧ್ಯದಲ್ಲಿ ನಮಾಜ್ ಮಾಡಿದ ಘಟನೆ ನಡೆದಿದ್ದು ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿದೆ.
Haveri: ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಕಂಡಕ್ಟರ್ !
Advertisement
ಹಾವೇರಿ:-ಹಾವೇರಿಯಲ್ಲಿ(Haveri) ಕಂಡಕ್ಟರ್ ಕಂ ಡ್ರೈವರ್ ಸಾರಿಗೆ ಬಸ್ (bus)ನಿಲ್ಲಿಸಿ, ಮಾರ್ಗದ ಮಧ್ಯದಲ್ಲಿ ನಮಾಜ್ ಮಾಡಿದ ಘಟನೆ ನಡೆದಿದ್ದು ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಟು ವಿಶಾಲಗಡ್ ಬಸ್ ಡ್ರೈವರ್ ಕಂ ಕಂಡಕ್ಟರ್ ನಿನ್ನೆ ಸಂಜೆ ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದನು.
ಪ್ರಯಾಣಿಕರನ್ನ ಬಸ್ ನಲ್ಲಿ ಇದ್ದರೂ ನಮಾಜ್ ಮಾಡಿದ ಡ್ರೈವರ್ ನ ಈ ದೃಶ್ಯವನ್ನು ಪ್ರಯಾಣಿಕನೊಬ್ಬ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಕರ್ತವ್ಯದ ಅವಧಿಯಲ್ಲಿಯೇ ನಮಾಜ್ ಮಾಡಿದ್ದು ,ಪ್ರಯಾಣಿಕರಿಗೆ ಸಮಯ ವ್ಯರ್ಥವಾಗುವಂತೆ ಮಾಡಿದ್ದಲ್ಲದೇ ಕರ್ತವ್ಯ ಲೋಪ ವೆಸಗಿದ್ದಾನೆ. ಸದ್ಯ ಈ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.