For the best experience, open
https://m.kannadavani.news
on your mobile browser.
Advertisement

Karnataka :ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಎರಡನೇ ಅತ್ಯಾ**ರ ಪ್ರಕರಣ ರದ್ದುಪಡಿಸಿದ  ಕೋರ್ಟ

ಬೆಂಗಳೂರು: ಶಿವಮೊಗ್ಗ(shivamogga) ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿರವರ(Ragaveshwara Barathi swamiji) ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.
09:27 PM Mar 07, 2025 IST | ಶುಭಸಾಗರ್
karnataka  ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಎರಡನೇ ಅತ್ಯಾ  ರ ಪ್ರಕರಣ ರದ್ದುಪಡಿಸಿದ  ಕೋರ್ಟ

 Karnataka:ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಎರಡನೇ ಅತ್ಯಾ**ರ ಪ್ರಕರಣ ರದ್ದುಪಡಿಸಿದ  ಕೋರ್ಟ

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು: ಶಿವಮೊಗ್ಗ(shivamogga) ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿರವರ(Ragaveshwara Barathi swamiji) ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣವನ್ನು  ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

Advertisement

2024ರ ಜೂನ್‌ 11 ರಂದು ಕಾಯ್ದಿರಿಸಿದ್ದ ಆದೇಶವನ್ನು ಸುಮಾರು ಎಂಟು ತಿಂಗಳ ನಂತರ ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಪಡಿಸಿ ಆದೇಶಿಸಿದೆ.

ಇದನ್ನೂ ಓದಿ:-Gokarna ಆರೋಗ್ಯ ಕೇಂದ್ರದಲ್ಲಿದ್ದ ಕೋಟಿ ಮೌಲ್ಯದ ಪುರಾತನ ಬುದ್ದನ ಲೋಹ ಶಿಲ್ಪ ಕಾಣೆ!

ಬೆಂಗಳೂರಿನ ಗಿರಿನಗರದಲ್ಲಿ ತಮ್ಮ ಮೇಲೆ ರಾಘವೇಶ್ವರ ಭಾರತೀ ಸ್ವಾಮೀಜಿ ಅತ್ಯಾಚಾರ ಎಸಗಿದ್ದರು ಎಂದು 29/08/2015 ರಂದು ಸಂತ್ರಸ್ತೆ ಪಲ್ಲವಿ ಮತ್ತಿಗಟ್ಟ ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ತನಿಖೆ ನಡೆಸಿದ್ದ ಸಿಐಡಿಯ (CID)ವಿಶೇಷ ತನಿಖಾ ದಳವು 07/09/2018ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.

ಇದರ ಬೆನ್ನಲ್ಲೇ ಶ್ರೀಗಳು ದೂರು ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಪ್ರಕ್ರಿಯೆ ರದ್ದುಪಡಿಸಬೇಕು ಎಂದು  ಹೈಕೋರ್ಟ್‌ಗೆ ಕೋರಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

ಇದನ್ನೂ ಓದಿ:-Gokarna ಮಹಾಬಲೇಶ್ವರ ದರ್ಶನಕ್ಕೆ ಹೊರಟ ಆಧುನಿಕ ಶ್ರವಣ ಕುಮಾರ- ತಾಯಿಯೊಂದಿಗೆ ಬಜಾಜ್ ಚೇತಕ್ ನಲ್ಲಿ 78,162km ಪ್ರಯಾಣ

2006ರಲ್ಲಿ ಮಠದಲ್ಲಿ 10ನೇ ತರಗತಿ ಓದುತ್ತಿರುವಾಗ ಚಾತುರ್ಮಾಸ ನಡೆಯುತ್ತಿದ್ದಾಗ ಮತ್ತು 2012ರ ಆಗಸ್ಟ್‌ನಲ್ಲಿ ಚಾತುರ್ಮಾಸ ನಡೆಯುತ್ತಿದ್ದಾಗ ಬೆಂಗಳೂರಿನ ಗಿರಿನಗರದಲ್ಲಿ ತಾವು ತಂಗಿದ್ದ ಕೊಠಡಿಗೆ ಕರೆಸಿಕೊಂಡು ಸ್ವಾಮೀಜಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿದ್ದರು.

ಈ ಹಿಂದೆ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ ಪ್ರೇಮಲತಾ  ಮಾಡಿದ್ದ ಅತ್ಯಾಚಾರ ಆರೋಪದ ಸಂಬಂಧಿತ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿತ್ತು.

ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತ್ರಸ್ತೆಯ ಪತಿ ಮಂಜುನಾಥ್‌ ಹೆಬ್ಬಾರ್‌ ವಿರುದ್ದ ಐಪಿಸಿ ಸೆಕ್ಷನ್‌ 323, 376, 376(2)(f)(i)(n), 498ಎ ಮತ್ತು 109 ಅಡಿ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ 2021ರ ಡಿಸೆಂಬರ್‌ 13ರಂದು ರದ್ದುಪಡಿಸಿತ್ತು.

ಪ್ರತಿ ಸುದ್ದಿಗಳನ್ನು ತಿಳಿಯಲು ನಮ್ಮ WhatsApp ಗ್ರೂಪ್ ಗೆ ಸೇರಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

https://chat.whatsapp.com/I9e9naeoaWz5LlpJWkDBli

ಕನ್ನಡವಾಣಿ ಗೂಗಲ್ ಆಪ್ ನಲ್ಲಿಯೂ ಲಭ್ಯ - ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿ.

Kannadavani
https://play.google.com/store/apps/details?id=com.kannadavani.app
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ