ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar:ಶಾಸಕ ಸೈಲ್ ಬಂಧಿಸಿದ ಇಡಿ ಅಧಿಕಾರಿಗಳು.

ಕಾರವಾರ :- ಕಾರವಾರದ ಶಾಸಕ ಸತೀಶ್ ಸೈಲ್ ರನ್ನು ಸೋಮವಾರ  ರಾತ್ರಿ  ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೋಟಿಸ್ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.
09:14 PM Sep 09, 2025 IST | ಶುಭಸಾಗರ್
ಕಾರವಾರ :- ಕಾರವಾರದ ಶಾಸಕ ಸತೀಶ್ ಸೈಲ್ ರನ್ನು ಸೋಮವಾರ  ರಾತ್ರಿ  ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೋಟಿಸ್ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.

ಕಾರವಾರ :- ಕಾರವಾರದ ಶಾಸಕ ಸತೀಶ್ ಸೈಲ್ ರನ್ನು ಸೋಮವಾರ  ರಾತ್ರಿ  ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೋಟಿಸ್ ನೀಡಿದರೂ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.

Advertisement

ಆಗಷ್ಟ್ 13 ರಂದು ಮುಂಜಾನೆ ಶಾಸಕ ಸೈಲ್ ರ ಚಿತ್ತಾಕುಲದ ಮನೆಯ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿ ಕೇಶವ್ ರಾವ್ ನೇತ್ರತ್ವದ ಏಳು ಜನರ ತಂಡ ದಾಳಿ ನಡೆಸಿತ್ತು.

ಎರಡು ದಿನ 22 ತಾಸುಗಳು ಮನೆಯಲ್ಲಿ ಶೋಧ ನಡೆಸಿತ್ತು.

1.68 ಕೋಟಿ ನಗದು, 6,20,45,319 ರೂ ಮೌಲ್ಯದ 6.75 ಕೆ.ಜಿ ಚಿನ್ನ , ಒಟ್ಟು 14.13 ಕೋಟಿ ರೂ ಮೌಲ್ಯದ ಸೊತ್ತನ್ನು ಫ್ರೀಝ್ ಮಾಡಿದ್ದ ಇಡಿ,2010 ರಲ್ಲಿ ಮಲ್ಲಿಕಾರ್ಜುನ್ ಶಿಪ್ಪಿಂಗ್ ಕಂಪನಿ ಮೂಲಕ ಸೈಲ್ ನಡೆಸಿದ್ದ ಅವ್ಯವಹಾರ ಸಂಬಂಧ ರೈಡ್ ನಡೆಸಿತ್ತು.

Advertisement

ಇದೇ ಸಂದರ್ಭದಲ್ಲಿ ಬಳ್ಳಾರಿ ಗಣಿ ಧಣಿಗಳ ಮನೆಗೂ ರೈಡ್ ಮಾಡಿದ್ದ ಇಡಿ ಹಲವು ದಾಖಲೆ ವಶಕ್ಕೆ ಪಡೆದಿತ್ತು.

ದಾಳಿ ನಂತರ ಶಾಸಕ ಸೈಲ್ ಗೆ ತನಿಖೆಗೆ ಹಾಜುರಾಗುವಂತೆ ನೋಟೀಸ್ ನೀಡಿತ್ತು.ಅನಾರೋಗ್ಯ ಕಾರಣ ಹೇಳಿ ತನಿಖೆಗೆ ಹಾಜುರಾಗಲು ವಿಳಂಬ ಮಾಡಿದ್ದ ಶಾಸಕ ಸೈಲ್ ಬೆಂಗಳೂರಿನಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತಿದ್ದರು.

ಆದರೇ ಇದೀಗ ಬೆಂಗಳೂರಿನಲ್ಲೇ ಅವರನ್ನು ಬಂಧಿಸಲಾಗಿದ್ದು ನಾಳೆ ನ್ಯಾಯಾಲಯಕ್ಕೆ ಹಾಜುರು ಪಡಿಸಲಿದ್ದಾರೆ.

Advertisement
Tags :
ED investigationKarnatakaKarnataka newsKarwar mla sathish sailMla sathish sail
Advertisement
Next Article
Advertisement