Karnataka|ಲಿಂಗನಮಕ್ಕಿ ,ಗೇರುಸೊಪ್ಪ ಡ್ಯಾಮ್ ನಿಂದ ನೀರು ಬಿಡುಗಡೆ-ಜೀವಕಳೆ ಪಡೆದುಕೊಂಡ ಜೋಗ ಜಲಪಾತ.
ಲಿಂಗನಮಕ್ಕಿ ,ಗೇರುಸೊಪ್ಪ ಡ್ಯಾಮ್ ನಿಂದ ನೀರು ಬಿಡುಗಡೆ-ಜೀವಕಳೆ ಪಡೆದುಕೊಂಡ ಜೋಗ ಜಲಪಾತ.
ಜೋಗದ ವಿಶೇಷ ವಿಡಿಯೋ ನೋಡಿ:-
ಕಾರವಾರ/ಶಿವಮೊಗ್ಗ:- ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಶರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಯಲ್ಲಿ ಇಂದು 36 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಯಿತು. ಇದರಿಂದ ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಹರಿದುಬಂದಿದ್ದು ಜೀವ ಕಳೆ ಪಡೆದುಕೊಂಡಿದೆ. ಶುಕ್ರವಾರವು ಸಹ ನೀರು ಬಿಡುಗಡೆ ಮಾಡುವುದರಿಂದ ಜೋಗ ಜಲಪಾತ ಮತ್ತಷ್ಟು ನಯನ ಮನೋಹರವಾಗಿರಲಿದೆ. ಇನ್ನು ಇಂದು ಸಾವಿರಾರು ಜನ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿ ಜಲಪಾತ ವೀಕ್ಷಿಸಿ ಕಣ್ತುಂಬಿಕೊಂಡರು.
ಗೇರುಸೊಪ್ಪ ಜಲಾಶಯದಿಂದ ನೀರು ಬಿಡುಗಡೆ.
ಇನ್ನು ಲಿಂಗನಮಕ್ಕಿಯಲ್ಲಿ ಕಳೆದ ಎರಡು ದಿನದಿಂದ ನೀರು ಬಿಡುಗಡೆ ಮಾಡಿದ್ದು ಜೋಗ ಮೂಲಕ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಈ ಹಿನ್ನಲೆಯಲ್ಲಿ ಗೇರುಸೊಪ್ಪ ಡ್ಯಾಮ್ ನಿಂದ ಇಂದು ಐದು ಗೇಟ್ ತೆರೆದು ಒಟ್ಟು 75 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದ ಹೊನ್ನಾವರ ಭಾಗದ ಶರಾವತಿ ನದಿ ಪಾತ್ರದ ಜನರಿಗೆ ಪ್ರವಾಹ ಏರ್ಪಡುವ ಸಾಧ್ಯತೆ ಇದ್ದು ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
