Rain:ಲಿಂಗನಮಕ್ಕಿಯಲ್ಲಿ ಹೊರ ಹರಿವು ಇಳಿಕೆ| ರಾಜ್ಯದಲ್ಲಿ ಮಳೆ ಪ್ರಮಾಣ ಹೇಗಿರಲಿದೆ ವಿವರ ಇಲ್ಲಿದೆ.
Rain:ಲಿಂಗನಮಕ್ಕಿಯಲ್ಲಿ ಹೊರ ಹರಿವು ಇಳಿಕೆ| ರಾಜ್ಯದಲ್ಲಿ ಮಳೆ ಪ್ರಮಾಣ ಹೇಗಿರಲಿದೆ ವಿವರ ಇಲ್ಲಿದೆ.

ಕಾರವಾರ/ಸಾಗರ: ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ (linganamakki dam) ರೇಡಿಯಲ್ ಗೇಟ್ ಮೂಲಕ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗಿದೆ. ಒಳ ಹರಿವು ಪ್ರಮಾಣ ಕಡಿಮೆಯಾದ್ದರಿಂದ ನೀರಿನ ಹೊರ ಹರಿವು ಕಡಿಮೆ ಮಾಡಲಾಗಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇವತ್ತು 29,784 ಕ್ಯೂಸೆಕ್ ಒಳ ಹರಿವು ಇದೆ. ಒಟ್ಟು ಹೊರ ಹರಿವು 17,150 ಕ್ಯೂಸೆಕ್ ಇದೆ. ಈ ಪೈಕಿ ರೇಡಿಯಲ್ ಗೇಟ್ ಮೂಲಕ 10,570 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಇದನ್ನೂ ಓದಿ:-Joga falls:ಜೋಗಾದ ರಾಜಪಾಲ್ಸ್ ನಲ್ಲಿ youtuber ಹುಚ್ಚಾಟ! ಆಮೇಲೇನಾಯ್ತು ಗೊತ್ತಾ?
ಪ್ರಸ್ತುತ ಜಲಾಶಯದ ನೀರಿನ ಮಟ್ಟ 1816.55 ಅಡಿ ಇದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.35 ಅಡಿಗೆ ಹೆಚ್ಚಳವಾಗಿದೆ. ನೀರಿನ ಮಟ್ಟ ಗರಿಷ್ಟ ಹಂತಕ್ಕೆ ತಲುಪಿದ್ದರಿಂದ ಮಂಗಳವಾರ ರೇಡಿಯಲ್ ಗೇಟ್‌ಗಳನ್ನು ಮೇಲೆತ್ತಿ 15 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿತ್ತು.
ಉತ್ತರ ಕನ್ನಡ ಜಿಲ್ಲೆಯ ಡ್ಯಾಮ್ ಗಳ ಮಟ್ಟದ ವಿವರ
ಹವಾಮಾನ ವರದಿ.
ರಾಜ್ಯದಲ್ಲಿನ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ವ್ಯಾಪಕ ಸಾಧಾರಣ,ಭಾರಿ ಮಳೆ ಮತ್ತು ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಆಗಸ್ಟ್ 21 ರಿಂದ 25 ರ ವರೆಗೆ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಗಳಿದ್ದು,ಆಗಸ್ಟ್ 26 ರಿಂದ ಮಳೆ ಹೆಚ್ಚಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ.