ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka| ಒಂದನೇ ತರಗತಿ ಸೇರಲು ವಯೋಮಿತಿ ಸಡಿಲಿಕೆ -ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಬೆಂಗಳೂರು: 5 ವರ್ಷ 5 ತಿಂಗಳು ತುಂಬಿದ ಮಕ್ಕಳು 1ನೇ ತರಗತಿಗೆ ಸೇರಲು ರಾಜ್ಯ ಸರ್ಕಾರ state government )ಅವಕಾಶ ಕಲ್ಪಿಸಿದೆ. ವಯಸ್ಸಿನ ಮಿತಿ ಸಡಿಲಿಕೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
03:16 PM Apr 16, 2025 IST | ಶುಭಸಾಗರ್

Karnataka| ಒಂದನೇ ತರಗತಿ ಸೇರಲು ವಯೋಮಿತಿ ಸಡಿಲಿಕೆ -ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

Advertisement

ಬೆಂಗಳೂರು: 5 ವರ್ಷ 5 ತಿಂಗಳು ತುಂಬಿದ ಮಕ್ಕಳು 1ನೇ ತರಗತಿಗೆ ಸೇರಲು ರಾಜ್ಯ ಸರ್ಕಾರ (state government )ಅವಕಾಶ ಕಲ್ಪಿಸಿದೆ. ವಯಸ್ಸಿನ ಮಿತಿ ಸಡಿಲಿಕೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

1ನೇ ತರಗತಿ ಸೇರುವ ಮಕ್ಕಳ ವಯೋಮಿತಿ ಸಡಿಲಿಕೆ ಕುರಿತು ಮಾತನಾಡಿದ ಅವರುಪೋಷಕರು ವಯೋಮಿತಿ ಗೊಂದಲದಲ್ಲಿ ಇದ್ದಾರೆ.ಎರಡು ತಿಂಗಳು ರಿಯಾಯ್ತಿ ಕೊಡಬಹುದು. ದೇಶದಲ್ಲಿ ಈಗಾಗಲೇ 6 ವರ್ಷ ಇದೆ. ಈ ವರ್ಷ ಮಾತ್ರ ವಯಸ್ಸಿನ ಮಿತಿ ಸಡಿಲ ಮಾಡಲಾಗುವುದು. ಮುಂದಿನ ವರ್ಷದಿಂದ 1ನೇ ತರಗತಿಗೆ ಸೇರಲು 6 ವರ್ಷ ನಿಯಮ ಕಡ್ಡಾಯ ಎಂದು ತಿಳಿಸಿದರು.

ಇದನ್ನೂ ಓದಿ:-Karnataka |ಈ ಭಾಗದಲ್ಲಿ ರೈಲು ಸೇವೆ ತಾತ್ಕಾಲಿಕ ಬದಲಾವಣೆ!

Advertisement

ಎಸ್‌ಇಪಿ(S.E.P) ಅವರಿಂದ ವರದಿ ಕೇಳಿದ್ವಿ. ಅವರು ಮೊದಲು 6 ವರ್ಷ ಅಂತ ಹೇಳಿದ್ರು. ಆಮೇಲೆ ನಮ್ಮ ಇಲಾಖೆ ಅವರ ಜೊತೆ ಮಾತಾಡಿದ್ದೇವೆ.

ಎಸ್‌ಇಪಿ ಸೂಚನೆ ಮೇಲೆ 5 ವರ್ಷ 5 ತಿಂಗಳು ಆಗಿದ್ದರೆ ದಾಖಲಾತಿ ಮಾಡಬೇಕು. ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿ ಮತ್ತೆ ಮಾಡಲಿ ಎಂದರು.ಯುಕೆಜಿ ಮುಗಿಸಿರಬೇಕು. 1ನೇ ತರಗತಿಗೆ 5 ವರ್ಷ 5 ತಿಂಗಳು ದಾಖಲಾತಿ ಮಿತಿ ಸಡಿಲಿಕೆ ಮಾಡಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯ. ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.

ವಯೋಮಿತಿ ಸಡಿಲ ಮಾಡುವುದಕ್ಕೆ ಎಲ್ಲರೂ ಒತ್ತಡ ಹಾಕಿದ್ದರು. ಮಕ್ಕಳನ್ನ ಮಿಷನ್ ರೀತಿ ಓದಿಸೋಕೆ ಪೋಷಕರು ಮುಂದಾಗಬಾರದು. ಮಕ್ಕಳಿಗೆ ಒತ್ತಡ ಹಾಕುವುದು ಸರಿಯಲ್ಲ. ಒತ್ತಡ ಇಲ್ಲದೆ ಮಕ್ಕಳು ಓದಬೇಕು ಎಂದು ಸಲಹೆ ನೀಡಿದರು.

Advertisement
Tags :
education Age relaxationEducation Minister Madhu BangarappaKannda newsKarnatakaNewsschool education
Advertisement
Next Article
Advertisement