ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 17: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ರ ದತ್ತಾಂಶಗಳ ಅಧ್ಯಯನ ವರದಿಯನ್ನು ರಾಜ್ಯ ಸಚಿವ ಸಂಪುಟ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಈ ಬಗ್ಗೆ ಮತ್ತಷ್ಟು ಪೂರಕ ಮಾಹಿತಿ ಒದಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ (HK pattil) ಅವರು ತಿಳಿಸಿದರು.
09:58 PM Apr 17, 2025 IST | ಶುಭಸಾಗರ್
Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.

Karnataka|ಜಾತಿ ಗಣತಿ ವರದಿ,ವಿಶೇಷ ಸಚಿವ ಸಂಪುಟ ಸಭೆ ಹೈಲೈಟ್ಸ್ ಇಲ್ಲಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು, ಏಪ್ರಿಲ್ 17: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ರ ದತ್ತಾಂಶಗಳ ಅಧ್ಯಯನ ವರದಿಯನ್ನು ರಾಜ್ಯ ಸಚಿವ ಸಂಪುಟ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಈ ಬಗ್ಗೆ ಮತ್ತಷ್ಟು ಪೂರಕ ಮಾಹಿತಿ ಒದಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ (HK pattil) ಅವರು ತಿಳಿಸಿದರು.

ಇದನ್ನೂ ಓದಿ:-Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ  ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.

ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiha)  ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಂಪುಟ ಸಭೆಯ ಬಳಿಕ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ  ಶಿವರಾಜ್ ಎಸ್ .ತಂಗಡಗಿ ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿ, ಸಚಿವ ಸಂಪುಟದ ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿದರು.

Advertisement

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015 ರ ದತ್ತಾಂಶಗಳ ಅಧ್ಯಯನ ವರದಿಯನ್ನು ರಾಜ್ಯ ಸಚಿವ ಸಂಪುಟ ಸುದೀರ್ಘವಾಗಿ ಚರ್ಚೆ ಮಾಡಿದ್ದು ಇನ್ನಷ್ಟು ಮಾಹಿತಿ, ತಾಂತ್ರಿಕ ವಿವರಗಳು ಚರ್ಚೆಗೆ ಅಗತ್ಯ ಎನಿಸಿ, ಅವುಗಳನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚರ್ಚೆ ಅಪೂರ್ಣವಾಗಿದೆ. ಅತ್ಯಂತ ಸೌಹಾರ್ದಯುತವಾಗಿ ನಡೆದ ಚರ್ಚೆಯಲ್ಲಿ ಜನಸಂಖ್ಯೆ  ಹಿಂದುಳಿದಿರುವಿಕೆ, ಅಧ್ಯಯನ ಮಾಡುವ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ  ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳ ವಿವರಗಳನ್ನು ಸ್ವಲ್ಪ ಮಟ್ಟಿಗೆ ಚರ್ಚಿಸಲಾಗಿದ್ದು, ಚರ್ಚೆ ಅಪೂರ್ಣವಾಗಿರುವುದರಿಂದ ಮುಂದಿನ ಸಚಿವ ಸಂಪುಟ ಸಭೆ ಏಪ್ರಿಲ್ 24 ರಂದು ಮಲೆಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದು, ಆಯಾ ಭಾಗದ ವಿಷಯಗಳು ಹೆಚ್ಚಾಗಿ ಚರ್ಚೆಗೆ ಬರುತ್ತದೆ. ಮೇ 2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ಸಚಿವ ಸಂಪುಟ  ನಿರ್ಧರಿಸಿದೆ.

ಸಮೀಕ್ಷೆಯ ಮಾನದಂಡಗಳ ಬಗ್ಗೆ ಚರ್ಚೆ

ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಉತ್ಪನ್ನದ ಮೂಲ ಹಾಗೂ ಕೈಗೊಂಡ ಮಾನದಂಡಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಕೆಲವು ಹಿರಿಯ ಸಚಿವರು ಮಾರ್ಗದರ್ಶನ ಮಾಡಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ ಎಂದರು.

ಇದನ್ನೂ ಓದಿ:-Karnataka| ಒಂದನೇ ತರಗತಿ ಸೇರಲು ವಯೋಮಿತಿ ಸಡಿಲಿಕೆ -ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಈ ವರದಿಯನ್ನು ಇತ್ತೀಚೆಗೆ ಸರ್ಕಾರದ ಕೈಸೇರಿದ್ದು ಮಾನದಂಡಗಳನ್ನು ಚರ್ಚಿಸಿದ್ದೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹಲವಾರು ಮಾನದಂಡಗಳನ್ನು ಚರ್ಚಿಸಿದ್ದೇವೆ ಎಂದು ಸಚಿವರು ಪುನರುಚ್ಚರಿಸಿದರು.

ಜಾತಿ ಸಂಖ್ಯಾಬಲದ ಬಗ್ಗೆ ತಪ್ಪು ಗ್ರಹಿಕೆ

ಜಾತಿ ಸಂಖ್ಯಾಬಲದ ಬಗ್ಗೆ ತಪ್ಪು ಗ್ರಹಿಕೆಗಳು ಹೊರಬೀಳುತ್ತಿದ್ದು, ಅವುಗಳು ಸರಿಯಾದ ವಿವರಗಳಲ್ಲ. 94.17% ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದರು. ಸಮೀಕ್ಷಾ ವರದಿಯ ಮಾಹಿತಿ ಪತ್ರಿಕೆಗಳಲ್ಲಿ ಈಗಾಗಲೇ ಬಂದಿದೆ.ವರದಿ ಮಂಡನೆಯಾಗಿ ಚರ್ಚೆ ನಡೆದಿದೆ ಎಂದು ಸಚಿವರು ತಿಳಿಸಿದರು.

ಕನ್ನಡವಾಣಿ App ನಲ್ಲೂ ಲಭ್ಯ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿ.

https://play.google.com/store/apps/details?id=com.kannadavani.app
Advertisement
Tags :
Cabinet meetingcaste census karnatakaCm KarnatakaCm siddaramaiahdecisionKannda newsKarnatakaMinister h.k PatilNewsState
Advertisement
Next Article
Advertisement