Mundgodu ಪೊಲೀಸರ ಮುಂದೆ ರೌಡಿಗಳ ಹೊಡೆದಾಟ| ಪಿ.ಎಸ್.ಐ ವಿರುದ್ಧ ಕೇಳಿಬಂತು ಆರೋಪ
ಕಾರವಾರ :-ಹಣಕಾಸು ವಿಚಾರವಾಗಿ ಎರಡು ರೌಡಿಗಳ ಗುಂಪುಗಳ ನಡುವೆ ಕಾದಾಟ ನಡೆದಿದ್ದು 10 ಜನರ ವಿರುದ್ಧ ಉತ್ತರ ಕನ್ನಡ( Uttrakannada) ಜಿಲ್ಲೆಯ ಮುಂಡಗೋಡಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡಗೋಡಿನ ಶಿವಾಜಿ ಸರ್ಕಲ್ ಬಳಿ ಕೋರ್ಟ್ ಮುಂದೆ,ಪೊಲೀಸರು ಸಹ ಎದುರಿಗೆ ಇದ್ದರೂ ಯಾವುದೇ ಅಂಜಿಕೆಯಿಲ್ಲದೇ ಎರಡು ರೌಡಿಗಳ ತಂಡ ಹೊಡೆದಾಡಿಕೊಂಡಿದೆ.
ಪ್ರಕರಣ ಸಂಬಂಧ ಮುಂಡಗೋಡು ಠಾಣೆಯಲ್ಲಿ
ಮುಂಡಗೋಡಿನ ಮಂಜು ನವಲೆ (28), ಸಂಜು ನವಲೆ (23), ಶರತ್ ಕಡಗೋಳ (22), ಮಂಜೇಶ ಹರಿಜನ್ (23), ಮಂಜುನಾಥ (26), ಅಭಿಷೇಕ ಕದಂ (25), ಮಂಜುನಾಥ ಶೇರಕಾನಿ (25), ದೀಪು ಇಂದೂರು, ವಾಸಿಂ, ನವೀನ ಬಂಧಿತ ಆರೋಪಿಗಳಾಗಿದ್ದಾರೆ.
ಮುಂಡಗೋಡ ಪಿಎಸ್‌ಐ ಪರಶುರಾಮ ಮಿರ್ಜಗಿ ಹಾಗೂ ಸಿಬ್ಬಂದಿ ಮುಂದೆಯೇ ಹೊಡೆದಾಟಕ್ಕಿಳಿದಿದ್ದ ಆರೋಪಿಗಳಲ್ಲಿ ಕೆಲವರನ್ನು ರಾಜಕೀಯ ಪ್ರಭಾವದಿಂದ ಬಂಧಿಸದೇ ಪಿಎಸ್‌ಐ ಕೈ ಬಿಟ್ಟಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಆರೋಪ ಮಾಡಿದ್ದಾರೆ.
ಗಲಾಟೆಯಲ್ಲಿ ಭಾಗಿಯಾಗಿ ಶಾಂತಿ ಭಂಗ ಮಾಡಿದ ಕೆಲವು ಆರೋಪಿಗಳ ಹೆಸರು ಕೈಬಿಡಲಾಗಿದೆ, ಸಮಾಜದ ಶಾಂತಿಗಾಗಿ ರೌಡಿಗಳನ್ನು ಬಗ್ಗು ಬಡಿದು, ಸಮರ್ಪಕ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.