ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka |ಈ ಭಾಗದಲ್ಲಿ ರೈಲು ಸೇವೆ ತಾತ್ಕಾಲಿಕ ಬದಲಾವಣೆ!

ಹುಬ್ಬಳ್ಳಿ :- ರಾಜ್ಯದ ಕೆಲವು ಜಿಲ್ಲೆಯಲ್ಲಿ ರೈಲುಗಳ ಸೇವೆಯಲ್ಲಿ ಕೆಲವೊಂದು ಪ್ರಮುಖ ಹಾಗೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕ್ಯಾಸಲ್ ರಾಕ್ ಮತ್ತು ಕುಲೆಮ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ವಿಸ್ತರಣೆಯ ಹಿನ್ನೆಲೆಯಲ್ಲಿ, ರೈಲು ಸಂಚಾರ ಹಾಗೂ ಮಾರ್ಗ ಬದಲಾಗಿದ್ದು ಕೆಲವು ಕಡೆ ರದ್ದಾಗಿದೆ.
10:07 PM Apr 15, 2025 IST | ಶುಭಸಾಗರ್

Karnataka |ಈ ಭಾಗದಲ್ಲಿ ರೈಲು ಸೇವೆ ತಾತ್ಕಾಲಿಕ ಬದಲಾವಣೆ!

ಪ್ರಕೃತಿ ಮೆಡಿಕಲ್ ,ಕಾರವಾರ.

ಹುಬ್ಬಳ್ಳಿ :- ರಾಜ್ಯದ ಕೆಲವು ಜಿಲ್ಲೆಯಲ್ಲಿ ರೈಲುಗಳ (train) ಸೇವೆಯಲ್ಲಿ ಕೆಲವೊಂದು ಪ್ರಮುಖ ಹಾಗೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕ್ಯಾಸಲ್ ರಾಕ್ ಮತ್ತು ಕುಲೆಮ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ವಿಸ್ತರಣೆಯ ಹಿನ್ನೆಲೆಯಲ್ಲಿ, ರೈಲು ಸಂಚಾರ  ಹಾಗೂ ಮಾರ್ಗ ಬದಲಾಗಿದ್ದು ಕೆಲವು ಕಡೆ ರದ್ದಾಗಿದೆ.

Advertisement

ಹಾಗಿದ್ರೆ ರದ್ದಾದ ರೈಲು ಮಾರ್ಗ ಯಾವುದು ಬದಲಾದ ಮಾರ್ಗ ಯಾವುದು ವಿವರ ಈ ಕೆಳಗಿನಂತಿದೆ.

ರದ್ದಾದ ಮಾರ್ಗಗಳು:-

1) ಏಪ್ರಿಲ್ 17, 19, 21, 22, 24, 26 ಮತ್ತು 28, 2025 ರಂದು ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್-ವಾಸ್ಕೋ ಡ ಗಾಮಾ ಅಮರಾವತಿ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ-ವಾಸ್ಕೋ ಡ ಗಾಮಾ ನಡುವಿನ ಸಂಚಾರ ರದ್ದಾಗಿದೆ.

2) ಏಪ್ರಿಲ್ 20, 22, 24, 25, 27, 29 ಮತ್ತು ಮೇ 1, 2025 ರಂದು ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ - ಶಾಲಿಮಾರ್ ಅಮರಾವತಿ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

Advertisement

ಇದನ್ನೂ ಓದಿ:-Karnataka:-ಮಿನರಲ್ ವಾಟರ್ ಕುಡಿಯುವವರೇ ಎಚ್ಚರ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

3) ಏಪ್ರಿಲ್ 17 ಮತ್ತು 24, 2025 ರಂದು ತನ್ನ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17419/17021 ತಿರುಪತಿ/ಹೈದರಾಬಾದ್- ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಡುವೆ ಭಾಗಶಃ ರದ್ದುಗೊಂಡಿದೆ.

4) ಏಪ್ರಿಲ್ 18 ಮತ್ತು 25, 2025 ರಂದು ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ- ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

5) ಏಪ್ರಿಲ್ 18, 23 ಮತ್ತು 25, 2025 ರಂದು ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿವರೆಗೆ ಮಾತ್ರ ಸಂಚರಿಸಲಿದ್ದು, ಹುಬ್ಬಳ್ಳಿ-ವಾಸ್ಕೋ ಡ ಗಾಮಾ ನಡುವಿನ ಸಂಚಾರ ರದ್ದಾಗಿದೆ.

ಇದನ್ನೂ ಓದಿ:-Karnataka : ಕರಾವಳಿ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ!

6) ಏಪ್ರಿಲ್ 19, 24 ಮತ್ತು 26, 2025 ರಂದು ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ - ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ವಾಸ್ಕೋ ಡ ಗಾಮಾ ಬದಲು ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಹುಬ್ಬಳ್ಳಿ ನಡುವಿನ ಸಂಚಾರ ರದ್ದಾಗಿದೆ.

ರೈಲು ಮಾರ್ಗ ಬದಲಾವಣೆ :-

1).ಏಪ್ರಿಲ್ 19 ಮತ್ತು 26, 2025 ರಂದು ಪುಣೆಯಿಂದ ಹೊರಡುವ ರೈಲು ಸಂಖ್ಯೆ 11097 ಪುಣೆ-ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸತಾರಾ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆಯನ್ನು ಬಿಟ್ಟು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ.

2) ಏಪ್ರಿಲ್ 21 ಮತ್ತು 28, 2025 ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸತಾರಾ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ಮಾರ್ಗವಾಗಿ ಚಲಿಸಲಿದೆ.

3)ಏಪ್ರಿಲ್ 21 ಮತ್ತು 28, 2025 ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ ಡ ಗಾಮಾ - ವೇಲಾಂಕಣಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸ್ಯಾನ್ವೊರ್ಡೆಮ್ ಮತ್ತು ಸೇಲಂ ನಡುವಿನ ನಿಲುಗಡೆಯನ್ನು ಬಿಟ್ಟು ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ಮಾರ್ಗವಾಗಿ ಚಲಿಸಲಿದೆ.

Bhatkal: ಪ್ರತಿಭಟನೆ ಕಾರ್ಯಕರ್ತರಿಗೆ ಕೇಸ್ ನಾಯಕರಿಗೆ ಕೋಕ್ ! ಬಲಿಪಶುವಾದ್ರಾ ಬಿಜೆಪಿ ಕಾರ್ಯಕರ್ತರು!

4) ಏಪ್ರಿಲ್ 22 ಮತ್ತು 29, 2025 ರಂದು ವೇಲಾಂಕಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಾಂಕಣಿ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇಲಂ ಮತ್ತು ಸ್ಯಾನ್ವೊರ್ಡೆಮ್ ನಡುವಿನ ನಿಲುಗಡೆಯನ್ನು ಬಿಟ್ಟು ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ (Madgaon) ಮಾರ್ಗವಾಗಿ ಚಲಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

 

Advertisement
Tags :
Karnatakakarnataka railwaysRailway departmentRailway timingstrain route change
Advertisement
Next Article
Advertisement