ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttra Kannada| ಎಲ್ಲಾ ಅಭ್ಯರ್ಥಿಗಳನ್ನ ತಿರಸ್ಕರಿಸಿ ಮತದಾರ! ಈ ಹಿಂದೆ ನೋಟ ಒತ್ತಿದವರೆಷ್ಟು ಗೊತ್ತಾ?

09:29 PM Apr 18, 2024 IST | ಶುಭಸಾಗರ್
featuredImage featuredImage

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರಲ್ಲಿ ಯಾವ ಅಭ್ಯರ್ಥಿಗಳೂ ಯೋಗ್ಯರಲ್ಲ ಎಂಬ ಅಭಿಪ್ರಾಯಗಳು ಹೆಚ್ಚಾಗುತ್ತಲೇ ಇದೆ. ಹಿಂದಿನ ವಿಧಾನ ಸಭೆ,ಲೋಕಸಭೆ ಚುನಾವಣೆಯಲ್ಲಿ (loksabha Election) ಮತದಾರರು "ನೋಟ" (nota voting) ಹೆಚ್ಚು ಮತದಾನ ಮಾಡಿರುವುದಕ್ಕೆ ಸಾಕ್ಷಿಯಾದ್ರೆ,ಇದೀಗ ಈ ಭಾರಿ ಎಷ್ಟು ನೋಟ ಮತಗಳು ಬೀಳಲಿವೆ ಎಂಬುದು ಕುತೂಹಲವಾಗಿದೆ.

Advertisement

ಹಾಗಿದ್ರೆ ಹಿಂದಿನ ಚುನಾವಣೆಯಲ್ಲಿ (election)ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು ನೋಟಾ ಬಿದ್ದಿದೆ ಎಂದು ನೋಡುವುದಾದರೆ ,ರಾಜ್ಯದಲ್ಲೇ (state)ಈ ಹಿಂದೆ ನೋಟ ಬಿದ್ದ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಪಡೆದಿದೆ.

"ಏನಿದು ನೋಟ" ಮತ

ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರೊಬ್ಬರಿಗೂ ಮತ ನೀಡಲು ಇಷ್ಟವಿಲ್ಲದಿದ್ದರೆ ‘ನೋಟಾ’ (ಮೇಲಿನ ಯಾರೂ ಅಲ್ಲ) ಆಯ್ಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. 2013ರಲ್ಲಿ ದೇಶದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಈ ಪ್ರಯೋಗ ನಡೆದಿತ್ತು. ಬಳಿಕ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗೆ ಒದಗಿಸಲಾಯಿತು.

Advertisement

2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ.1.1 ರಷ್ಟು ನೋಟಾಕ್ಕೆ ಚಲಾವಣೆಯಾಗಿದ್ದವು.

ಅಂದು 9,84,761ಮತಗಳು (voting)ಚಲಾವಣೆಗೊಂಡಿದ್ದು, ನೋಟಾಕ್ಕೆ 16,277 ಮತಗಳು ಚಲಾವಣೆಗೊಂಡಿದ್ದವು. ಕಣದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬಳಿಕ ಹೆಚ್ಚು ಮತ ಬಿದ್ದಿದ್ದು ನೋಟಾ ಆಯ್ಕೆಗೆ ಎಂಬುದೇ ಅಂದಿನ ವಿಶೇಷ ಎನಿಸಿತ್ತು.

ಜಿಲ್ಲೆಯ ಕೋಮು ಘರ್ಷಣೆಗೆ ಕಾರಣವಾಗುವ ಸದಾ ವಿವಾಧಿತ ಪ್ರದೇಶವಾದ ಭಟ್ಕಳ ಕ್ಷೇತ್ರದಲ್ಲಿ ಗರಿಷ್ಠ 2,771 ಮತಗಳು ನೋಟಾಕ್ಕೆ ಚಲಾವಣೆಗೊಂಡಿದ್ದವು.

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ಮತಗಳ ಪೈಕಿ ಶೆ.1 ರಷ್ಟನ್ನು ನೋಟಾ ಪಡೆದುಕೊಂಡಿತ್ತು. ಚಲಾವಣೆಯಾಗಿದ್ದ 11,37,463 ಮತಗಳಲ್ಲಿ 16,017 ಮತಗಳು ನೋಟಾಗೆ ಚಲಾವಣೆಯಾಗಿದ್ದವು. ಆಗಲೂ ಮೂರನೇ ಸ್ಥಾನವನ್ನು ಕಾಯ್ದುಕೊಂಡಿತ್ತು ಉತ್ತರ ಕನ್ನಡ ಜಿಲ್ಲೆ.
ಆಗ ಕುಮಟಾ ಕ್ಷೇತ್ರದಲ್ಲಿ 2,408 ಮತಗಳು ನೋಟಾ ಪಾಲಾಗಿತ್ತು.

ವಿಧಾನಸಭೆ ಚುನಾವಣೆಯಲ್ಲೂ ನೋಟಾ:

2018, 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ನೋಟಾ ಆಯ್ಕೆಗೆ ಗಣನೀಯ ಮತಗಳು ಚಲಾಣೆಯಾಗಿದೆ ಎಂದು ಚುನಾವಣಾ ಆಯೋಗದ ದಾಖಲೆಗಳು ಹೇಳುತ್ತವೆ.

ಇದನ್ನೂ ಓದಿ:-Uttra kannada|ಯಾವ ಪಕ್ಷದಿಂದ ಯಾರೆಲ್ಲಾ ನಾಮಪತ್ರ ಸಲ್ಲಿಸಿದ್ರು? ಈವರೆಗೆ ಎಷ್ಟಾಗಿದ್ದಾರೆ ಅಭ್ಯರ್ಥಿ ಗಳು?

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಟು ಕ್ಷೇತ್ರಗಳಿಂದ 14,185 ಮತಗಳು ಚಲಾವಣೆಗೊಂಡಿದ್ದರೆ, 2023ರಲ್ಲಿ ನಡೆದ ಚುನಾವಣೆಯಲ್ಲಿ 11,155 ಮತಗಳು ಬಿದ್ದಿದ್ದವು.

ನೋಟಾ ಮತಗಳ ಪ್ರಮಾಣ

ನೋಟಾಕ್ಕೆ ಬಿದ್ದ ಮತ (8 ವಿಧಾನಸಭೆ ಕ್ಷೇತ್ರಗಳು ಸೇರಿ)

2014ರ ಲೋಕಸಭೆ;16,277

2018ರ ವಿಧಾನಸಭೆ;14,185

2019ರ ಲೋಕಸಭೆ;16,017

2023ರ ವಿಧಾನಸಭೆ;11,155

ನೋಟಾಕ್ಕೆ ಮತದಾನ ಮಾಡುವುದರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳ ವಿರುದ್ಧ ಮತದಾರ ತನ್ನ ಪ್ರತಿರೋಧ ವ್ಯಕ್ತಪಡಿಸಲು ಇದೊಂದು ಅಸ್ತ್ರ. ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯಲ್ಲಿ ನೋಟಾ ಮತಗಳು ಹೆಚ್ಚು ಚಲಾವಣೆಯಾಗುತ್ತಿರುವುದು ಜಾತಿ ,ಧರ್ಮ ಸಂಘರ್ಷದ ಹಾದಿಯನ್ನು ಬಳಸಿಕೊಂಡು ಮತ ಬೇಟೆ ಮಾಡುವ ರಾಜಕೀಯ ಪಕ್ಷಗಳಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ.

ಇದನ್ನೂ ಓದಿ:-ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಎಷ್ಟು ಕೋಟಿ ವಡೆಯರು! ವಿವರ ನೋಡಿ.

Advertisement
Tags :
IndiaKannada newskaravali newsLokasabha election 2024Nota votingUttra kannda electionಉತ್ತರ ಕನ್ನಡನೋಟಾ ಮತದಾನಮತದಾನ
Advertisement
Advertisement