ಕರಾವಳಿಗೆ ಅನ್ಯಾಯ ಮಾಡಿದ ಕಾಗೇರಿ! ಸಂಸದರಾದರೇ ಜಿಲ್ಲೆ ವಿಭಜನೆ ಮಾಡ್ತಾರಾ?
ಕಾರವಾರ:- ಉತ್ತರ ಕನ್ನಡ ಜಿಲ್ಲೆ ಬೌಗೋಳಿಕವಾಗಿ ದೊಡ್ಡ ಜಿಲ್ಲೆ ಈ ಜಿಲ್ಲೆಯನ್ನು ವಿಭಾಗ ಮಾಡಿ ಶಿರಸಿ ಜಿಲ್ಲೆ ಮಾಡಬೇಕು ಎಂಬ ಕೂಗು ಮಲೆನಾಡಿಗರದ್ದು.
ಹೀಗಾಗಿ ಶಿರಸಿ ಭಾಗದಲ್ಲಿ ಎದ್ದ ಜಿಲ್ಲಾ ವಿಭಜನೆ ಕೂಗಿಗೆ ಕಾಗೇರಿ ಸಹ ಬೆಂಬಲ ನೀಡಿದ್ದರು. ಅವರು ಸಚಿವರಾಗಿದ್ದಾಗ ಕರಾವಳಿ ಭಾಗದಲ್ಲಿ ಇದ್ದ ಕೇಂದ್ರ ಕಚೇರಿಗಳನ್ನ ಹಲವಷ್ಟು ಶಿರಸಿ ಭಾಗಕ್ಕೆ ಕೊಂಡೊಯ್ದರು,ಇದಲ್ಲದೇ ಕರಾವಳಿ ಭಾಗಕ್ಕೆ ಬಂದ ಅನುದಾನವನ್ನು ಸಹ ಶಿರಸಿ ಭಾಗಕ್ಕೆ ಬದಲಿ ಮಾಡಿಸಿಕೊಂಡಿದ್ದರು. ಹೀಗಿರುವಾಗ ಇದೀಗ ಬಿಜೆಪಿ ಲೋಕಸಭಾ ಅಭ್ಯರ್ಥಿ ಆಗಿರುವ ಕಾಗೇರಿ ಸಂಸದರಾದರೇ ಕರಾವಳಿ ಭಾಗಕ್ಕೆ ನ್ಯಾಯ ಕೊಡುತ್ತಾರಾ ಎಂಬ ಪ್ರಶ್ನೆ ಕರಾವಳಿಗರಲ್ಲಿ ಏಳುತ್ತಿದೆ.
ಇದನ್ನೂ ಓದಿ:-ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಾಗೇರಿಗೆ ಬೆಂಬಲ!
ಜಿಲ್ಲಾ ವಿಭಜನೆ ಬಗ್ಗೆ ಹೆಚ್ಚು ಒಲವು ಇರುವ ಕಾಗೇರಿಗೆ ಕರಾವಳಿ ಭಾಗದ ಸಮಸ್ಯೆ ಸ್ಪಂದಿಸುವ ಔದಾರ್ಯ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಕರಾವಳಿಗರದ್ದಾಗಿದೆ.
ಈ ಕುರಿತು ಕುದ್ದು ಕಾಗೇರಿಯವರೇ ಮಾತನಾಡಿದ್ದು ಜಿಲ್ಲಾ ವಿಭಜನೆ ಕೇವಲ ರಾಜಕೀಯ ವಿಷಯವಷ್ಟೇ ಎಂದು ನುಣಚಿಕೊಂಡಿದ್ದಾರೆ. ಈ ಕುರಿತು ಭಾನುವಾರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ನಾನು ಜಿಲ್ಲೆ ವಿಭಾಗಿಸುತ್ತೇನೆ ಎಂಬುದೇನಿಲ್ಲ,ಶಿರಸಿ ಕ್ಷೇತ್ರದ ಶಾಸಕನಾದ್ದರಿಂದ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯ ಹೀಗಾಗಿ ಶಾಸಕನಾಗಿ ನನ್ನ ಕ್ಷೇತ್ರದ ಬಗ್ಗೆ ಯೋಚಿಸಿದ್ದೇನೆ ಎಂದರು. ಆದ್ರೆ ಕರಾವಳಿ ಭಾಗಕ್ಕೆ ಮಂಜೂರಾಗಿದ್ದ ಅನುದಾನ ವನ್ನು ನಿಮ್ಮ ಕ್ಷೇತ್ರಕ್ಕೆ ಏಕ ಬದಲಿಸಿದರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನುಣಚಿಕೊಂಡರು.
ಇದನ್ನೂ ಓದಿ:-Sirsi ಕಾಂಗ್ರೆಸ್ ಕಚೇರಿಯಲ್ಲಿ ಶಿವರಾಮ್ ಹೆಬ್ಬಾರ್ ಗೆ Pay Money ಕಾಟ!
ಇನ್ನು ಕುಮಟಾ ದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುವ ಬಗ್ಗೆ ಪ್ರಯತ್ನ ಮಾಡುತ್ತೇನೆ ಎಂದು ಮತ್ತೊಮ್ಮೆ ಕರಾವಳಿ ಜನರ ಮೂಗಿಗೆ ತುಪ್ಪ ಸುರಿದರು. ಒಟ್ಟಿನಲ್ಲಿ ಬಗೆಹರಿಯದ ಸಮಸ್ಯೆಗಳೇ ಬಿಜೆಪಿ ಅಭ್ಯರ್ಥಿ ಯ ಆಶ್ವಾಸನೆ ಪ್ರಣಾಳಿಕೆಯಾಗಿದ್ದು ಕರವಾಳಿಗರಿಗೆ ಅನ್ಯಾಯ ಮಾಡಿದ ಕಾಗೇರಿ ಗೆ ಕರಾವಳಿಗರು ಅಪ್ಪಿಕೊಳ್ತಾರ ಎಂಬುದೇ ಪ್ರಶ್ನೆ!