ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttrakannda ಬಿಜೆಪಿ ಯಿಂದ ಮುಖ್ಯಮಂತ್ರಿಗೆ ಹತ್ತು ಪ್ರಶ್ನೆ ? ಏನದು ವಿವರ ನೋಡಿ.

07:54 PM May 01, 2024 IST | ಶುಭಸಾಗರ್

ಕಾರವಾರ :- ಮೇ 3 ರಂದು ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah) ಆಗಮಿಸುತಿದ್ದು ,ಜಿಲ್ಲಾ ಬಿಜೆಪಿ ಮುಖ್ಯಮಂತ್ರಿ ರವರಿಗೆ ಹತ್ತು ಪ್ರಶ್ನೆಗಳನ್ನು ಇಟ್ಟಿದ್ದು , ಜಿಲ್ಲಾ ಬಿಜೆಪಿ ವಕ್ತಾರರಾದ ವಕೀಲ ಸದಾನಂದ ಭಟ್ ಪತ್ರಿಕಾ ಹೇಳಿಕೆ ನೀಡುವ ಮೂಲಕ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ. ಹಾಗಿದ್ರೆ ಏನು ಪ್ರಶ್ನೆಗಳು? ಇಲ್ಲಿದೆ ನೋಡಿ.

Advertisement

  1. ಬರಗಾಲ ಮತ್ತು ನೀರಿನ ಸಮಸ್ಯೆಗೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಏನು ಪರಿಹಾರ ಕೊಟ್ಟಿದ್ದೀರಿ? ಬರಗಾಲದಿಂದ ಹಾನಿಗೊಳಗೊಂಡ ರೈತರಿಗೆ ( farmer) ಎಷ್ಟು ಬೆಳೆ ಪರಿಹಾರ ಕೊಟ್ಟಿದ್ದೀರಿ?
  2. ಈ ಹಿಂದೆ ರಾಜ್ಯ ಬಿಜೆಪಿ ಸರಕಾರ ತನ್ನ ಬಜೆಟ್ (budget )ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಘೋಷಣೆ ಮಾಡಿದ್ದ ಮುಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Hospital) ಮತ್ತು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಯಾಕೆ ಕೈ ಬಿಟ್ಟಿದ್ದೀರಿ?
  3. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಹೊಸ ಅನುದಾನವನ್ನು ನೀಡಿದ್ದೀರಿ?
  4. ಹಿಂದೂ(Hindu) ಅಮಾಯಕ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ರಾಜಕೀಯ ಪ್ರೇರಿತವಾಗಿ ಪ್ರಕರಣಗಳನ್ನು ಏಕೆ ದಾಖಲಿಸುತ್ತಿದ್ದೀರಿ?
  5. ರೈತರಿಗೆ ( farmer) ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಿ ಹೈನುಗಾರಿಕೆ ಪ್ರೋತ್ಸಾಹ ಧನಕ್ಕೆ ಯಾಕೆ ಅನುದಾನ ನೀಡುತ್ತಿಲ್ಲ?
  6. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅರಣ್ಯ ಅತಿಕ್ರಮಣದಾರರ ಹಿತ ರಕ್ಷಣೆಗಾಗಿ ಯಾವ ಕ್ರಮವನ್ನು ಕೈಗೊಂಡಿದ್ದೀರಿ?.
  7. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ನೆರೆಯ ಅನಾನುಕೂಲತೆಯನ್ನು ತಪ್ಪಿಸಲು, ಪರಿಹಾರಕ್ಕೆ ಏನು ಕ್ರಮವನ್ನು ಕೈಗೊಂಡಿದ್ದೀರಿ?.
  8. ವಿದ್ಯುತ್, ನೀರು, ಬಸ್, ನೊಂದಣಿ, ವಾಹನ ತೆರಿಗೆ ಇನ್ನಿತರ ದರವನ್ನು ಹೆಚ್ಚಿಸಿ ಎಲ್ಲಾ ಬೆಲೆ ಏರಿಕೆ ಮಾಡಿ ನಿಮ್ಮ ಗ್ಯಾರಂಟಿಗಾಗಿ ಸಂಗ್ರಹಿಸುತ್ತಿರುವ ಹೆಚ್ಚಿನ ಹಣ ಏನು ಮಾಡಿದಿರಿ?.
  9. ಮೀನುಗಾರರ ಹಿತ ರಕ್ಷಣೆಗೆ ಮತ್ತು ಅನುಕೂಲಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ?.
  10. ಕೇವಲ ಕಾಂಗ್ರೆಸ್ಸಿನ ಗ್ಯಾರಂಟಿಯಿಂದಲೇ ಜನರು ತಮ್ಮ ಜೀವನವನ್ನು ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವ ನಿಮ್ಮ ಆಡಳಿತದ ಅವಧಿಯಲ್ಲಿ ಮಹಿಳೆಯರ ರಕ್ಷಣೆಗೆ ಯಾವ ಗ್ಯಾರಂಟಿ ನೀಡಿದ್ದೀರಿ?

ಉತ್ತರ ಕನ್ನಡ ಜಿಲ್ಲೆಯ ಜನ ನಿಮ್ಮಿಂದ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿರುತ್ತದೆ ಜನತೆಯ ಪರವಾಗಿ ಕೇಳಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸಮರ್ಪಕವಾದ ಉತ್ತರವನ್ನು ನೀಡಲಿ ಎಂದು ಸದಾನಂದ ಭಟ್ ಪ್ರಕಟಣೆಯಲ್ಲಿ ಕೋರಿದ್ದಾರೆ

Advertisement
Advertisement
Tags :
BJP questionsBjp uttra kannadaChief Minister SiddaramaiahCm KarnatakaCongress Partykaravali newsUttarakannadaಉತ್ತರ ಕನ್ನಡಕಾರವಾರಬಿಜೆಪಿಸಿಎಂ
Advertisement
Next Article
Advertisement