ED Raide: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೆಷ್ಟು?
ED ride: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೆಷ್ಟು?

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ(uttara Kannada) ಕಾರವಾರ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಅ.13 ಮತ್ತು ಅ.14 ರಂದು ಇಡಿ ದಾಳಿ ಮಾಡಿದ್ದು ಎರಡು ದಿನದ ಕಾರ್ಯಾಚರಣೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಹಾಗಿದ್ರೆ ಏನೆಲ್ಲಾ ಸಿಕ್ಕಿದೆ ಇದರ ವಿವರ ಇಲ್ಲಿದೆ.

1.68ಕೋಟಿ ರೂ. ಕ್ಯಾಶ್ ಜತೆ 6.75ಕೆ.ಜಿ. ಚಿನ್ನ,ಸುಮಾರು 6,20,45,319ರೂ. ಮೌಲ್ಯದಷ್ಟು ಚಿನ್ನ ವನ್ನು ಸೀಝ್ ಮಾಡಿದೆ.ಚಿನ್ನದ ಆಭರಣ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಇತರ ಸೊತ್ತುಗಳು ಸೇರಿ ಒಟ್ಟು 14.13 ಕೋಟಿ ರೂ. ಮೌಲ್ಯದ ಸೊತ್ತು ಫ್ರೀಝ್ ಮಾಡಲಾಗಿದೆ.
ಇ.ಡಿ.ಬೆಂಗಳೂರು ವಿಭಾಗ ಆಗಸ್ಟ್ 13 ಹಾಗೂ 14ರ ಬೆಳಗ್ಗಿನ ಜಾವದವರೆಗೆ ಶಾಸಕ ಸೈಲ್ ಮನೆಗೆ ದಾಳಿ ಮಾಡಿತ್ತು.
ಕಾರವಾರದ ಚಿತ್ತಾಕುಲದ ಮನೆಗೆ ದಾಳಿ ಮಾಡಿ ಎರಡು ಟ್ರಂಕ್‌ನಲ್ಲಿ ಚಿನ್ನ, ಹಣ ಹಾಗೂ ದಾಖಲೆಗಳನ್ನು ಕೊಂಡೊಯ್ದಿದ್ದ ಇ.ಡಿ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧಿಸಿ ಪ್ರಮುಖ ಆರೋಪಿಯಾಗಿದ್ದ ಸತೀಶ್ ಸೈಲ್ 2010ರಲ್ಲಿ ಮಲ್ಲಿಕಾರ್ಜುನ್ ಶಿಪ್ಪಿಂಗ್ ಕಂಪೆನಿ ಮೂಲಕ ಸೈಲ್ ನಡೆಸಿದ್ದ ಅವ್ಯವಹಾರ ಸಂಬಂಧಿಸಿ ರೈಡ್ ಮಾಡಿರುವುದಾಗಿ ತಿಳಿಸಿದೆ.