For the best experience, open
https://m.kannadavani.news
on your mobile browser.
Advertisement

Karnataka:ಗೋವಾ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಬಿಗ್‌ ಅಪ್ಡೇಟ್‌

ಗೋವಾ-ಕರ್ನಾಟಕದ ಗಡಿಭಾಗದಿಂದ ಉಡುಪಿ ಜಿಲ್ಲೆ ಕುಂದಾಪುರದವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಕರ್ನಾಟಕ ರಾಜ್ಯದ ಎನ್ಎಚ್-66ರ ಗೋವಾ/ ಕರ್ನಾಟಕ ಗಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಇದಾಗಿದ್ದು, 187 ಕಿ.ಮೀ. ಉದ್ದವನ್ನು ವ್ಯಾಪಿಸಿರುವ ಈ ಹೆದ್ದಾರಿಯು ಒಂದು ಕಡೆ ಅರಬ್ಬಿ ಸಮುದ್ರ ತೀರವನ್ನು
10:43 PM Apr 03, 2025 IST | ಶುಭಸಾಗರ್
karnataka ಗೋವಾ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಬಿಗ್‌ ಅಪ್ಡೇಟ್‌

ಗೋವಾ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಬಿಗ್‌ ಅಪ್ಡೇಟ್‌

Uttara kannda :- ಗೋವಾ(Goa) -ಕರ್ನಾಟಕದ (karnataka)ಗಡಿಭಾಗದಿಂದ ಉಡುಪಿ ಜಿಲ್ಲೆ ಕುಂದಾಪುರದವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಕರ್ನಾಟಕ ರಾಜ್ಯದ ಎನ್ಎಚ್-66ರ ಗೋವಾ/ ಕರ್ನಾಟಕ ಗಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಇದಾಗಿದ್ದು, 187 ಕಿ.ಮೀ. ಉದ್ದವನ್ನು ವ್ಯಾಪಿಸಿರುವ ಈ ಹೆದ್ದಾರಿಯು ಒಂದು ಕಡೆ ಅರಬ್ಬಿ ಸಮುದ್ರ ತೀರವನ್ನು ಮತ್ತೊಂದು ಕಡೆ ಪಶ್ಚಿಮ ಘಟ್ಟಗಳನ್ನು ಒಳಗೊಂಡಿದೆ. ಗೋವಾ-ಕರ್ನಾಟಕದ ಸಂಪರ್ಕ ರಸ್ತೆ ಇದಾಗಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಏನದು ಬಿಗ್ ಅಪ್ಡೇಟ್ ?

ರಾಷ್ಟ್ರೀಯ ಹೆದ್ದಾರಿ 66 ರ ಮಾರ್ಗವಾಗಿ ಬರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಿಟ್ಟಲ್ ಘಾಟ್ ಮತ್ತು ಭಟ್ಕಳ ತಾಲೂಕಿನ ಮೂಡ್ ಭಟ್ಕಳ ಹಾಗೂ ಕಾಯ್ಕಿಣಿ ಪ್ರದೇಶಗಳಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಸ್ತು ಎಂದಿದೆ. ಈ ಬಗ್ಗೆ ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (vishveshvar hegde kageri)ವಿವರವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:-ಶಿರೂರು ಭೂ ಕುಸಿತ|ಈ ತಪ್ಪಿಗೆ IRB -NHAI ಹೊಣೆ ಇಲ್ಲಿದೆ ದಾಖಲೆ

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿ ವಿವರ ಹಂಚಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಾಂಕ 20.12.2024 ರಂದು, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೋವಾ ಕರ್ನಾಟಕ ಗಡಿಯಿಂದ ಕುಂದಾಪುರವರೆಗಿನ ಚತುಷ್ಪಥ ರಾಷ್ಟೀಯ ಹೆದ್ದಾರಿ ಸಂಖ್ಯೆ 66ರ ರಸ್ತೆಯಲ್ಲಿ ಅಂಕೋಲಾದ ವಿಟ್ಟಲ್ ಘಾಟ್ ಮತ್ತು ಭಟ್ಕಳ ತಾಲೂಕಿನ ಮೂಡ್ ಭಟ್ಕಳ ಹಾಗೂ ಕಾಯ್ಕಿಣಿ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣದ ಅವಶ್ಯಕತೆಯನ್ನು ಕೇಂದ್ರ ರಸ್ತೆ, ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಮನವಿ ನೀಡಿ ಗಮನಕ್ಕೆ ತಂದಿದ್ದೆ. ಸ್ಥಳೀಯ ನಾಗರಿಕರ ಬಹುಕಾಲದ ಬೇಡಿಕೆಯಾದ ಈ ವಿಷಯದ ಗಂಭೀರತೆಯನ್ನು ಮನಗಂಡ ಸಚಿವರು ತಕ್ಷಣವೇ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಅದರ ಫಲವಾಗಿ, ಈಗ ಈ ಕಾಮಗಾರಿಗಳಿಗಾಗಿ ತಾತ್ಕಾಲಿಕ ಅಂದಾಜು ಮೊತ್ತ ರೂ. 47 ಕೋಟಿ 48 ಲಕ್ಷಗಳನ್ನು ಮಂಜೂರು ಮಾಡಲಾಗಿದ್ದು. 40.37 ಕೋಟಿ ರೂಪಾಯಿ ಮೊತ್ತಕ್ಕೆ ಈ ಯೋಜನೆಯ ಟೆಂಡರ್ ಕರೆಯಲಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯು ಪ್ರಾರಂಭವಾಗಲಿದೆ. ಈ ಮೂಲಕ, ಈ ಪ್ರದೇಶದ ಜನರ ಬಹುದಿನಗಳ ಆಶಯವು ಈಡೇರಿದಂತಾಗಿದೆ.

ಇದನ್ನೂ ಓದಿ:-Bhatkal: ಅಂತಿಂತ ಕಳ್ಳ ಇವನಲ್ಲ ! ಬ್ಯಾಂಕ್ ನ ಲಾಕರ್ ನನ್ನೇ ಕದ್ದೊಯ್ದ ಹೈನಾತಿ ಮೇಲಿದೆ 16 ಕ್ಕೂ ಹೆಚ್ಚು ಪ್ರಕರಣ 

ನಾನು ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕಾಮಗಾರಿಯ ಮಹತ್ವವನ್ನು ಮನಗಂಡು ಕಾಮಗಾರಿಗಳಿಗೆ ಅನುದಾನವನ್ನು ಮಂಜೂರು ಮಾಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಈ ಸಹಕಾರದಿಂದಾಗಿ ಈ ಪ್ರದೇಶದ ಜನರ ರಸ್ತೆ ಸಂಪರ್ಕದಲ್ಲಿ ಮಹತ್ತರವಾದ ಸುಧಾರಣೆಯಾಗಲಿದೆ.

ಈ ಅಂಡರ್ ಪಾಸ್ ನಿರ್ಮಾಣದಿಂದ ಈ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯು ಸುಗಮವಾಗುವುದರ ಜೊತೆಗೆ, ರಸ್ತೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಇದು ಸ್ಥಳೀಯ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಈ ಯೋಜನೆಯು ನಮ್ಮ ಸರ್ಕಾರದ ಜನಪರ ಕಾಳಜಿ ಮತ್ತು ಅಭಿವೃದ್ಧಿಪರ ದೃಷ್ಟಿಕೋನಕ್ಕೆ ಒಂದು ನಿದರ್ಶನವಾಗಿದೆ. ಮುಂಬರುವ ದಿನಗಳಲ್ಲಿಯೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಗಳನ್ನು ನಾವು ಮುಂದುವರಿಸುತ್ತೇವೆ ಎಂದು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಗೋವಾ-ಕುಂದಾಪುರ ಹೆದ್ದಾರಿಯ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು?

ಈ ಹಿಂದೆ ಗೋವಾ-ಕರ್ನಾಟಕದ ಗಡಿಭಾಗದಿಂದ ಉಡುಪಿ ಜಿಲ್ಲೆ ಕುಂದಾಪುರದವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 17ರ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸರ್ಕಾರವು ದೇಶದ ಮೂಲೆ ಮೂಲೆಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ನವ ಭಾರತವನ್ನು ಸಂಪರ್ಕದ ಮೂಲಕ ಸಮೃದ್ಧಿಯ ಯುಗದತ್ತ ಕೊಂಡೊಯ್ಯಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ:-Uttara kannda ಪೊಲೀಸರ ಕರ್ತವ್ಯಕ್ಕೆ ಪೊಲೀಸರೇ ಅಡ್ಡಿ -ನಾಲ್ವರಿಗೆ ನ್ಯಾಯಾಂಗ ಬಂಧನ

ಈ ಹಿನ್ನೆಲೆಯಲ್ಲಿ ಗೋವಾ-ಕುಂದಾಪುರದವರೆಗೆ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಸುಮಾರು 187 ಕಿ.ಮೀ ಉದ್ದದ ಈ ಮಾರ್ಗವು ಒಂದು ಬದಿಯಲ್ಲಿ ಅರೇಬಿಯನ್ ಸಮುದ್ರ ಕರಾವಳಿ ಮತ್ತು ಇನ್ನೊಂದು ಬದಿಯಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಇದರ ರಮಣೀಯ ನೋಟದಿಂದಾಗಿ ಈ ಯೋಜನೆಯು ಪಶ್ಚಿಮ ಮತ್ತು ದಕ್ಷಿಣ ಭಾರತದ ನಡುವಿನ ಪ್ರಮುಖ ಕರಾವಳಿ ಹೆದ್ದಾರಿ ಸಂಪರ್ಕವಾಗಲಿದೆ ಎಂದು ತಿಳಿಸಿದ್ದರು.

ಇನ್ನು ಈ ಹೆದ್ದಾರಿ ಅಭಿವೃದ್ಧಿಯು ಕರಾವಳಿ ಭಾಗದ ಆರ್ಥಿಕ ಅಭಿವೃದ್ಧಿಗೆ ಹೊಸ ಭರವಸೆಗಳನ್ನು ನೀಡುತ್ತದೆ. ಹೊಸ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಬಹುಪಟ್ಟು ಅವಕಾಶಗಳನ್ನು ಒದಗಿಸುತ್ತದೆ. ಈ ಹೆದ್ದಾರಿ ಅಭಿವೃದ್ಧಿಯಿಂದ ಸ್ಥಳೀಯ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದಿದ್ದರು. ಅಲ್ಲದೇ ಒಂದು ವೇಳೆ ಈ ಹೆದ್ದಾರಿ ನಿರ್ಮಾಣವಾದರೆ ಗೋವಾದಿಂದ ಕರ್ನಾಟಕದ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಜೊತೆಗೆ ಈ ಭಾಗದಲ್ಲಿ ನಡೆಯುವ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಕರ್ನಾಟಕದ ಜನರು ಕಡಿಮೆ ವೆಚ್ಚದಲ್ಲಿ ಗೋವಾವನ್ನು ಹಾಗೂ ಗೋವಾದ ಜನರು ಕಡಿಮೆ ವೆಚ್ಚದಲ್ಲಿ ಕರ್ನಾಟಕಕ್ಕೆ ಪ್ರಯಾಣ ಬೆಳೆಸಬಹುದು. ಇದರಿಂದ ಅಂತರ್‌ ರಾಜ್ಯ ಸಂಪರ್ಕ ಹೆಚ್ಚುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ