Karwar|ಅಮೃತ್ ಓರಾ ಹೋಟೆಲ್ ಮಾಡಿಯಿಂದ ಬಿದ್ದು ಗಾಯಗೊಂಡ ವಿದೇಶಿಗ| ಆತ್ಮಹತ್ಯೆಗೆ ಯತ್ನವೋ? ಮದ್ಯದ ಅಮಲೋ ಪ್ರಶ್ನೆ ನೂರೆಂಟು!
Karwar|ಅಮೃತ್ ಓರಾ ಹೋಟೆಲ್ ಮಾಡಿಯಿಂದ ಬಿದ್ದು ಗಾಯಗೊಂಡ ವಿದೇಶಿಗ| ಆತ್ಮಹತ್ಯೆಗೆ ಯತ್ನವೋ? ಮದ್ಯದ ಅಮಲೋ ಪ್ರಶ್ನೆ ನೂರೆಂಟು!
Karwar news|16 :- ಹೋಟೆಲ್ ಮೇಲಿಂದ ಬಿದ್ದು ರಷ್ಯಾ ಪ್ರಜೆ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಕಾರವಾರ ನಗರದ(karwar) ಅಮೃತ್ ಓರಾ ಹೋಟೆಲ್ ನಲ್ಲಿ ನಡೆದಿದೆ.
ರಷ್ಯಾ ಮೂಲದ ಇವಾನ್ ಡೆನೆವಾ( 40) ಗಾಯಗೊಂಡ ವ್ಯಕ್ತಿಯಾಗಿದ್ದು ,ಕದಂಬ ನೌಕಾನೆಲೆಗೆ ಕೆಲಸಕ್ಕಾಗಿ ಬಂದಿದ್ದ ಇವಾನ್ ರಾತ್ರಿ ವೇಳೆ ಬಾಲ್ಕನಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
Karwar :ಕುಡಿದ ಮತ್ತಿನಲ್ಲಿ ಮಾವನಿಂದ ಅಳಿಯನ ಹ**
ಗಾಯಗೊಂಡ ರಷ್ಯಾ ಪ್ರಜೆಯನ್ನ ಗೋವಾದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಈಗ ಚೇತರಿಸಿಕೊಂಡಿದ್ದು,ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅಚಾನಕ್ ಆಗಿ ಮಾಡಿಯಿಂದ ಬೀಳಲು ಕಾರಣ ಏನು?
ಇನ್ನು ಬಹುಮಹಡಿ ಕಟ್ಟಡವಾಗಿರುವ ಈ ಹೋಟಲ್ ಹೊರಭಾಗದಲ್ಲಿ ಗ್ಲಾಸ್ ಗಳನ್ನು ಅಳವಡಿಸಲಾಗಿದೆ. ಹೀಗಿದ್ದರೂ ಈತ ಹೇಗೆ ಬಿದ್ದ ಎಂಬ ಪ್ರಶ್ನೆ ಏಳುವಂತೆ ಮಾಡಿದೆ. ಕೆಲವರು ಹೇಳುವ ಪ್ರಕಾರ ಮದ್ಯ ಸೇವಿಸಿ ಸಿಗರೇಟ್ ಸೇದಲು ಈತ ಕೊಠಡಿಯ ಹೊರಭಾಗದ ಗ್ಲಾಸ್ ಸರಿಸಿ ಹೊರಗೆ ಬಂದಿದ್ದು ಆಗ ಈತ ಕಾಲುಜಾರಿ ಕೆಳಕ್ಕೆ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ.ಇನ್ನು ಕೆಲವರು ಈತ ಆತ್ಮಹತ್ಯೆಗೆ ಪ್ರಯತ್ನಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ
Karnataka: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು? ವಿವರ ಇಲ್ಲಿದೆ ನೋಡಿ.
ಆದರೇ ಈ ಬಗ್ಗೆ ಪೊಲೀಸರು ವೈದ್ಯರ ಬಳಿ ಪರೀಕ್ಷೆ ನಡೆಸಿದ ನಂತರವೇ ತಿಳಿಯಬೇಕಿದೆ.ಆದರೇ ತಾನು ಕಾಲುಜಾರಿ ಬಿದ್ದಿರುವುದನ್ನ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಎಸ್.ಪಿ ದೀಪನ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿನೀಡಿ ಮಾಹಿತಿ ಪಡೆದಿದ್ದು ,ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಸಾಕಷ್ಟು ಊಹಾ ಪೂಹಗಳು ನಡೆಯುತಿದ್ದು ಪ್ರಕರಣ ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ.