For the best experience, open
https://m.kannadavani.news
on your mobile browser.
Advertisement

KSRTC ಬಸ್ ಚಾಲಕನಿಗೆ ದಂಪತಿಗಳಿಂದ ಚಪ್ಪಲಿಯಿಂದ ಹಲ್ಲೆ ಪ್ರಕರಣ ದಾಖಲು

KSRTC bus driver assaulted with slippers by a couple in Honnavar, Uttara Kannada. The incident on NH-66 near Maniki led to a police case against Sangeetha Rodrigues and Ashwin Joseph D’Souza.
10:22 PM Sep 01, 2025 IST | ಶುಭಸಾಗರ್
KSRTC bus driver assaulted with slippers by a couple in Honnavar, Uttara Kannada. The incident on NH-66 near Maniki led to a police case against Sangeetha Rodrigues and Ashwin Joseph D’Souza.
ksrtc ಬಸ್ ಚಾಲಕನಿಗೆ ದಂಪತಿಗಳಿಂದ ಚಪ್ಪಲಿಯಿಂದ ಹಲ್ಲೆ ಪ್ರಕರಣ ದಾಖಲು

KSRTC ಬಸ್ ಚಾಲಕನಿಗೆ ದಂಪತಿಗಳಿಂದ ಚಪ್ಪಲಿಯಿಂದ ಹಲ್ಲೆ ಪ್ರಕರಣ ದಾಖಲು.

Advertisement

ಕಾರವಾರ,:- ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavar)ರಾಷ್ಟ್ರೀಯ ಹೆದ್ದಾರಿ 66 ರ ಮಂಕಿಯಲ್ಲಿ ನಡೆದಿದೆ.ಸಂಗೀತಾ ರೋಡ್ರಿಗಸ್ ಹಾಗೂ ಅಶ್ವಿನ್ ಜೋಸೆಫ್ ಡಿಸೋಜಾ ಎಂಬವರೇ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದನೆ ಮಾಡಿ ಚಪ್ಪಲಿಯಿಂದ ಹಲ್ಲೆ ಮಾಡಿದವರಾಗಿದ್ದು ,ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಬಸ್ ಚಾಲಕ ಮಂಜುನಾಥ ಹಲ್ಲೆಗೊಳಗಾದವರಾಗಿದ್ದಾರೆ.

Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ
ಕುಮಟಾದಿಂದ ಭಟ್ಕಳಕ್ಕೆ ಎನ್ಎಚ್-66 ರಸ್ತೆಯಲ್ಲಿ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ,ಮಂಕಿ ಗಣೇಶ ನಗರದ ಬಳಿ ಬಸ್ ಮುಂದೆ ಹಸುವೊಂದು ಅಡ್ಡ ಬಂದ ಕಾರಣ ಬಸ್ ಚಾಲಕ ಎಡಬದಿಗೆ ಕೊಂಡೊಯ್ದಿದ್ದನು.

Kumta :ಕುಮಟಾದ ದೇವಿಮನೆ ಘಟ್ಟದಲ್ಲಿ ಭೂಕುಸಿತ -ಸಂಚಾರ ಬಂದ್ ಆಗುವ ಸಾಧ್ಯತೆ

ಬಸ್ ಏಕಾಏಕಿ ಎಡಬದಿಗೆ ಬಂತು ಎಂದು ಬಸ್ ಹಿಂಬದಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಆರೋಪಿಗಳು ಸಿಟ್ಟಾಗಿದ್ದು,ಮಂಕಿ ಜಂಕ್ಷನ್ ನಲ್ಲಿ ಬಸ್ ನಿಲ್ಲಿಸಿದಾಗ ಆರೋಪಿಗಳಿಬ್ಬರೂ ಚಾಲಕನ ಜತೆ ಕಾಲು ಕೆರೆದು ಜಗಳಕ್ಕಿಳಿದು ಆರೋಪಿ ಅಶ್ವಿನ್ ಡಿಸೋಜಾ ಕೊಂಕಣಿ ಭಾಷೆಯಲ್ಲಿ ಅವಾಚ್ಯವಾಗಿ‌ ನಿಂದಿಸಿದ್ರೆ, ಸಂಗೀತಾ ರೋಡ್ರಿಗಸ್‌ ಎಂಬಾಕೆಯು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ