KSRTC ಬಸ್ ಚಾಲಕನಿಗೆ ದಂಪತಿಗಳಿಂದ ಚಪ್ಪಲಿಯಿಂದ ಹಲ್ಲೆ ಪ್ರಕರಣ ದಾಖಲು
KSRTC ಬಸ್ ಚಾಲಕನಿಗೆ ದಂಪತಿಗಳಿಂದ ಚಪ್ಪಲಿಯಿಂದ ಹಲ್ಲೆ ಪ್ರಕರಣ ದಾಖಲು.
ಕಾರವಾರ,:- ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (honnavar)ರಾಷ್ಟ್ರೀಯ ಹೆದ್ದಾರಿ 66 ರ ಮಂಕಿಯಲ್ಲಿ ನಡೆದಿದೆ.ಸಂಗೀತಾ ರೋಡ್ರಿಗಸ್ ಹಾಗೂ ಅಶ್ವಿನ್ ಜೋಸೆಫ್ ಡಿಸೋಜಾ ಎಂಬವರೇ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದನೆ ಮಾಡಿ ಚಪ್ಪಲಿಯಿಂದ ಹಲ್ಲೆ ಮಾಡಿದವರಾಗಿದ್ದು ,ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಬಸ್ ಚಾಲಕ ಮಂಜುನಾಥ ಹಲ್ಲೆಗೊಳಗಾದವರಾಗಿದ್ದಾರೆ.
Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ
ಕುಮಟಾದಿಂದ ಭಟ್ಕಳಕ್ಕೆ ಎನ್ಎಚ್-66 ರಸ್ತೆಯಲ್ಲಿ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ,ಮಂಕಿ ಗಣೇಶ ನಗರದ ಬಳಿ ಬಸ್ ಮುಂದೆ ಹಸುವೊಂದು ಅಡ್ಡ ಬಂದ ಕಾರಣ ಬಸ್ ಚಾಲಕ ಎಡಬದಿಗೆ ಕೊಂಡೊಯ್ದಿದ್ದನು.
Kumta :ಕುಮಟಾದ ದೇವಿಮನೆ ಘಟ್ಟದಲ್ಲಿ ಭೂಕುಸಿತ -ಸಂಚಾರ ಬಂದ್ ಆಗುವ ಸಾಧ್ಯತೆ
ಬಸ್ ಏಕಾಏಕಿ ಎಡಬದಿಗೆ ಬಂತು ಎಂದು ಬಸ್ ಹಿಂಬದಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಆರೋಪಿಗಳು ಸಿಟ್ಟಾಗಿದ್ದು,ಮಂಕಿ ಜಂಕ್ಷನ್ ನಲ್ಲಿ ಬಸ್ ನಿಲ್ಲಿಸಿದಾಗ ಆರೋಪಿಗಳಿಬ್ಬರೂ ಚಾಲಕನ ಜತೆ ಕಾಲು ಕೆರೆದು ಜಗಳಕ್ಕಿಳಿದು ಆರೋಪಿ ಅಶ್ವಿನ್ ಡಿಸೋಜಾ ಕೊಂಕಣಿ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ರೆ, ಸಂಗೀತಾ ರೋಡ್ರಿಗಸ್ ಎಂಬಾಕೆಯು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.