Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ - ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ
Kumta: ಶಾಸಕ ದಿನಕರ್ ಶಟ್ಟಿ ಲೈಂಗಿಕ ಶೋಷಣೆ ಆರೋಪ ಆಡಿಯೋ ಪ್ರಕರಣ - ಕನ್ನಡವಾಣಿ ವಿರುದ್ಧ ತನಿಖೆಗೆ ಹೈಕೋರ್ಟ ತಡೆ
ಧಾರವಾಡ/ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ತಾಲೂಕಿನ ಬಿಜೆಪಿ ಶಾಸಕ ದಿನಕರ್ ಶಟ್ಟಿ ವಿರುದ್ಧವಾಗಿ ಲೈಂಗಿಕ ಶೋಷಣೆ ಮಾಡಿರುವ ಕುರಿತು ಮಹಿಳೆಯೊಬ್ಬರು ಮಾಡಿದ ಆರೋಪ ಕುರಿತು ಕನ್ನಡವಾಣಿ.ನ್ಯೂಸ್ ವರದಿ ಬಿತ್ತರಿಸಿತ್ತು.
ಈ ಕುರಿತು ಶಾಸಕರ ಆಪ್ತ ಹಾಗೂ ಗುತ್ತಿಗೆದಾರ ಮದುಸೂದನ್ ಹೆಗಡೆ ಎಂಬುವವರು ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ತನಿಖೆ ಕೈಗೊಂಡಿದ್ದ ಕುಮಟಾ ಠಾಣೆ ಸಿ.ಪಿ.ಐ ಯೋಗೇಶ್ ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಪ್ರಕರಣ ಸಂಬಂಧ ಕುಮಟಾ ದ ಖ್ಯಾತ ವಕೀಲರಾದ ಪ್ರಶಾಂತ್ ನಾಯಕ್ ಹಾಗೂ ಧಾರವಾಡದ ಹೈಕೋರ್ಟ ನ ಖ್ಯಾತ ವಕೀಲರಾದ ಸೌರಭ್ ಹೆಗಡೆ ಹೊಡ್ಲಮನ್ ವಾದ ಮಂಡಿಸಿದ್ದು ,ಮೊದಲು ಕುಮಟಾ ನ್ಯಾಯಾಲುದಲ್ಲಿ ಜಾಮೀನು ದೊರೆತಿತು. ಇದಲ್ಲದೇ ಕುಮಟಾ ನ್ಯಾಯಾಲಯದಲ್ಲಿ ನಾಲ್ಕು ವರದಿಗಾರರ ಮೇಲೆ ಸಲ್ಲಿಕೆಯಾಗಿದ್ದ ಮತ್ತೊಂದು ಪ್ರಕರಣದಲ್ಲಿ ಕುಮಟಾದ ನ್ಯಾಯವಾದಿಗಳಾದ ಪ್ರಶಾಂತ್ ನಾಯಕ್ ವಾದಮಂಡಿಸಿದ್ದು ಈ ಪ್ರಕರಣವನ್ನು ದೂರುದಾರರು ಹಿಂಪಡೆದಿದ್ದಾರೆ.
ಇನ್ನು ಆಡಿಯೋ ಪ್ರಸಾರವಾದ ಕುರಿತು ಗುತ್ತಿಗೆದಾರ ಮದುಸೂದನ್ ಹೆಗಡೆ ನೀಡಿದ ಪ್ರತ್ತೇಕ ದೂರಿನಲ್ಲಿ ಧಾರವಾಡ ಹೈಕೋರ್ಟ ತಡೆ ನೀಡಿದ್ದು ಕಾರಣ ಕೇಳಿ ದೂರುದಾರರಿಗೆ ನೋಟೀಸ್ ನೀಡಿದೆ.
ಧಾರವಾಡ ಹೈಕೋರ್ಟ ನಲ್ಲಿ ವಾದ ಮಂಡಿಸಿದ ಸೌರಭ್ ಹೆಗಡೆ ಹೊಡ್ಲಮನ್ ಅರೋಪಿ ಸ್ಥಾನದಲ್ಲಿ ಇರುವ ಅರ್ಜಿದಾರರು ಯಾವುದೇ ಅಪರಾಧ ಮಾಡಿಲ್ಲ, ಮಹಿಳೆ ನೀಡಿದ ಹೇಳಿಕೆಯನ್ನು ಮಾತ್ರ ಪ್ರಕಟಿಸಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಂಡು ಅರ್ಜಿದಾರರಿಗೆ ಕಿರುಕುಳ ನೀಡಲಾಗುತ್ತಿದೆ ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ದರು.
ಈ ಕುರಿತು ವಾದ ಆಲಿಸಿದ ಧಾರವಾಡ ಹೈಕೊರ್ಟ ಪೀಠ ಮುಂದಿನ ಆದೇಶದ ವರೆಗೂ ಕನ್ನಡವಾಣಿ ವಿರುದ್ಧ ತನಿಖೆಗೆ ತಡೆ ನೀಡಿದ್ದು , ದೂರು ನೀಡಿದ್ದ ಮಧುಸೂದನ್ ಹೆಗಡೆಗೆ ಕಾರಣ ಕೇಳಿ ನೋಟಿಸ್ ನೀಡಿದೆ.
ಪ್ರಕರಣ ಏನಾಗಿತ್ತು?
ಕುಮಟಾ ಶಾಸಕ ದಿನಕರ್ ಶಟ್ಟಿ ಮನೆಯಲ್ಲಿ 80 ಸಾವಿರ ಕಳ್ಳತನವಾದ ಕುರಿತು ಕನ್ನಡವಾಣಿಯಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ಈ ಕುರಿತು ಅವರ ಬೆಂಬಲಿಗರು ಕೋರ್ಟ ನಲ್ಲಿ ಅನುಮತಿ ಪಡೆದು ಕನ್ನಡವಾಣಿಯೂ ಸೇರಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿತ್ತು.
ಇದರ ಬೆನ್ನಲ್ಲೇ ಶಾಸಕರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಹಿಳೆಯನ್ನು ವರದಿಗಾರರು ಸಂಪರ್ಕಿಸಿದಾಗ ಆ ಮಹಿಳೆ ಶಾಸಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.
ಇನ್ನು ಕಾರವಾರದಲ್ಲಿ ಬಿಜೆಪಿ ಮುಖಂಡ ವಕೀಲ ನಾಗರಾಜ್ ನಾಯ್ಕ ಹಾಗೂ ಯಲ್ಲಾಪುರದ ಬಿಜೆಪಿ ಮುಖಂಡ ಪ್ರಮೋದ್ ಹೆಗಡೆ ರವರು ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟೀಕರಣ ನೀಡಿದ್ದರು.
ಇದಲ್ಲದೇ ಶಾಸಕರ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿಗಳಿದ್ದರೆ ನೀಡಿ ಎಂದು ಪತ್ರಕರ್ತರಿಗೆ ಸವಾಲು ಹಾಕಿದ್ದರು. ಸುದ್ದಿ ಕೇವಲ ಕಳ್ಳತನದ್ದಾದರೂ ಕುಂಬಳಕಾಯಿ ಕಳ್ಳ ಯಾರು ಎಂದು ಹೆಗಲು ಮುಟ್ಟಿಕೊಂಡ ಶಾಸಕರ ಆಪ್ತರ ಪ್ರಶ್ನೆಗೆ ಕನ್ನಡವಾಣಿ ಸಾಕ್ಷಿ ನೀಡಿತ್ತು. ಇದು ಅವರ ತೇಜೋವಧೆ ಮಾಡುವ ಇರಾದೆಯ ಸುದ್ದಿ ಖಂಡಿತಾ ಆಗಿರಲಿಲ್ಲ.
ಆದರೂ ಆ ಮಹಿಳೆ ಮಾಡಿದ ಆರೋಪ ಶೋಷಣೆಯದ್ದಾಗಿತ್ತು. ಹೀಗಾಗಿಯೇ ನಾವು ಅನ್ಯಾಯವಾಗಿದ್ದರೇ ಕಾನೂನಿನ ಮೂಲಕ ಹೋರಾಡುವಂತೆ ಆಕೆಗೆ ಹೇಳಿದ್ದೆವು. ಆದರೇ ಆ ಮಹಿಳೆ ಕಾರಣಾಂತರದಿಂದ ಆ ಗೋಜಿಗೆ ಹೋಗಲಿಲ್ಲ.
ಆಕೆ ಮಾಡಿದ ಆರೋಪ ಸುಳ್ಳಾಗಿರಬಹುದು ಅಥವಾ ಸತ್ಯವೇ ಆಗಿರಬಹುದು ಅದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ನಾವು ಕಳ್ಳತನದ ಸುದ್ದಿ ಮಾಡಿದ್ದರಿಂದ ಆ ಸುದ್ದಿಗೆ ಬದ್ದರಾಗಿದ್ದೇವೆ.
ಸದ್ಯ ಈ ಪ್ರಕರಣಕ್ಕೆ ಹೈಕೋರ್ಟ ಮೊದಲ ಆರೋಪಿಯಾಗಿರುವ ಕನ್ನಡವಾಣಿ ತನಿಖೆಗೆ ತಡೆಯಾಜ್ಞೆ ನೀಡಿದ್ದು ,ನಮ್ಮನ್ನು ಬೆಂಬಲಿಸಿ ನಿಂತ ಓದುಗರಿಗೂ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದಮಂಡಿಸಿದ ನ್ಯಾಯವಾದಿಗಳಿಗೆ ಕನ್ನಡವಾಣಿ ತಂಡ ಧನ್ಯವಾದ ಸಲ್ಲಿಸುತ್ತದೆ