Mysore:ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ! ಬೀದಿಗಿಳಿದ ವಂಚಿತರು!
Mysore:ಸಚಿವ ಮಹಾದೇವಪ್ಪ ಹೆಸರಿನಲ್ಲಿ ವಂಚನೆ! ಬೀದಿಗಿಳಿದ ವಂಚಿತರು!
ಮೈಸೂರು:- ಸಚಿವ ಹೆಚ್ ಸಿ ಮಹದೇವಪ್ಪ ಹೆಸರಿನಲ್ಲಿ ಮಹಿಳೆಯರು ಹಾಗೂ ಯುವಕರಿಗೆ ಮಹಿಳೆಯೊಬ್ಬಳು ವಂಚಿಸಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.
ತಾನು ಸಚಿವರ ಆಪ್ತೆ ಯೆಂದು ತನ್ನದೇ ಗ್ರಾಮದ ಜನರಿಗೆ ನಂಬಿಸಿ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು, ಸಾಲ ಕೊಡಿಸುವುದಾಗಿ ನೂರಾರು ಮಹಿಳೆಯರು ಹಾಗೂ ಯುವಕರಿಂದ ಲಕ್ಷಾಂತರ ರೂ ಹಣವನ್ನು ಪಡೆದು ಜ್ಯೋತಿ ಎಂಬ ಮಹಿಳೆ ವಂಚಿಸಿದ್ದಾಳೆ.
ತನ್ನ ಊರಿನವಳೇ ಆದ್ದರಿಂದ ಗ್ರಾಮದ ಜನರು ಸಹ ಹಣ ನೀಡಿದ್ದಾರೆ. ಆದರೇ ಎಲ್ಲಿ ಸರ್ಕಾರದ ಸವಲತ್ತುಗಳು ,ಸಾಲಗಳು ಸಿಗಲಿಲ್ಲವೂ ಮಹಿಳೆಯ ವಂಚನೆ ಬೆಳಕಿಗೆ ಬಂದಿದೆ.
Karnataka NHPC recruitment|248 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ
ಬರೋಬ್ಬರಿ 27 ಲಕ್ಷ ರೂ ವರೆಗೆ ಹಣ ವಂಚನೆ ಮಾಡಿದ್ದು ಬೆಳಕಿಗೆ ಬಂದಿದ್ದು ವಂಚನೆಗೊಳಗಾದ ಗ್ರಾಮಸ್ಥರು ಮೈಸೂರು(mysore) ಜಿಲ್ಲೆಯ ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು,ನ್ಯಾಯ ಕೊಡಿಸುವಂತೆ ಪೋಲೀಸರಿಗೆ ಮೊರೆ ಇಟ್ಟಿದ್ದಾರೆ.