ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Pakistan:ಪಾಕ್‌ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಉದ್ಯೋಗಿ ಅರೆಸ್ಟ್‌

ನವದೆಹಲಿ: ಈ ಹಿಂದ ದೇಶದ ನೌಕಾದಳದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಐದಕ್ಕೂ ಹೆಚ್ಚು ಜನರನ್ನು NIA ಬಂಧಿಸಿತ್ತು. ಕಾರವಾರ ಸೇರಿದಂತೆ ಹಲವು ಕಡೆ ಪಾಕಿಸ್ತಾನಕ್ಕೆ ಹಣದ ಅಮೇಶ ಕ್ಕೆ ಬಲಿಯಾಗಿ ನೌಕಾದಳದ ಮಾಹಿತಿಯನ್ನು ನೀಡುತಿದ್ದರು.
12:59 PM Jun 26, 2025 IST | ಶುಭಸಾಗರ್
ನವದೆಹಲಿ: ಈ ಹಿಂದ ದೇಶದ ನೌಕಾದಳದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಐದಕ್ಕೂ ಹೆಚ್ಚು ಜನರನ್ನು NIA ಬಂಧಿಸಿತ್ತು. ಕಾರವಾರ ಸೇರಿದಂತೆ ಹಲವು ಕಡೆ ಪಾಕಿಸ್ತಾನಕ್ಕೆ ಹಣದ ಅಮೇಶ ಕ್ಕೆ ಬಲಿಯಾಗಿ ನೌಕಾದಳದ ಮಾಹಿತಿಯನ್ನು ನೀಡುತಿದ್ದರು.

Pakistan:ಪಾಕ್‌ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಉದ್ಯೋಗಿ ಅರೆಸ್ಟ್‌.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ನವದೆಹಲಿ: ಈ ಹಿಂದ ದೇಶದ ನೌಕಾದಳದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಐದಕ್ಕೂ ಹೆಚ್ಚು ಜನರನ್ನು NIA ಬಂಧಿಸಿತ್ತು. ಕಾರವಾರ ಸೇರಿದಂತೆ ಹಲವು ಕಡೆ ಪಾಕಿಸ್ತಾನಕ್ಕೆ ಹಣದ ಅಮೇಶ ಕ್ಕೆ ಬಲಿಯಾಗಿ ನೌಕಾದಳದ ಮಾಹಿತಿಯನ್ನು ನೀಡುತಿದ್ದರು.

ಇದರ ಬೆನ್ನಲ್ಲೇ ಇದೀಗ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನದ (Pakistan) ಪರ ಬೇಹುಗಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ (Rajasthan Police) ಗುಪ್ತಚರ ವಿಭಾಗ ಬಂಧಿಸಿದೆ.

ಇದನ್ನೂ ಓದಿ:-Karnataka Navy day ದೀಪಾಲಂಕಾರ ಗೊಂಡ ನೌಕೆಗಳು ಹೇಗಿತ್ತು ಗೊತ್ತಾ | ವಿಡಿಯೋ ನೋಡಿ

Advertisement

ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್  ನೌಕಾದಳದ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಈತನನ್ನು 1923 ರ  ರಹಸ್ಯಕಾಯ್ದೆಯಡಿ ರಾಜಸ್ತಾನದ ಪೊಲೀಸರು ಬಂಧಿಸಿದ್ದಾರೆ.

ಯಾದವ್  ದೆಹಲಿಯ ಡಾಕ್‌ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ. ಈತ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ. ನೌಕಾ ಕಾರ್ಯಾಚರಣೆಯ ನಿರ್ಣಾಯಕ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಪಡೆಯಲು ಆಕೆ ವಿಶಾಲ್ ಯಾದವ್‌ಗೆ ಹಣದ ಆಮಿಷ ಒಡ್ಡಿದ್ದಳು.

ಇದನ್ನೂ ಓದಿ:-Karwar :ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ -ಇಬ್ಬರು ಆರೋಪಿಗಳು NIA ವಶಕ್ಕೆ.

ಯಾದವ್ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದ ಈತ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಆತ ಸೂಕ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ. ಈತನಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು

ವಿಶಾಲ್‌ ಫೋನ್‌ ಚಾಟ್‌ ವಿವರ ಸೇರಿದಂತೆ ಹಲವು ದಾಖಲೆಗಳಿಂದ ಈತ ಮಾಹಿತಿ ಸೋರಿಕೆ ಮಾಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಈತ ದೀರ್ಘಕಾಲದಿಂದ ಬೇಹುಗಾರಿಕೆ ಮಾಡುತ್ತಿದ್ದು, ಅದರಲ್ಲೂ ಆಪರೇಷನ್ ಸಿಂಧೂರ್ ಸಮಯದಲ್ಲಿ ನೌಕಾ ಸೇನೆಯ ರಹಸ್ಯ ವಿವರ ಸೋರಿಕೆ ಮಾಡಿದ್ದ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

Advertisement
Tags :
DelhiIndiainformation leakNavynavy employoperation sindhurirajasthan police
Advertisement
Next Article
Advertisement