ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Rain Alert: ರಾಜ್ಯದ ಕರಾವಳಿಯಲ್ಲಿ ಜೂನ್ 26 ರ ವರೆಗೆ ಮಳೆ

ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ (Monsoon Rain) ಆರ್ಭಟ ಮುಂದುವರಿಯಲಿದೆ. ಜೂನ್‌ 26ರ ವರೆಗೆ ಕರಾವಳಿ (Karavali
10:29 PM Jun 20, 2025 IST | ಶುಭಸಾಗರ್
ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ (Monsoon Rain) ಆರ್ಭಟ ಮುಂದುವರಿಯಲಿದೆ. ಜೂನ್‌ 26ರ ವರೆಗೆ ಕರಾವಳಿ (Karavali

Rain Alert: ರಾಜ್ಯದ ಕರಾವಳಿಯಲ್ಲಿ ಜೂನ್ 26 ರ ವರೆಗೆ ಮಳೆ

Advertisement

ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ (Monsoon Rain) ಆರ್ಭಟ ಮುಂದುವರಿಯಲಿದೆ. ಜೂನ್‌ 26ರ ವರೆಗೆ ಕರಾವಳಿ (Karavali) ಭಾಗದಲ್ಲಿ ಭಾರೀ ಮಳೆ ಆಗಲಿದ್ದು, ಉಳಿದೆಲ್ಲಾ ಕಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ (Dakshina Kannada), ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರ ವರೆಗೂ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ(shivamogga)  ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ

ಇದನ್ನೂ ಓದಿ:-Uttara kannada :ನೆಮ್ಮದಿ ಕದ್ದ ಮಳೆ -ಈ ಪ್ರದೇಶಗಳು ಜನರ ಓಡಾಟಕ್ಕೆ ನಿಷೇಧ! 

Advertisement

ಇನ್ನುಳಿದಂತೆ ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಇರಲಿದೆ. ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ, ಅಂಕೋಲಾ, (ankola) ಪುತ್ತೂರ್, ಮೂಡುಬಿದಿರೆ, ಬಂಟವಾಳ, ಸಿದ್ದಾಪುರ, ಮಾಣಿ, ಕಾರವಾರ, (karwar) ಮುಂಡಗೋಡಿನಲ್ಲಿ ಸಾಧಾರಣ ಮಲೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ.

ಉತ್ತರ ಕನ್ನಡ ಮಳೆ ವಿವರ

ಜೂನ್ 21 ರಂದು ಜಿಲ್ಲೆಯಲ್ಲಿ ಅಲ್ಲಲ್ಲಿ ಭಾರಿ ಮತ್ತು ಮಧ್ಯಮ ಮಳೆಯಾಗಲಿದ್ದು ,ಗಾಳಿಯ ಪ್ರಮಾಣ 30 ರಿಂದ 40 ಕಿ.ಮಿ ವೇಗ ಪಡೆಯಲಿದೆ.

ಜೂನ್ 22 - ಜಿಲ್ಲೆಯ ಕರಾವಳಿಯ ಭಟ್ಕಳ,ಹೊನ್ನಾವರ ಭಾಗದಲ್ಲಿ ಅಲ್ಲಲ್ಲಿ ಹೆಚ್ಚಿನ ಮಳೆಯಾಗಲಿದ್ದು ಉಳಿದಂತೆ ಜಿಲ್ಲೆಯಲ್ಲಿ ಆಗಾಗ ಅಲ್ಪ ಹಾಗೂ ಬಿರುಸಿನ ಮಳೆ ಸುರಿಯಲಿದೆ.

ಜೂನ್,23,24 ,25 ,26 ರಂದು ಗಾಳಿಯ ವೇಗ ಕರಾವಳಿಯಲ್ಲಿ 30 ರಿಂದ 40 ಕಿ.ಮಿ ಇದ್ದು ಅಲ್ಲಲ್ಲಿ ಚದುರಿದ ಭಾರಿ ಮಳೆಯಾಗಲಿದೆ.

Advertisement
Tags :
Costal karnatakaKarnatakaNewsRain AlartRsinಉತ್ತರ ಕನ್ನಡಮಳೆ
Advertisement
Next Article
Advertisement