Shivamogga|ಲಿಂಗನಮಕ್ಕಿ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
Shivamogga|ಲಿಂಗನಮಕ್ಕಿ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ವಿಡಿಯೋ ನೋಡಿ:-
ಕಾರವಾರ/ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ (shivamogga) ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ 11 ಗೇಟ್ ತೆರೆದು 15 ಸಾವಿರ ಕ್ಯೂಸೆಕ್ ನೀರನ್ನು ಇಂದು ಹೊರಕ್ಕೆ ಬಿಡಲಾಗಿದೆ.
ನಿನ್ನೆ ದಿನ ಶೇ .93.87 ರಷ್ಟು ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿತ್ತು.48,393 ಕ್ಯೂಸೆಕ್ ನೀರು ಒಳ ಹರಿವು ಇದ್ದು 142.33 ಟಿ.ಎಂಸಿ ನೀರು ಸಂಗ್ರಹವಾಗಿತ್ತು . ಇಂದು ಸಂಪೂರ್ಣ ಭರ್ತಿಯಾಗಿದ್ದರಿಂದ 11 ಕ್ರಸ್ಟ್ ಗೇಟ್ ಗಳನ್ನು ಮೇಲೆತ್ತಿ 15 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತಿದ್ದು ಶರಾವತಿ ನದಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಈ ಹಿನ್ನಲೆಯಲ್ಲಿ ನೀರನ್ನು ಹೊರಬಿಡಲಾಗಿದೆ.
ಇದನ್ನೂ ಓದಿ:-Sagar: ಕೈ ನಾಯಕ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ
ಇನ್ನು ನೀರು ಬಿಟ್ಟ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ನದಿ ಪಾತ್ರದ ಜನರಿಗೆ ಅಲರ್ಟ ನೀಡಲಾಗಿದೆ.ನದಿ ಭಾಗದ ತಗ್ಗು ಪ್ರದೇಶ ದಲ್ಲಿ ಪ್ರವಾಹದ ಎಚ್ಚರಿಕೆ ಯನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೀಡಿದೆ. ಈಗ ಬಿಡುಗಡೆಯಾದ ನೀರು ಕಾರ್ಗಲ್ ಮೂಲಕ ಹೊನ್ನಾವರ ಭಾಗದ ಗೇರುಸೊಪ್ಪ ಡ್ಯಾಮ್ ಗೆ ಹರಿದುಬರುತ್ತದೆ. ಇಲ್ಲಿ ಪುನಹಾ ವಿದ್ಯುತ್ ಉತ್ಪಾದನೆ ನಡೆಸಿ ನೀರನ್ನು ಹೊರಕ್ಕೆ ಬಿಡಲಾಗುತ್ತದೆ. ನಂತರ ಈ ನೀರು ಅರಬ್ಬಿ ಸಮುದ್ರ ಸೇರುತ್ತದೆ.
ಇದನ್ನೂ ಓದಿ:-Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ