Sigandur: ಲಾಂಚ್ ಸ್ಥಗಿತವಾಗುತ್ತಾ?ಗುತ್ತಿಗೆ ಸಿಬ್ಬಂದಿಗೆ ಬಾರದ ಸಂಬಳ -ಬಂದರು ಸಚಿವರು ಹೇಳಿದ್ದಿಷ್ಟು?
Sigandur: ಲಾಂಚ್ ಸ್ಥಗಿತವಾಗುತ್ತಾ?ಗುತ್ತಿಗೆ ಸಿಬ್ಬಂದಿಗೆ ಬಾರದ ಸಂಬಳ -ಬಂದರು ಸಚಿವರು ಹೇಳಿದ್ದಿಷ್ಟು?
ಕಾರವಾರ:- ಶಿವಮೊಗ್ಗ (shivamogga) ಜಿಲ್ಲೆಯ ಸಿಗಂದೂರಿಗೆ ತೆರಳುವ ಕಳಸವಳ್ಳಿ-ಅಂಬಾರಗೋಡ್ಲು ನಡುವಿನ ಸಿಗಂದೂರು(sigandur) ಸೇತುವೆ ಉದ್ಘಾಟನಾ ಹಂತಕ್ಕೆ ಬಂದು ನಿಂತಿದೆ. ಜುಲೈ 14 ರಂದು ಉದ್ಘಾಟನೆ ಗೊಳ್ಳಬೇಕಿದ್ದ ದೇಶದ ಎರಡನೇ ಅತೀ ದೊಡ್ಡ ಸೇತುವೆ ಇದೀಗ ಮಳೆ ಕಾರಣದಿಂದ ಮುಂದೂಡಲ್ಪಟ್ಟಿದೆ.
ಸೇತುವೆಯೇನೋ ಅತೀ ಶೀಘ್ರದಲ್ಲಿ ಉದ್ಘಾಟನೆ ಗೊಳ್ಳಲಿದೆ .ಆದರೇ ಹಲವು ದಶಕದಿಂದ ಇಲ್ಲಿನ ಜನರ ಸಂಕಷ್ಟಕ್ಕೆ ಸೇತುವೆಯಂತಿದ್ದ ಲಾಂಚ್ ನಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಆಧಾರದ ನೌಕರ ಬದುಕು ಬೀದಿಗೆ ಬಂದಿದೆ.
ಇದನ್ನೂ ಓದಿ:-Sagar:ಸಾಗರದ ರಾಮಕೃಷ್ಣ ವಿದ್ಯಾಲಯಕ್ಕೆ ಮಕ್ಕಳ ಅಡ್ಮೀಶನ್ ಮಾಡಿಸುವ ಮುಂಚೆ ಎಚ್ಚರ!
ಸಾಗರ(sagar) ತಾಲೂಕಿನ ಮಪ್ಪಾನೆ ,(muppane) ಹಸಿರುಮಕ್ಕಿ, ತಲಕಳಲೆ ,ಅಂಬಾರಗೊಡ್ಲು-ಕಳಸವಳ್ಳಿ ಯ ಒಟ್ಟು ನಾಲ್ಕು ಕಡೆ ಲಾಂಚ್ ಗಳು ಇದ್ದು ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಸುಪರ್ದಿಗೆ ಬರುತ್ತದೆ.
ಇಲ್ಲಿನ ಲಾಂಚ್ ಗಳಲ್ಲಿ ಹದಿನೆಂಟು ಜನರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ನಾಲ್ಕು ತಿಂಗಳಿಂದ ಈ ಗುತ್ತಿಗೆ ಕಾರ್ಮಿಕರಿಗೆ ಸಂಬಳ ಸಂದಾಯವಾಗಿಲ್ಲ. ಮಾಹಿತಿಗಳ ಪ್ರಕಾರ ಜನವರಿ, ಮಾರ್ಷ,ಮೇ ಮತ್ತು ಜೂನ್ ತಿಂಗಳ ಸಂಬಳ ನೀಡಿಲ್ಲ.
ಇದರ ಮಧ್ಯೆ ಪೆಬ್ರವರಿ ,ಎಪ್ರಿಲ್ ತಿಂಗಳ ಸಂಬಳವನ್ನು ಇವರ ಖಾತೆಗೆ ಹಾಕಲಾಗಿದೆ. ಆದರೇ ಹಲವು ತಿಂಗಳಿಂದ ಪಿ.ಎಪ್ ಸಹ ನೀಡದೇ ಇವರನ್ನು ದುಡಿಸಿಕೊಳ್ಳಲಾಗುತ್ತಿದೆ. ಇನ್ನು ಕೆಲವರಿಗೆ 2024 ರ ಜನವರಿಯಿಂದ ಎಪ್ರಿಲ್ ತಿಂಗಳ ಸಂಬಳವನ್ನೇ ನೀಡಿಲ್ಲ. ಆದರೂ ಯಾವುದೇ ನೋವು ತೋಡಿಕೊಳ್ಳದೇ ಜನರನ್ನು ಒಂದುಕಡೆಯಿಂದ ಇನ್ನೊಂದುಕಡೆ ಸಾಗಿಸುವಲ್ಲಿ ಸೇತುವೆಯಂತೆ ಕಾರ್ಯ ನಿರ್ವಹಿಸುತಿದ್ದಾರೆ.
ಇದನ್ನೂ ಓದಿ:-Sagar: ಕೈ ನಾಯಕ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ
ಇನ್ನು ಅಂಬಾರಗೊಡ್ಲು-ಕಳಸವಳ್ಳಿ ಬಳಿಯ ಸಿಗಂದೂರು ಸೇತುವೆ ಪ್ರಾರಂಭವಾದರೇ ಹಲವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಈ ಕುರಿತು ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವ ಮಂಕಾಳು ವೈದ್ಯ ಕಾರವಾರದಲ್ಲಿ ಮಾತನಾಡಿದ್ದು ಅಂಬಾರಗೊಡ್ಲು-ಕಳಸವಳ್ಳಿ ಭಾಗದ ಲಾಂಚ್ ಗಳನ್ನು ಸೇತುವೆಯಾದ ನಂತರವೂ ಮುಂದುವರೆಸುವ ಚಿಂತನೆ ಇದೆ. ಸಾರ್ವಜನಿ ಸಹಭಾಗಿತ್ವದಲ್ಲಿ ಟೆಂಡರ್ ಕರೆದು ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ನೀಡಬೇಕು ಎಂಬುದಿದ್ದು ಮುಂದಿನ ದಿನದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ, ಸದ್ಯ ಆ ಭಾಗದಲ್ಲಿ ಬಂದರು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಯಾವ ಗುತ್ತಿಗೆ ಸಿಬ್ಬಂದಿಯ ವೇತನ ಬಾಕಿ ಇಲ್ಲ, ಒಂದುವೇಳೆ ಬಾಕಿ ಇದ್ದರೇ ತಮ್ಮ ಗಮನಕ್ಕೆ ತಂದರೇ ತಕ್ಷಣ ವೇತನ ಪಾವತಿ ಮಾಡಲಾಗುತ್ತದೆ ಎಂದಿದ್ದಾರೆ.
ಆದರೇ ಸಚಿವರಿಗೂ ಸಹ ಈ ಬಗ್ಗೆ ಮಾಹಿತಿ ಕೊರತೆಯಿದ್ದು ಗುತ್ತಿಗೆ ಆಧಾರದಲ್ಲಿ ಲಾಂಚ್ ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಸಮರ್ಪಕ ಸಂಬಳ ಬಾರದೇ ತೊಂದರೆಗೆ ಸಿಲುಕಿದ್ದು ಬಂದರು ಇಲಾಖೆ ಈ ಬಡ ಕಾರ್ಮಿಕರಿಗೆ ಸಂಬಳ ನೀಡಲು ಕ್ರಮವಹಿಸಬೇಕಿದೆ.