For the best experience, open
https://m.kannadavani.news
on your mobile browser.
Advertisement

Siddapur|ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು ,ಮಾವೋವಾದಿಗಳು ಜಿಹಾದಿಗಳು ಇದ್ದಾರೆ-ಚಕ್ರವರ್ತಿ ಸೂಲಿಬೆಲೆ

ಕಾರವಾರ:- ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು ,ಮಾವೋವಾದಿಗಳು ಜಿಹಾದಿಗಳು ಇದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.
10:05 PM Aug 28, 2025 IST | ಶುಭಸಾಗರ್
ಕಾರವಾರ:- ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು ,ಮಾವೋವಾದಿಗಳು ಜಿಹಾದಿಗಳು ಇದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.
siddapur ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು  ಮಾವೋವಾದಿಗಳು ಜಿಹಾದಿಗಳು ಇದ್ದಾರೆ ಚಕ್ರವರ್ತಿ ಸೂಲಿಬೆಲೆ

Siddapur|ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು ,ಮಾವೋವಾದಿಗಳು ಜಿಹಾದಿಗಳು ಇದ್ದಾರೆ-ಚಕ್ರವರ್ತಿ ಸೂಲಿಬೆಲೆ

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಕಾರವಾರ:- ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು ,ಮಾವೋವಾದಿಗಳು ಜಿಹಾದಿಗಳು ಇದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(siddapur) ತಾಲೂಕಿನ ಮಾವಿನಗುಂಡಿಯಲ್ಲಿ ಖಾಸಗಿ ವಾಹಿನಿ  ಜೊತೆ ಮಾತನಾಡಿದ ಅವರು ಸೌಜನ್ಯ ಪ್ರಕರಣದಲ್ಲಿ ಔಟ್ ಪುಟ್ ಹೊರಗೆ ಬರದೇ ಇದ್ದುದರಿಂದ ಮಾವೂ ವಾದಿಗಳ ಮುಖವಾಡ ಕಳಚಿ ಅವರ ಹಿಂದೆ ಬಂದು ಗಿರೀಶ್ ಮಟ್ಟಣ್ಣನವರ್ ಎಂಟ್ರಿಯಾಗುತ್ತದೆ.

ಧರ್ಮಸ್ಥಳವನ್ನು ಕಿತ್ತುಕೊಳ್ಳಬೇಕು ಎಂಬ ಹುಳ ಅವರಲ್ಲಿ ಹೊಕ್ಕಿದೆ.ಒಬ್ಬ ಮುಸ್ಲೀಂ ಕರ್ನಾಟಕದ ತನ್ನ ಮಸೀದಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತೆತ್ತದವನು ಸೌಜನ್ಯ  ಪ್ರಕರಣ ಹಿಡಿದುಕೊಂಡು ಇಲ್ಲಿಗೆ ಏಕೆ ಬಂಬ ಪ್ರಶ್ನೆ ಏಳುತ್ತದೆ.ಸಮೀರ್ ಹಿಂದಿನ ಬ್ಯಾಕಪ್ ಎಡಪಂಥೀಯರದ್ದು . 2012 ರಲ್ಲಿ ಗಿರೀಶ್ ಮಟ್ಟಣ್ಣನವರ್ ಮೊದಲು ಸೌಜನ್ಯ ಪ್ರರಣದಲ್ಲಿ ಹಿಡಿದುಕೊಂಡು ಬಂದ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಗಲಾಟೆ ಮಾಡಿದ್ದ .

ಇದೇ 2013 ರಲ್ಲಿ  ಸಂತೋಷ್ ರಾವ್ ನನ್ನು ಹಿಡಿದುಕೊಂಡು ಆರೋಪಿ ಅಲ್ಲ ಎಂದು ಹೇಳುತ್ತಾನೆ ಇದರಲ್ಲಿ ವೀರೇಂದ್ರ ಹೆಗಡೆ ಪರಿವಾರದವರ ಹೆಸರು ಸೇರಿಸುತ್ತಾನೆ , ಸ್ಟಾನ್ಲಿ ಒಡನಾಡಿ ಸಂಸ್ಥೆ ಮೂಲಕ ಎಂಟ್ರಿಯಾಗಿ ಮನೆ ಮನೆಗೂ ಹೂಗಿ ಪ್ರಚಾರ ಮಾಡುತ್ತಾರೆ,ಗಿರೀಶ್ ಮಟ್ಟಣ್ಣನವರ್ ಎಂಟ್ರಿ ಆದಮೇಲೆ ಅವರ ಪೊಲೀಸ್ ಬುದ್ದಿ ಬಳಸಿಕೊಂಡು ಇಲ್ಲಿ ನಡೆಯುವ ಪ್ರತಿಯೊಂದು ಸಾವನ್ನೂ ಧರ್ಮಸ್ಥಳಕ್ಕೆ ಟ್ಯಾಗ್ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ:-Karnataka| ರಾಜ್ಯದಲ್ಲಿ ಇನ್ನೂ ಐದು ದಿನ ಮಳೆ ,ಹೇಗಿರಲಿದೆ ವಾತಾವರಣ ವಿವರ ನೋಡಿ

ಸೌಜನ್ಯ ಪ್ರಕರಣದಿಂದ ಹೊರಬಂದ ಸಂತೋಷ್ ರಾವ್ ಮುಂದಿಟ್ಟುಕೊಂಡು ಧರ್ಮಸ್ಥಳವನ್ನು ಮುಗಿಸುವ ಧಾವಂತ ಇತ್ತು ಆಗ ಸಮೀರ್ ನನ್ನು ಕರೆತಂದರು ಅಲ್ಲಿಗೆ ಜಿಯಾದಿ ಎಲಿಮಿನೇಟ್ ಗಳ ಎಂಟ್ರಿ ಆಗುತ್ತದೆ.

ಒಬ್ಬ ಮುಸಲ್ಮಾನ ಬಂದ ಎಂದರೇ ಇದರಲ್ಲಿ ಏನೋ ಇರಬೇಕು ಎಐ ವಿಡಿಯೋ ಮಾಡಲು ದುಡ್ಡು ಎಲ್ಲಿಂದ ಬಂತು ,ಮೊದಲು ಎಡಪಂಥೀಯರು ಬಂದರು ಅದರ ಹಿಂದೆ ಇವಾಂಜಿಸ್ಟ್ ಗಳು ಬಂದರು ,ಅವರ ಹಿಂದೆ ಜಿಹಾದಿಗಳು ಬಂದರು.ಜಿಹಾದಿ ಎಲಿಮೇಟ್ ಮೂಲಕ ಮೊದಲ ಹೆಜ್ಜೆಯಾಗಿ ಸಮೀರ್ ಮುಂದಕ್ಕೆ ಬಂದಿದ್ದಾನೆ.

ಸಮೀರ್ ನ ಹಿಂದೆ ಪೂರ್ತಿ ಬ್ಯಾಕಪ್ ಎಡಪಂತೀಯರಯದ್ದು ಇತ್ತು. ಸಮೀರ್ ವಿಡಿಯೋ ,ವೀಡಿಯೋ ಆದ ನಂತರ ಎಲ್ಲರಿಗೂ ಹಂಚಲಾಗಿದೆ .ಜನರನ್ನು ಬಡಕಾಯಿಸುವುದು ಸಾಮನ್ಯ ಯೂಟ್ಯೂಬರ್ ತಲೆಯಲ್ಲ, ಇದರ ಹಿಂದೆ ಯಾರೋ ದೊಡ್ಡದಾಗಿ ಪ್ರಯತ್ನ ಮಾಡುತಿದ್ದವರು ಇದ್ದಾರೆ.

ಧರ್ಮಸ್ಥಳದ ಪರ ಹೊಸದಾಗಿ ಒಬ್ಬೊಬ್ಬರೇ ಹೋರಾಟಗಾರರು ಎಲ್ಲಿ ಬಂದರೂ ಬೇರೆ ದಾರಿ ಇಲ್ಲದೇ ಎಸ್.ಡಿ.ಪಿ.ಐ ಎಂಟ್ರಿ ಆಗಿದೆ ಎಂದರು.

ಇನ್ನು ದಸರ ಉದ್ಘಾಟನೆಗೆ ಮುಸಲ್ಮಾನರನ್ನು ಕರೆದುಕೊಂಡು ಬಂದಿದ್ದಾರೆ ,ದಸರಾ ಹಿಂದೂಗಳ ಧಾರ್ಮಿಕ ಹಬ್ಬವಾಗಿ ಸೆಲಬ್ರೇಟ್ ಮಾಡುತ್ತೇವೆ ,ನಿಸಾರ್ ಅಹ್ಮದ್ ಬಂದಾಗ ಗಲಾಟೆ ಮಾಡಲಿಲ್ಲ , ಏಕೆಂದರೇ ನಿಸಾರ್ ಅಹ್ಮದ್ ನಾವು ಬೇರೆಯವರು ಎಂದು ಗಮನಿಸಿಲ್ಲ ,ನಮಗೆ ಹಿಂದೂ ಮುಸ್ಲಿಂ ಪ್ಲಾಬ್ಲಮ್ ಅಲ್ಲ ,

ನಮಗೆ ಧರ್ಮ ಶ್ರದ್ಧೆಯನ್ನು ವಿರೋಧಿಸುವವರ ಕುರಿತು ಇರುವ ಪ್ರಾಬ್ಲಮ್ ,ಕನ್ನಡ ಭಾಷೆಯನ್ನು ದೇವಿ ರೂಪದಲ್ಲಿ ನೋಡಿದರೇ ಸಹಿಸಲಾಗದವರು ,ಚಾಮುಂಡಿ ತಾಯಿ ಪೂಜೆ ಎಂದರೆ ಹೇಗೆ ಸಹಿಸುತ್ತಾರೆ.ಹಿಂದುಗಳನ್ನು ಅವಮಾನಿಸಬೇಕು ,ಕಿರಿಕಿರಿ ಉಂಟುಮಾಡಬೇಕು, ನೀವು ಕರ್ನಾಟಕದಲ್ಲಿ ಸೆಕಂಡರಿ ಸಿಟಿಜನ್ ಎಂದು ಪದೇ ಪದೇ ಹೇಳಬೇಕು ,ನಿಮ್ಮ ಓಟು ಅವಷ್ಯಕತೆ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಸಿದ್ದರಾಮಯ್ಯ ಹಿಂದೆಯೂ ಮಾಡಿದ್ದಾರೆ ಇಂದು ಸಹ ಮಾಡುತಿದ್ದಾರೆ ಎಂದು ಟೀಕಿಸಿದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ