ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sigandur Bridge| ಸೇತುವೆಮೇಲೆ ಬೈಕ್ ವೀಲಿಂಗ್ | ದಂಡ ವಿಧಿಸಿ ಶಾಕ್ ಕೊಟ್ಟ ಪೊಲೀಸರು.

11:46 PM Aug 21, 2025 IST | ಶುಭಸಾಗರ್

Sigandur Bridge| ಸೇತುವೆಮೇಲೆ ಬೈಕ್ ವೀಲಿಂಗ್ | ದಂಡ ವಿಧಿಸಿ ಶಾಕ್ ಕೊಟ್ಟ ಪೊಲೀಸರು.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಉದ್ಘಾಟನೆಯಾಗುತಿದ್ದಂತೆ ಸಾವಿರಾರು ಜನ ವೀಕ್ಷಣೆಗೆ ಬರುತಿದ್ದಾರೆ. ಇನ್ನು ಇತ್ತೀಚೆಗೆ ರಾತ್ರಿ ಕಾರಿನಲ್ಲಿ ಬಂದ ಕೆಲವರು ಸೇತುವೆಮೇಲೆ ಕುಳಿತು ಮದ್ಯ ಸೇವಿಸಿದ ವಿಡಿಯೋ ವೈರಲ್ ಆಗಿತ್ತು. ಇದಾದ ನಂತರ  ಸಿಗಂದೂರು ಸೇತುವೆ (Sigandur Bridge) ಮೇಲೆ ದುಬಾರಿ ಕವಾಸಾಕಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ ಪೊಲೀಸರು ದಂಡ ವಿಧಿಸುವ ಜೊತೆ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದಿದ್ದಾರೆ.

ಆಗಸ್ಟ್‌ 15ರಂದು ಜೋಗ ಮೂಲದ ಯುವಕನೊಬ್ಬ ಸಿಗಂದೂರು ಸೇತುವೆ ಮೇಲೆ ವೀಲಿಂಗ್‌ ಮಾಡಿದ್ದನು. ಈತ ಬೈಕ್‌ ಸ್ಟಂಟ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಸಾಗರ (sagar)ಗ್ರಾಮಾಂತರ ಠಾಣೆ ಪೊಲೀಸರು ಬೈಕ್‌ ಸವಾರನನ್ನು ಪತ್ತೆ ಹಚ್ಚಿ, ಆತನಿಗೆ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ:-Sigandur: ಲಾಂಚ್ ಸ್ಥಗಿತವಾಗುತ್ತಾ?ಗುತ್ತಿಗೆ ಸಿಬ್ಬಂದಿಗೆ ಬಾರದ ಸಂಬಳ -ಬಂದರು ಸಚಿವರು ಹೇಳಿದ್ದಿಷ್ಟು?

Advertisement

ದುಬಾರಿ ಬೆಲೆ ಕವಾಸಕಿ ಬೈಕ್‌ ಸವಾರನಿಗೆ ₹5000 ದಂಡ ವಿಧಿಸಿದ್ದಾರೆ. ಇನ್ನು ಆತ ಇನ್ಮುಂದೆ ಯಾರು ಈ ರೀತಿಯ ತಪ್ಪು ಮಾಡಬಾರದು ಎಂದು ವಿಡಿಯೋದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

Advertisement
Tags :
bike wheelingfined by policeSagarShivamogga newsSigandurSigandur Bridge
Advertisement
Next Article
Advertisement