For the best experience, open
https://m.kannadavani.news
on your mobile browser.
Advertisement

Sirsi news: ಬಾಲಕನಮೇಲೆ ಏರ್ ಗನ್ ಫೈರ್| ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ನೀಡಿದ ಪೊಲೀಸರಿಂದ ಸತ್ಯ ಬಯಲು

Sirsi news:-  ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ.
06:14 PM Sep 05, 2025 IST | ಶುಭಸಾಗರ್
Sirsi news:-  ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ.

Sirsi news: ಬಾಲಕನಮೇಲೆ ಏರ್ ಗನ್ ಫೈರ್| ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ನೀಡಿದ ಪೊಲೀಸರಿಂದ ಸತ್ಯ ಬಯಲು

Advertisement

ವಿಡಿಯೋ ನೋಡಿ:-

https://chat.whatsapp.com/HbI3YG8zHwtAYxenaKEbAg?mode=ems_copy_t

Sirsi news:-  ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ.

ಹೌದು ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬುವರ ಇಬ್ಬರು ಮಕ್ಕಳು ( ಅಣ್ಣ ತಮ್ಮ )  ಆಟವಾಡುತ್ತಿದ್ದ ಸಂದರ್ಭದಲ್ಲಿ ಏರ್ ಗನ್ ಫೈರ್ ಆಗಿ ದುರ್ಘಟನೆ ನಡೆದಿದ್ದು, ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದನು.

ಅಣ್ಣ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿ ಇದರಿಂದ ಅಣ್ಣ ಕರಿಯಪ್ಪ ( 9 )ಮೃತಪಟ್ಟಿರುವುದಾಗಿ ಹೇಳಲಾಗಿತ್ತು.

ಆದರೇ ಶಿರಸಿ (sirsi) ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ಕೈಗೊಂಡಾಗ ಅಸಲಿನ ವಿಷಯ ಹೊರಬಂದಿದೆ.

Sirsi| ಪುಟ್ಟ ಮಕ್ಕಳಿಂದ ಏರ್ ಗನ್ ನಲ್ಲಿ ಆಟ -ಮಿಸ್ ಫೈರ್ ಆಗಿ ತಮ್ಮನ ಕೈನಿಂದ ಸಾವುಕಂಡ ಅಣ್ಣ 

ಮೃತ ಬಾಲಕನ ಸಹೋದರನ ಕೈನಿಂದ ಫೈರ್ ಆಗಿದ್ದಲ್ಲ ಎಂದು ದೃಢಪಡಿಸಿದ ಪೊಲೀಸರು,ರಾಘವೇಂದ್ರ ಹೆಗಡೆ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ಬೆಳಕಿಗೆ ಬಂದಿದೆ.ಇಬ್ಬರು ಮಕ್ಕಳು ಆಟವಾಡುತ್ತಾ ಏರ್ ಗನ್ ಹಿಡಿದಿದ್ದ ನಿತೀಶ್ ಗೌಡ ಬಳಿ ಬಂದಿದ್ದಾರೆ ,ಅಂಗವಿಕಲನಾಗಿದ್ದ ನಿತೀಶ್ ಗೌಡ ನಿಗೆ ಎಡಗೈ ಊನವಾಗಿದ್ದು ಮಕ್ಕಳು ಬಂದ ಹಿನ್ನಲೆಯಲ್ಲಿ ಗನ್ ನನ್ನು ಸರಿಸುವಾಗ ಎಡ ಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪ ನ ಎದೆಗೆ ಗುಂಡು ತಾಗಿದೆ. ಅತೀ ಸಮೀಪದಲ್ಲೇ ಇದ್ದುದರಿಂದ ಎದೆಗೆ ನೇರವಾಗಿ ಗುಂಡು ಹೊಕ್ಕು ಹೃದಯ ಸೀಳಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

ಇನ್ನು ನಿತೀಶ್ ಗೌಡನಿಗೆ ಏರ್ ಗನ್ ಚಲಾಯಿಸಲು ಬರುವುದಿಲ್ಲ,ತರಬೇತಿಯೂ ಇಲ್ಲ. ಹೀಗಾಗಿ ಆತನಿಂದ ಅಚಾತುರ್ಯದಲ್ಲಿ ಫೈರ್ ಆಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ನಿತೇಶ್ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಂದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ