Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!
Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!
ವಿಡಿಯೋ ನೋಡಿ:-
ಕಾರವಾರ/ಶಿರಸಿ/ಭಟ್ಕಳ:- ದೇಶವಿಡಿ 79 ನೇ ಸ್ವಾತಂತ್ರ ದಿನವನ್ನು ಆಚರಣೆಯನ್ನು ವಿಜ್ರಂಭಣೆಯಿಂದ ಮಾಡಿದ್ದಾರೆ. ಆದರೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಪಿಎಂಸಿ ಯಲ್ಲಿರುವ ಸಿದ್ದಾಪುರ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಶಿರಸಿ(sirsi) ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ national flag )ಅಗೌರವ ನೀಡಲಾಗಿದೆ.
ಶಿರಸಿ ಟಿಎಸ್ಎಸ್ ಎಪಿಎಂಸಿ ಆವರಣದಲ್ಲಿರುವ ಈ ಕಚೇರಿಯಲ್ಲಿ ಹರಿದ ರಾಷ್ಟ್ರಧ್ವಜ ಹಾರಾಡಿದ್ದು ಈ ಕುರಿತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಆಡಳಿತ ಮಂಡಳಿ ಧ್ವಜ ದಲ್ಲಿ ಫ್ಲಾಗ್ ಹಾರಿಸಿದ್ದಾಗ ಸರಿಯಾಗಿದ್ದು , ಗಾಳಿಗೆ ಹರಿದು ಹೋಗಿದೆ ಎಂದು ತಿಳಿಸಿದ್ದಾರೆ. ಆದರೇ ಹರಿದುಹೋದ ಧ್ವಜ ಹಾರಾಡದಂತೆ ನೋಡಿಕೊಳ್ಳಬೇಕಾದ್ದು ಕರ್ತವ್ಯ. ಹೀಗಾಗಿ ಈ ಕುರಿತು ಶಿರಸಿ ನಗರ ಠಾಣೆಯಿಂದ ಈ ಸಂಘಕ್ಕೆ ನೋಟಿಸ್ ನೀಡಿದ್ದು ಧ್ವಜ ನಿಯಮ ಉಲ್ಲಂಘನೆ ಕುರಿತು ಕಾರಣ ಕೇಳಿದೆ.
ಇದನ್ನೂ ಓದಿ:-ED Raide: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೆಷ್ಟು?
ಇನ್ನು ಭಟ್ಕಳದಲ್ಲಿನ (bhatkal) ತಾಲೂಕು ಕ್ರೀಡಾಂಗಣದಲ್ಲಿ ಇಂದು ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಕೆಲವರು ನಾಡಗೀತೆ ವಾಚನ ಮಾಡುವಾಗ ಎದ್ದು ನಿಂತು ಗೌರವ ಕೊಡದೇ ಅಸಡ್ಡೆ ಮಾಡಿದ್ದು ಈ ವಿಡಿಯೋ ವೈರಲ್ ಆಗಿದ್ದು ಜನರ ಕೋಪಕ್ಕೆ ಗುರಿಯಾಗಿದೆ.
ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ನಾಡಗೀತೆಗೆ ಗೌರವ ಕೊಟ್ಟು ಎದ್ದು ನಿಂತಾಗ ಕೆಲವರು ಕುಳಿತುಕೊಂಡು ಹರಟೆ ಹೊಡೆದಿದ್ದು ಈ ರೀತಿಯ ವರ್ತನೆ ಸರಿಯಲ್ಲಾ ಎಂಬ ಅಭಿಪ್ರಾಯ ಸ್ಥಳೀಯರು ನೀಡಿದ್ದಾರೆ.
ಇನ್ನು ಚಿಕ್ಕ ಮಕ್ಕಳಿಗೆ ಮಾದರಿಯಾಗಬೇಕಾದ ನಾವುಗಳೇ ಈ ರೀತಿ ವರ್ತನೆ ತೋರಿದರೇ ,ದೇಶದ ಬಗ್ಗೆ ,ನಾಡ ಬಗ್ಗೆ ಗೌರವ ಅಭಿಮಾನ ಮಕ್ಕಳಲ್ಲಿ ಹೇಗೆ ಮೂಡುತ್ತದೆ ಎಂಬ ಪ್ರಶ್ನೆ ಎದ್ದಿದ್ದು ಇನ್ನಾದರೂ ಇಂತಹ ತಪ್ಪುಗಳನ್ನ ತಿದ್ದಿಕೊಂಡು ರಾಜ್ಯ ,ದೇಶವನ್ನು ಗೌರವಿಸುವ ನಡವಳಿಕೆ ಬೆಳಸಿಕೊಳ್ಳಬೇಕಿದೆ.