ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi:ಅಕ್ರಮ ಜಾನುವಾರು ಸಾಗಾಟ|ಮಹಿಳೆ ಸೇರಿ ಇಬ್ಬರ ಬಂಧನ ಮತ್ತೊಬ್ಬ ಪರಾರಿ

ಕಾರವಾರ :- ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ(sirsi) ನಗರ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.
10:32 PM Aug 17, 2025 IST | ಶುಭಸಾಗರ್
ಕಾರವಾರ :- ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ(sirsi) ನಗರ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.

Sirsi:ಅಕ್ರಮ ಜಾನುವಾರು ಸಾಗಾಟ|ಮಹಿಳೆ ಸೇರಿ ಇಬ್ಬರ ಬಂಧನ ಮತ್ತೊಬ್ಬ ಪರಾರಿ

Advertisement

ಕಾರವಾರ :- ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ(sirsi) ನಗರ ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.

ಹಾವೇರಿ ಮೂಲದ ಆರೋಪಿತರಾದ ಬಸವರಾಜ( 38 ) ಸುಜಾತಾ ಬಸವರಾಜ್ ಗೊಲ್ಲರ,( 31 ) ಶಿರಸಿಯ ಪಾಂಡುರಂಗ ನಾರಾಯಣ ನಾಯ್ಕ ( 54) ಎಂದಾಗಿದ್ದು ಆರೋಪಿ ಬಸವರಾಜ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ:-Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!

Advertisement

ಇವರಿಂದ ಕೆಎ-31 6424 ಮಹಿಂದ್ರಾ ಬುಲೆರೊ ಪಿಕಪ್ ವಾಹನ, 2 ಆಕಳು, 2 ಹೋರಿ ಕರು, 1 ಆಕಳು ಕರು ವಶಕ್ಕೆ ಪಡೆಯಲಾಗಿದೆ.

ಒಟ್ಟೂ 05 ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ  ಮಾಡಿಕೊಂಡು ಹಾನಗಲ್ ಕಡೆಗೆ ತೆರಳುತ್ತಿರುವಾಗ ಶಿರಸಿಯ ನಿಲೇಕಣಿ  ಹತ್ತಿರ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ, ಬಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿತರರಾದ ಪಾಂಡುರಂಗ ನಾಯ್ಕ್, ಸುಜಾತಾ ಗೊಲ್ಲರ ರವರುಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಅಂದಾಜು 3  ಲಕ್ಷ ರೂ ಮೌಲ್ಯದ ಬುಲೆರೊ ಮಹಿಂದ್ರಾ ವಾಹನ ಜಪ್ತಿಪಡಿಸಿಕೊಂಡಿರುತ್ತಾರೆ,  ಹಾಗೂ ಒಟ್ಟು ಅಂದಾಜು 19,500/- ರೂ ಮೌಲ್ಯ ಹೊಂದಿದ್ದ 05 ಜಾನುವಾರುಗಳನ್ನು ರಕ್ಷಿಸಿದ್ದಾರೆ, ಈ ವೇಳೆ 1 ನೇ ಆರೋಪಿತನಾದ ಬಸವರಾಜ್ ಗೊಲ್ಲರ ಇತನು ತಪ್ಪಿಸಿಕೊಂಡಿದ್ದು ಪತ್ತೆ ಕಾರ್ಯ ನಡೆಸಲಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನಿಲ್, ರಾಜಶೇಖರ್, ಹನುಮಂತ್ ಕಬಾಡಿ, ಜ್ಯೋತಿ ನಾಯಕ ಎಂ,ಸುದರ್ಶನ ನಾಯ್ಕ,ರವರು ಭಾಗವಹಿಸಿದ್ದರು.

Advertisement
Tags :
Cattle smuggling caseKarnataka newsPolice arrest SirsiSirsiSirsi illegal cattle transportSirsi newsWoman arrested
Advertisement
Next Article
Advertisement