Sirsi| ಶಿರಸಿಯಲ್ಲಿ ಮನೆಗೆ ನುಗ್ಗಿದ ಚಿರತೆ|ದಾಂಡೇಲಿ ನದಿಯಲ್ಲಿ ಲಾಕ್ ಆದ ಮೊಸಳೆ ರಕ್ಷಣೆ.
Sirsi| ಶಿರಸಿಯಲ್ಲಿ ಮನೆಗೆ ನುಗ್ಗಿದ ಚಿರತೆ|ದಾಂಡೇಲಿ ನದಿಯಲ್ಲಿ ಲಾಕ್ ಆದ ಮೊಸಳೆ ರಕ್ಷಣೆ.
Sirsi| ಶಿರಸಿಯಲ್ಲಿ ಮನೆಗೆ ನುಗ್ಗಿದ ಚಿರತೆ! ದಾಂಡೇಲಿಯಲ್ಲಿ ಮೊಸಳೆ ಲಾಕ್! ವಿಡಿಯೋ ನೋಡಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ(sirsi) ಮತ್ತೆ ಚಿರತೆ ಕಾಟ ಪ್ರಾರಂಭವಾಗಿದೆ. ಶಿರಸಿ ತಾಲೂಕಿನ ಶಿರಗಣಿ ಗ್ರಾಮದ ಸಾತ್ವಿಕ್ ಭಟ್ ಎಂಬುವವರ ಮನೆಯಲ್ಲಿ ನಿನ್ನೆ ರಾತ್ರಿ ಮನೆಗೆ ಚಿರತೆ ಬಂದಿದ್ದು ನಾಯಿ ಬೊಗಳುತಿದ್ದುದನ್ನು ಗಮನಿಸಿದ ಮನೆಯವರು ನೋಡುವಾಗ ಚಿರತೆ ಮನೆಯಿಂದ ಹೊರಹೋಗಿದೆ. ಇತ್ತೀಚೆಗೆ ಶಿರಸಿ ಭಾಗದಲ್ಲಿ ಚಿರತೆಗಳು ಮನೆಗಳಿಗೆ ಬರುತಿದ್ದು ,ಮನೆಯ ಸಾಕುಪ್ರಾಣಿಗಳನ್ನು ಭೇಟೆಯಾಡಿ ಎಳೆದೊಯ್ಯುತ್ತಿದೆ. ಶಿರಗಣಿ ಸುತ್ತಮುತ್ತ ಚಿರತೆ ಓಡಾಡುತಿದ್ದು ಸುತ್ತಮುತ್ತಲ ಜನರಿಗೆ ಭಯ ಹುಟ್ಟುವಂತಾಗಿದೆ.
ಇನ್ನು ಮೊನ್ನೆ ದಿನ ದಾಂಡೇಲಿ-ಹಳಿಯಾಳ ರಸ್ತೆಯ ಅಲೈಡ್ ಏರಿಯಾದ ನದಿ ತೀರದ ಬಟ್ಟೆ ತೊಳೆಯುವ ಭಾಗದಲ್ಲಿ 10 ರಿಂದ 12 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾಗಿ ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿಕೊಂಡಿತ್ತು. ನಂತರ ಅರಣ್ಯಾಧಿಕಾರಿಗಳು ಸ್ಥಳೀಯರ ನೆರವಿನಿಂದ ಹಿಡಿದು ಪುನಹಾ ನದಿಗೆ ಬಿಟ್ಟಿದ್ದಾರೆ.