Sirsi : ಶಿರಸಿಯಲ್ಲಿ ಕಾಣೆಯಾದ ಬಾಲಕಿಯರು ಮುಂಬೈ ನಲ್ಲಿ ಪತ್ತೆ! ಆಗಿದ್ದೇನು?
Sirsi : ಶಿರಸಿಯಲ್ಲಿ ಕಾಣೆಯಾದ ಬಾಲಕಿಯರು ಮುಂಬೈ ನಲ್ಲಿ ಪತ್ತೆ! ಆಗಿದ್ದೇನು?
ಕಾರವಾರ:- ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi)ಶಾಲಾ ಬಾಲಕೀಯರು ಡ್ರಾಯಿಂಗ್ ಕ್ಲಾಸ್ ಗೆ ತೆರಳುವುದಾಗಿ ಹೇಳಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಏರಿ ಮುಂಬೈಗೆ ಪ್ರಯಾಣ ಬೆಳಸಿದ್ದು ಕೊನೆಗೂ ಪೊಲೀಸರ ಸತತ ಪ್ರಯತ್ನದ ನಂತರ ಮುಂಬೈ ನಲ್ಲಿ ಪತ್ತೆಯಾಗಿದ್ದಾರೆ.
ಶಿರಸಿ ಕಸ್ತೂರ್ಬಾ ನಗರದ ನಿವಾಸಿಗಳಾದ ಶ್ರೀಶಾ (13), ಪರಿಧಿ (10) ನಾಪತ್ತೆಯಾಗಿ ಪತ್ತೆಯಾದ ಬಾಲಕಿಯರಾಗಿದ್ದಾರೆ.
ಅ.16 ರಂದು ನಾಪತ್ತೆಯಾಗಿದ್ದು,ಪೋಷಕರು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ಇಬ್ಬರೂ ಬಾಲಕೀಯರು ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಬಸ್ ಏರಿ ಶಿರಸಿಯಿಂದ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಮುಂಬೈ ಗೆ ಹೋಗಿದ್ದಾರೆ.
ಇದನ್ನೂ ಓದಿ:-Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!
ನಂತರ ತಾವು ಶಿರಡಿಗೆ ಹೋಗಲು ವಿಚಾರಿಸಿದ್ದು ಆಗ ಕೆಲವರಿಗೆ ಅನುಮಾನ ಬಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಆಕೆಯನ್ನು ವಿಚಾರಿಸಿ ಪೊಲೀಸರು ಕಾರಣ ಏನು ಎಂದು ಕೇಳಿದಾಗ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನೆಯವರು ಓದು ಎಂದು ಒತ್ತಾಯ ಮಾಡುತಿದ್ದರು,ಪೋಷಕರ ಕಿರಿ ಕಿರಿ ತಪ್ಪಿಸಿಕೊಳ್ಳಲು ತಾವು ಹೀಗೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾರೆ.
ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಿದರೇವೇನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗುವಂತಾಗಿದ್ದು , ಈ ಮಕ್ಕಳನ್ನು ಹುಡುಕಲು ಜಿಲ್ಲೆಯ ಪೊಲೀಸರ ಆರುತಂಡ ಮಾಡಲಾಗಿತ್ತು.
ಒಟ್ಟಿನಲ್ಲಿ ಪೋಷಕರ ಒತ್ತಡ, ಇನ್ನೂ ಪ್ರಪಂಚದ ಅರಿವಿಲ್ಲದ ಈ ಪುಟ್ಟ ಮಕ್ಕಳು ಇಂತಹ ನಿರ್ಧಾರಕ್ಕೆ ಬರುವಂತೆ ಮಾಡಿದ್ದು ಮಾತ್ರ ದುರಂತ.