Honnavar ದೋಣಿ ವಿಹಾರ- ಅಕ್ರಮ ವಾಣಿಜ್ಯ ಬಳಕೆ ಬೋಟ್ ವಶಕ್ಕೆ.
Honnavar ದೋಣಿ ವಿಹಾರ- ಅಕ್ರಮ ವಾಣಿಜ್ಯ ಬಳಕೆ ಬೋಟ್ ವಶಕ್ಕೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavar)ಕೆಳಗಿನಪಾಳ್ಯ ,ಕಾಸರಕೋಡ,ಬಿಕಾಸಿತಾರಿಯ ಸಮೀಪ ಪ್ರವಾಸಿಗರನ್ನು ದೋಣಿ (Boat) ವಿಹಾರಕ್ಕೆ ಕರೆದೊಯ್ಯಲಾಗುತ್ತದೆ.
ಆದರೇ ಹಲವು ದೋಣಿಗಳು ಪ್ರವಾಸೋಧ್ಯಮ ಇಲಾಖೆ ನೊಂದಣಿ ಇಲ್ಲದೇ ಅಕ್ರಮವಾಗಿ ಯಾವುದೇ ಸುರಕ್ಷತೆಯನ್ನು ಬಳಸದೇ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತಿದ್ದು ಈ ಸಂಬಂಧ ದೂರು ಬಂದ ಹಿನ್ನಲೆಯಲ್ಲಿ ಪ್ರವಾಸೋಧ್ಯಮ ಇಲಾಖೆ ನಿರ್ದೇಶ ಮಂಜುನಾಥ್ ನಾವಿ ,ಹೊನ್ನಾವರ ತಹಶಿಲ್ದಾರ್ ಪ್ರವೀಣ್ ,ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತಿದ್ದ ಬೋಟನ್ನು ವಶಕ್ಕೆ ಪಡೆದು ಜಪ್ತು ಪಡಿಸಿಕೊಂಡಿದ್ದಾರೆ.
ಸಾರ್ವಜನಿಕರ ದೂರು ಆಧರಿಸಿ ಶರಾವತಿ ನದಿ ಭಾಗದ ಹಡಿನಬಾಳ್ ಬಳಿ ಮಂಜುನಾಥ್ ಎಂಬುವವರು ನಡೆಸುತಿದ್ದ ಬೋಟ್ ನನ್ನು ವಶಕ್ಕೆ ಪಡೆದು ನೋಟಿಸ್ ನೀಡಲಾಗಿದೆ.
ಇವರು ಅಕ್ರಮವಾಗಿ ಎರಡು ಬೋಟುಗಳನ್ನು ಜೋಡಿಸಿ ಸುರಕ್ಷತಾ ನಿಯಮವನ್ನು ಗಾಳಿಗೆ ತೂರಿ ಬೋಟನ್ನು ಹೋಟಲ್ ಆಗಿ ಪರಿವರ್ತಿಸಿದ್ದರು. ಈ ಬೋಟನ್ನು ಶರಾವತಿ ನದಿಯ ಹಡಿನಬಾಳ್ ನಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುತಿದ್ದರು.
ಇನ್ನು ಅಕ್ರಮವಾಗಿ ದೋಣಿಗಳನ್ನು ದೋಣಿ ವಿಹಾರಕ್ಕೆ ಬಳಸುವ ಮೂರು ದೋಣಿ ಮಾಲೀಕರಿಗೂ ನೋಟಿಸ್ ನೀಡಲಾಗಿದ್ದು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.