News:ಅವಿವಾಹಿತ ಹವ್ಯಕ ಯುವಕರಿಗೆ ಮದುವೆ ಧೋಖಾ|ಹೆಣ್ಣಿನವರ ಡಿಮಾಂಡ್ ಗೆ ಮಾಣಿಗಳು ಸುಸ್ತು!
News:ಅವಿವಾಹಿತ ಹವ್ಯಕ ಯುವಕರಿಗೆ ಮದುವೆ ಧೋಖಾ|ಹೆಣ್ಣಿನವರ ಡಿಮಾಂಡ್ ಗೆ ಮಾಣಿಗಳು ಸುಸ್ತು!

ಹೆಣ್ಣು ಸಿಗದೆ ಅವಿವಾಹಿತರಾಗಿ ಉಳಿಯುತ್ತಿರುವ ಹವ್ಯಕ ಯುವಕರಿಗೆ ಉತ್ತರ ಭಾರತದ ಯುವತಿಯೊಂದಿಗೆ ಮದುವೆ ಮಾಡಿಸುವ ಆಮಿಷ ಒಡ್ಡಿ ಹಣ ಪಡೆದು ವಂಚಿಸುತ್ತಿರುವ ಹಲವು ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಪ್ರಕರಣ ಮರುಕಳಿಸಿದ್ದು, ಉತ್ತರ ಭಾರತದ ವೈವಾಹಿಕ ಸಂಬಂಧ ಉದ್ಯಮದ ಕರಾಳತೆ ಅನಾವರಣಗೊಂಡಿದೆ. ವಿವಾಹದ ಕನಸು ಹೊತ್ತ ಯುವಕರು ಮತ್ತು ಅವರ ಕುಟುಂಬದವರ ಭಾವನೆಯನ್ನೇ ಬಂಡವಾಳ ಮಾಡಿಕೊಂಡು, ಲಕ್ಷಾಂತರ ರೂಪಾಯಿ ಪೀಕುವ ದಂಧೆ ನಡೆಯುತ್ತಿದೆ. ಇದರಲ್ಲಿ ಉತ್ತರ ಭಾರತದ ಕೆಲವರು ಕೈಜೋಡಿಸಿದ್ದಾರೆ. ಕಳಚೆ ಪ್ರಕರಣ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂಥ 40ಕ್ಕೂ ಅಧಿಕ ಪ್ರಕರಣ ನಡೆದಿದೆ ಎನ್ನಲಾಗಿದ್ದು ವಿಜಯವಾಣಿ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ:-Sirsi| ಶಿರಸಿಯಲ್ಲಿ ಮನೆಗೆ ನುಗ್ಗಿದ ಚಿರತೆ|ದಾಂಡೇಲಿ ನದಿಯಲ್ಲಿ ಲಾಕ್ ಆದ ಮೊಸಳೆ ರಕ್ಷಣೆ.
ಇದಲ್ಲದೇ ಶಿರಸಿಯಲ್ಲಿ ಉತ್ತರ ಭಾರತದ ಯುವತಿಯನ್ನು ವಿವಾಹವಾಗಿ ಬಂದು ಕೆಲವೇ ದಿನದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿಹೋದ ಘಟನೆ ನಡೆದಿದ್ದು ಈ ಕುರಿತು ದೂರು ಕೊಡಲು ಹೋದರೇ ಕಿರುಕುಳ,ವರದಕ್ಷಿಣೆ ದೂರು ದಾಖಲಿಸುವ ಬೆದರಿಕೆ ಒಡ್ಡಿ ಕಳುಹಿಸಿದ್ದ ವರದಿ ಸಹ ಬೆಳಕಿಗೆ ಬಂದಿದೆ.
ಇದನ್ನೂ ಓದಿ:-Yallapur:ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿಗಳಿಲ್ಲ,ತುತ್ತು ಅನ್ನ ಸಿಗದೇ ಮನನೊಂದ ಬುಡಕಟ್ಟು ಜನಾಂಗದ ಮಹಿಳೆ ಆತ್ಮಹತ್ಯೆ
ಈ ಜಾಲದಲ್ಲಿ ನೊಂದವರ ಕಥೆಗಳು ಒಂದಕ್ಕಿಂತ ಮತ್ತೊಂದು ವಿಚಿತ್ರವಾಗಿದೆ. ಹುಡುಗಿಯ ಫೋಟೋ ತೋರಿಸಿ, ಉತ್ತರ ಭಾರತಕ್ಕೆ ಕರೆದೊಯ್ಯಲಾಗುತ್ತದೆ. ಹೋಗಲು ವಿಮಾನವೇ ಆಗಬೇಕು. ಅಲ್ಲಿ ಹುಡುಗಿ ನೋಡಿ, ಒಪ್ಪಿಗೆಯಾದ ಮೇಲೆ ಒಂದಷ್ಟು ಲಕ್ಷ ರೂ. ಕೊಟ್ಟರೆ ಮುಂದಿನ ಕಾರ್ಯ. ಇಲ್ಲವಾದರೆ ಮದುವೆ ಇಲ್ಲ. ಏನೋ ಒಂದು ಕುಂಟು ನೆಪ ಹೇಳಿ ಸಾಗ ಹಾಕುತ್ತಾರೆ.
ಮೊದಲೇ ಮದುವೆಯಾದ ಮಹಿಳೆ ಯರನ್ನು 'ಹುಡುಗಿ' ಎಂದು ನಂಬಿಸಿ ವಿವಾಹ ಮಾಡುವ ಯತ್ನವೂ ನಡೆದಿದೆ. ಯುವಕರು ಹಾಗೂ ಕುಟುಂಬದವರನ್ನು ಹೆಣ್ಣು ತೋರಿಸುವುದಾಗಿ ಉತ್ತರ ಪ್ರದೇಶಕ್ಕೆ ಕರೆದೊಯ್ದು, ಹೆಣ್ಣು ತೋರಿಸದೇ ಅಲ್ಲಿಯೇ ಬಿಟ್ಟು ಬಂದವರೂ ಇದ್ದಾರೆ. ಮದುವೆಯಾಗಿ ಕೆಲ ದಿನ ಸಂಸಾರ ಮಾಡಿ, ಹೇಳದೇ ಕೇಳದೇ ನಾಪತ್ತೆಯಾಗುವಂತೆ ಮಾಡುವ ಜಾಲವೂ ಇದೆಯಂತೆ. ಗಂಡು-ಹೆಣ್ಣು ಒಪ್ಪಿದ ಮೇಲೂ ಕೇಳಿದಷ್ಟು ಹಣ ಕೊಡಲಿಲ್ಲವೆಂದು ಸಂಬಂಧ ಮುರಿದು ಬಿದ್ದ ಹಲವು ಘಟನೆಗಳು ನಡೆದಿವೆ. ಯುವಕರನ್ನು ಕರೆದೊಯ್ಯುವ ಏಜೆಂಟರೇ ಅಲ್ಲಿ ಭಂಗಿ, ಮದ್ಯದ ನಶೆಯಲ್ಲಿ ತೇಲುತ್ತ ಹೋದ ಕಾರ್ಯವನ್ನೇ ಮರೆತವರೂ ಇದ್ದಾರಂತೆ. ಹಣ ಕೇಳುವಾಗ ಇದು ನನ್ನೊಬ್ಬನಿಗೆ ಅಲ್ಲ ಎಂದು ದೊಡ್ಡ ದೊಡ್ಡವರ ಹೆಸರು ಹೇಳುವವರೂ ಇದ್ದಾರೆ. ತಾವು ಸ್ವರ್ಣವಲ್ಲೀ ಶ್ರೀಮಠದ ಪ್ರತಿನಿಧಿ ಎಂದು ಸುಳ್ಳು ಹೇಳಿಕೊಂಡೇ ವ್ಯವಹಾರ ಕುದುರಿಸುವವರೂ ಇದ್ದಾರೆ.
ಸ್ವರ್ಣವಲ್ಲೀ ಮಠದ ಹೆಸರು ಬಳಕೆ
ಈ ಹಿಂದೆ ಹವ್ಯಕರಲ್ಲಿ ಕನ್ಯೆ ಕೊರತೆಯಾದ ಹಿನ್ನಲೆಯಲ್ಲಿ ಉತ್ತರ ಭಾರತದ ಯುಪಿ,ಕಾಶ್ಮೀರದ ಕಡೆ ಇರುವ ಬ್ರಾಹ್ಮಣರ ವಲಯವನ್ನು ಹುಡುಕುವ ವಿನೂತನ ಪ್ರಯತ್ನಕ್ಕೆ ಸ್ವರ್ಣ ವಲ್ಲೀ ಮಠ ಕೈ ಹಾಕಿತ್ತು. ಇದರ ಪ್ರತಿಫಲವಾಗಿ ಹಲವು ಹವ್ಯಕ ಹುಡುಗರಿಗೆ ವಿವಾಹ ಸಹ ಮಾಡಿಸಿತ್ತು. ಆದರೇ ಕೆಲವು ಮೋಸ ಮಾಡುವ ಏಜೆಂಟರುಗಳು ಯಲ್ಲಾಪುರ,ಶಿರಸಿ ಭಾಗದ ಹವ್ಯಕ ಹುಡುಗರಿಗೆ ಕನ್ಯೆ ಕೊಡಿಸುವ ನೆಪದಲ್ಲಿ ಮಠದ ಹೆಸರು ಬಳಸಿ ಹಣ ಪಡೆದು ಮೋಸ ಮಾಡುತಿದ್ದಾರೆ. ಹವ್ಯಕರ ಕನ್ಯೆ ಕೊರತೆಯನ್ನು ಬಂಡವಾಳ ಮಾಡಿಕೊಂಡು ಹಣ ದೋಚುವ ಕಾರ್ಯ ನಡೆಯುತ್ತಿದೆ.
ಉತ್ತರ ಭಾರತದ ಕನ್ಯೆ ಸಿಕ್ಕರೂ ಉಳಿಯುತಿಲ್ಲ!
ಇನ್ನು ಉತ್ತರ ಭಾರತ ಮೂಲದ ಕನ್ಯೆಯನ್ನು ಈ ಭಾಗದಲ್ಲಿ ವಿವಾಹವಾದ ಕುಟುಂಬದಲ್ಲಿ ಭಾಷೆ,ಸಾಂಸ್ಕೃತಿಕ ಬಿಕ್ಕಟ್ಟುಗಳು ಮೂಡುತ್ತಿವೆ. ಹೊರಗಿನ ಆಚಾರ ವಿಚಾರ ಬೇರೆ ,ಇಲ್ಲಿನ ಆಚಾರ ವಿಚಾರ ಬೇರೆಯಾಗಿದೆ ಇನ್ನು ದೂರದಿಂದ ಇಲ್ಲಿಗೆ ಬಂದ ವಿವಾಹಿತೆಗೆ ಕುಟುಂಬದೊಂದಿಗಿನ ಸಮನ್ವಯತೆ ಕಾಪಾಡಿಕೊಳ್ಳಲು ಭಾಷೆ ಬಹುದೊಡ್ಡ ಅಡ್ಡಿ .ಹೀಗಾಗಿ ಈ ಮದುವೆಗಳು ಗಟ್ಟಿಯಾಗಿ ಉಳಿಯುತಿಲ್ಲ ಎನ್ನುತ್ತಾರೆ ಹೆಸರು ಹೇಳಬಯಸದ ಹವ್ಯಕ ವಿವಾಹ ವೇದಿಕೆ ಸಂಸ್ಥೆಯ ಸದಸ್ಯ.
ಹವ್ಯಕರಲ್ಲಿ ಕನ್ಯೆ ಇದ್ರೂ ಬಾರಿ ಡಿಮೆಂಡ್!
ಹವ್ಯಕ ಬ್ರಾಹ್ಮಣ ಜನಾಂಗ ಬೇರೆ ಬ್ರಾಹ್ಮಣರಿಗೆ ಹೋಲಿಸಿದರೆ ಲಿಬರ್ಟಿ ಯಿಂದ ಇರುವವರು.ಕಟ್ಟುಪಾಡುಗಳಿಂದ ಹೆಚ್ಚಾಗಿಯೇ ಹೊರಗಿರುವ ಹವ್ಯಕ (havyaka)ಜನಾಂಗ ಬುದ್ದಿವಂತ ಮತ್ತು ಸಾದು ಸೊಬಾವದ ಜನರೇ ಹೆಚ್ಚು. ಹಾಗಂತ ಈ ಜನಾಂಗದಲ್ಲಿ ಹೆಣ್ಣುಗಳು ಇಲ್ಲಾ ಎಂದಲ್ಲ.
ಇದನ್ನೂ ಓದಿ:-Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್
ಈ ಜನಾಂಗದಲ್ಲಿ ಅತೀ ಹೆಚ್ಚು ಉನ್ನತ ಶಿಕ್ಷಣ ಪಡೆದವರೇ ಹೆಚ್ಚು. ಇನ್ನು ಕುಟುಂಬದ ವಿಚಾರಕ್ಕೆ ಬರುವುದಾದರೇ ಒಂದು ದಂಪತಿಗಳಿಗೆ ಒಂದೇ ಮಗು ಅಥವಾ ಹೆಚ್ಚು ಎಂದರೇ ಇಬ್ಬರು ಮಕ್ಕಳಿರುತ್ತಾರೆ. ಹೀಗಾಗಿ ಲಿಂಗತಾರತಮ್ಯ ಹೆಚ್ಚಾಗಿದೆ.
ಇನ್ನು ಶಿರಸಿ,ಯಲ್ಲಾಪುರ, ಜೋಯಿಡಾ ,ಸಿದ್ದಾಪುರ ,ಹೊನ್ನಾವರ, ಭಟ್ಕಳ, ಕುಮಟಾ ಭಾಗದಲ್ಲಿ ಹೆಚ್ಚಾಗಿರು ಹವ್ಯಕರು ಶಿವಮೊಗ್ಗ, ಮಂಗಳೂರು, ಉಡುಪಿ ಸೇರಿದಂತೆ ಇತೆರೆ ಭಾಗದಲ್ಲಿ ಸಹ ಇದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮದುವೆಯಾಗದೇ ಉಳಿದ 30 ವರ್ಷ ದಾಟಿದ ಹೆಣ್ಣುಮಕ್ಕಳ ಸಂಖ್ಯೆಗೇನೂ ಕಮ್ಮಿ ಇಲ್ಲ. ಯಾಕೆ ಇನ್ನೂ ಮದುವೆಯಾಗಿಲ್ಲ ಎಂದರೇ ಹೆಣ್ಣುಮಕ್ಕಳು ಬೆಳಸಿಕೊಳ್ಳುತ್ತಿರುವ ಮಾನಸೀಕತೆ.
ಹಲವು ಹೆಣ್ಣುಮಕ್ಕಳು ಕೃಷಿಕರು, ಪುರೋಹಿತ ವರವನ್ನು ಒಪ್ಪುತ್ತಿಲ್ಲ. ಇನ್ನು ಮದುವೆಯಾಗುವ ಯುವಕ ಬೆಂಗಳೂರು, ವಿದೇಶದಲ್ಲಿ ಇರಬೇಕು,ಲಕ್ಷ ಲಕ್ಷ ಸಂಬಳ ತರಬೇಕು, ಅಪ್ಪ ,ಅಮ್ಮನೊಂದಿಗೆ ಇರಬಾರದು,ಹೀಗೆ ಹತ್ತು ಹಲವು ಬೇಡಿಕೆಗಳು ಹೆಣ್ಣಿನವರದ್ದು.
ಇದಲ್ಲದೇ ಇಂತಹದ್ದೇ ಓದಿದ ಯುವಕ ಬೇಕು, ಹೀಗೆ ಹತ್ತು ಹಲವು ಬೇಡಿಕೆ ಆದರೇ ಇತ್ತೀಚೆಗೆ ಹೆಣ್ಣಿನ ಮನೆಯವರು ವಧು ದಕ್ಷಿಣೆ ಬೇಡಿಕೆ ಇಡುತಿದ್ದಾರೆ. ಇನ್ನು ಮದುವೆ ಫಾಕ್ಸ್ ಆದರೇ ಹೆಣ್ಣಿನ ಮನೆಯ ಮದುವೆ ಕರ್ಚು ಸಹ ನೋಡಿಕೊಳ್ಳುವ ಬೇಡಿಕೆ ಸಹ ಇಡುತಿದ್ದಾರೆ.
ವ್ಯಾಪಾರವಾದ ಮದುವೆ !
ಇನ್ನು ಯಲ್ಲಾಪುರ ,ಶಿರಸಿ (sirsi)ಭಾಗದಲ್ಲಿ ಕೆಲವು ಜನ ಮದುವೆಯನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಮದುವೆಯಾದ ಕೆಲವೇ ದಿನದಲ್ಲಿ ಡೈವರ್ಸ ಗೆ ಅಪ್ಲೇ ಮಾಡುತ್ತಾರೆ. ಪೊಲೀಸು,ಕೋರ್ಟ ಕಚೇರಿ ಎಂದರೇ ಆಗದ ಹವ್ಯಕರಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಪಂಚಾಯ್ತಿ ನೆಪದಲ್ಲಿ ಹೆಣ್ಣಿನಕಡೆಯವರು ಹಣ ಕೀಳುತಿದ್ದಾರೆ. ಒಬ್ಬನ ಬಳಿ ಹಣ ಕಿತ್ತ ನಂತರ ಮತ್ತೊಬ್ಬನ ಜೊತೆ ವಿವಾಹ ,ಆತನಿಗೂ ಕೈ ಕೊಟ್ಟು ಹಣ ಪಡೆದ ಹಲವು ಉದಾರಣೆಗಳಿವೆ. ಹಲವು ಡೈವರ್ಸಗಳು ಕೋರ್ಟ ಮೆಟ್ಟಿಲೇರದೇ ಕುಟುಂಬಗಳ ನಡುವೆಯೇ ಒಡಂಬಡಿಕೆ ಮಾಡಿಕೊಂಡು ಮುಗಿಸಿಕೊಂಡವರಿದ್ದಾರೆ.