For the best experience, open
https://m.kannadavani.news
on your mobile browser.
Advertisement

Uttara kannada:ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವು ಕಡೆ ಹಾನಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ(rain) ಮುಂದುವರೆದಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜುಲೈ 15 ರವರೆಗೂ ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದ್ದು ,ಆರೆಂಜ್ ಅಲರ್ಟ ನೀಡಲಾಗಿದೆ. ಇಂದು ಜಿಲ್ಲೆಯ ಕಾರವಾರ,ಕುಮಟಾ,ಶಿರಸಿ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚಿನ ಮಳೆಯಾಗಿ (rain) ಹಾನಿ ಸಂಭವಿಸಿದೆ.
10:40 PM Jul 13, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ(rain) ಮುಂದುವರೆದಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜುಲೈ 15 ರವರೆಗೂ ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದ್ದು ,ಆರೆಂಜ್ ಅಲರ್ಟ ನೀಡಲಾಗಿದೆ. ಇಂದು ಜಿಲ್ಲೆಯ ಕಾರವಾರ,ಕುಮಟಾ,ಶಿರಸಿ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚಿನ ಮಳೆಯಾಗಿ (rain) ಹಾನಿ ಸಂಭವಿಸಿದೆ.
uttara kannada ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವು ಕಡೆ ಹಾನಿ

Uttara kannada:ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವು ಕಡೆ ಹಾನಿ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ(rain) ಮುಂದುವರೆದಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜುಲೈ 15 ರವರೆಗೂ ಹೆಚ್ಚಿನ ಮಳೆಯಾಗುವ ಸೂಚನೆ ನೀಡಿದ್ದು ,ಆರೆಂಜ್ ಅಲರ್ಟ ನೀಡಲಾಗಿದೆ. ಇಂದು ಜಿಲ್ಲೆಯ ಕಾರವಾರ,ಕುಮಟಾ,ಶಿರಸಿ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚಿನ ಮಳೆಯಾಗಿ (rain) ಹಾನಿ ಸಂಭವಿಸಿದೆ.

ಶಿರಸಿ; ಭಾರೀ ಮಳೆಗೆ ಹಲವು ಮನೆಗಳಿಗೆ  ಹಾನಿ

ಶಿರಸಿ ತಾಲೂಕಿನಾದ್ಯಂತ ಸುರಿದ ಮಳೆಯಿಂದ ಹಲವೆಡೆ ಹಾನಿ ಉಂಟಾಗಿದೆ.ಉಂಚಳ್ಳಿ ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಶಿವರಾಮ ಹನುಮಂತ ನಾಯ್ಕ ಇವರ ವಾಸ್ತವ್ಯದ ಮನೆಯ ಗೋಡೆ ಹಾಗೂ ಹಂಚುಗಳು ಕುಸಿದು ಬಿದ್ದು ಅಂದಾಜು ರೂ. 50 ಸಾವಿರ ಹಾನಿ ಸಂಭವಿಸಿದೆ.

ಇನ್ನು ಕುಮಟಾ ತಾಲೂಕಿನಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು ಶನಿವಾರದಿಂದ ಭಾನುವಾರದ ತನಕ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹಲವೆಡೆ ಹಾನಿ ಉಂಟಾಗಿದೆ.

ಇದನ್ನೂ ಓದಿ:-Kumta:ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್

ಮೂರೂರು ಗ್ರಾಮದ ಅಳವಳ್ಳಿಯಲ್ಲಿ ಕೃಷ್ಣ ರಾಮ ನಾಯ್ಕ ಅವರ ಮನೆ ಪಕ್ಕದ ಗುಡ್ಡದ ಮೇಲಿದ್ದ ಕಲ್ಲುಬಂಡೆ ಉರುಳಿದೆ. ಧರೆಯಿಂದ ಭಾರೀ ಪ್ರಮಾಣದ ಬಂಡೆ ಉರುಳಿ ಶೌಚಾಲಯದ ಮೇಲೆ ಬಿದ್ದಿದೆ. ಶೌಚಾಲಯಕ್ಕೆ ಹಾನಿಯಾಗಿದೆ. ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಕಾರವಾರದ ಚಂಡಿಯಾ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನೀರು ಸರಾಗವಾಗಿ ಹರಿದು ಸಮುದ್ರ ಸೇರದೇ ಹಲವು ಮನೆಗಳು ಜಲಾವೃತವಾಗಿದ್ದು ತಗ್ಗು ಪ್ರದೇಶದಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ಥವಾಗಿದೆ.

ಕಾರವಾರ: ಹೆಸ್ಕಾಂಗೆ ಎರಡು ತಿಂಗಳಲ್ಲಿ 5. 64 ಕೋಟಿ ನಷ್ಟ

ಭಾರೀ ಗಾಳಿ ಮಳೆ ಅಬ್ಬರದಾಟಕ್ಕೆ ಹೆಸ್ಕಾಂ ಬಸವಳಿದಿದ್ದು, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಕಳೆದ ಎಪ್ರಿಲ್ 1 ರಿಂದ ಜುಲೈ 3 ರವರೆಗೆ ಹೆಸ್ಕಾಂಗೆ ಬರೋಬ್ಬರಿ 5. 64 ಕೋಟಿ ರು. ಗಳಷ್ಟು ನಷ್ಟ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿ ಕಳೆದ ಮೂರು ತಿಂಗಳಲ್ಲಿ 5, 593 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಹುತೇಕ ಪ್ರಕರಣಗಳಲ್ಲಿ ಮರಗಳು ಹಾಗೂ ಮರಗಳ ಟೊಂಗೆಗಳೇ ವಿದ್ಯುತ್ ಕಂಬಗಳಿಗೆ ಕಂಟಕವಾಗಿ ಕಾಡಿವೆ. 5, 593 ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಹೆಸ್ಕಾಂಗೆ ಒಟ್ಟು 2. 79 ಕೋಟಿ ರು. ಗಳಷ್ಟು ನಷ್ಟಕ್ಕೆ ಕಾರಣವಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ