Dandeli|ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ -ಆರು ಬೈಕ್ ವಶಕ್ಕೆ
ಕಾರವಾರ:- ಐವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(dandeli) ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
10:31 PM Aug 28, 2025 IST | ಶುಭಸಾಗರ್
ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ -ಆರು ಬೈಕ್ ವಶಕ್ಕೆ
Advertisement
ಕಾರವಾರ:- ಐವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(dandeli) ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡೇಲಿಯ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶ ನಿವಾಸಿಯ ದೂರು ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಿದ ದಾಂಡೇಲಿ ಪೊಲೀಸರು ಐವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನ ಬಂಧನ ಮಾಡಿ ಅವರಿಂದ ಆರು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಅಭೀಷೇಕ್ ವೆಂಕಟೇಶ್ ಪವಾರ (25), ವಿಲ್ಸನ್ ಜೋಸೇಫ್ ಗುಂಡಿ (25), ಗೌಸ್ ಮೊಹಿದ್ದೀನ್ ಬೇಪಾರಿ (24), ದೇವೇಂದ್ರ ಲಕ್ಣ್ಮಣ ಲಮಾಣಿ (20) ಹಾಗೂ ಮಹಮ್ಮದ್ ತೌಸೀಫ್ ಕಾಳಗೆ (24) ಎಂದಾಗಿದ್ದಾರೆ.
ಪಿಎಸ್‌ಐ ಅಮೀನ್ ಅತ್ತಾರ್, ಕಿರಣ ಬಿ. ಪಾಟೀಲ್, ಎಎಸ್‌ಐ ಮಂಜುನಾಥ ದೇಮಟ್ಟಿ ಹಾಗೂ ಸಿಬ್ಬಂದಿಯಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Advertisement