For the best experience, open
https://m.kannadavani.news
on your mobile browser.
Advertisement

Kumta:ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್

Karwar: An incident occurred on Thursday when a huge tree fell onto the road, cutting off the state highway connection at Dodmane Ghat on the Siddapur-Kumta route.
02:41 PM Jun 19, 2025 IST | ಶುಭಸಾಗರ್
Karwar: An incident occurred on Thursday when a huge tree fell onto the road, cutting off the state highway connection at Dodmane Ghat on the Siddapur-Kumta route.
kumta ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ  ಕುಮಟಾ ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್

Kumta:ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್.

Advertisement

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.
ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ: ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಟ್ಟದಲ್ಲಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡ ಘಟನೆ ಗುರುವಾರ ನಡೆದಿದೆ.

ಜಿಲ್ಲೆಯಲ್ಲಿ ಗಾಳಿ ಮಳೆ (Rain) ಜೋರಾದ ಬೆನ್ಮಲ್ಲೆ ಸಿದ್ದಾಪುರ ಬಡಾಳ ಕುಮಟಾ ಮಾರ್ಗದ ದೊಡ್ಮನೆ ಘಟ್ಟ ಪ್ರದೇಶದ ಬಳಿ ರಾಜ್ಯ ಹೆದ್ದಾರಿಗೆ ಬೃಹದಾಕಾರದ ಮರ ಉರುಳುಬಿದ್ದಿದೆ. ಇದರಿಂದ ಎರಡು ಬದಿ ಸಂಪರ್ಕ ಕಡಿತಗೊಂಡಿದ್ದು ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಘಟ್ಟ ಪ್ರದೇಶದಲ್ಲಿಯೇ ಸಾಲುಗಟ್ಟಿವೆ.

ಇನ್ನು ಸುಮಾರು 10-30 ರ ವೇಳೆ ಈ ಬೃಹತ್ ಮರ ಬಿದ್ದಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಕುಮಟಾ(kumta)  ಸಾಗರ ಬಸ್ ಸಂಚಾರ ಮಾಡಿದ್ದು ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ನಂತರ ಬಂದ ಎಲ್ಲ ವಾಹನಗಳು ಎರಡು ಬದಿ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.

ಇದನ್ನೂ ಓದಿ:-Kumta: ಒಂದು ಅಡಿ ಉದ್ದ ,ಎರಡು ಇಂಚು ಅಗಲ ಚಾಕು ನುಂಗಿದ ನಾಗರಹಾವು! ವಿಡಿಯೋ ನೋಡಿ

ಘಟ್ಟ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಸುದ್ದಿ ತಿಳಿದ ತಕ್ಷಣ ಸಿದ್ದಾಪುರ ಮಾರ್ಗದಿಂದ ಆಗಮಿಸಿದ ವಾಹನಗಳು ಉಡಳ್ಳಿ, ದೊಡ್ಮನೆ ಬಳಿ ಹಾಗೂ ಕುಮಟಾ ಮಾರ್ಗದಿಂದ ಆಗಮಿಸಿದ ವಾಹನಗಳು ಮಾಸ್ತಿಮನೆ, ಬಡಾಳ ಬಳಿ ನಿಲ್ಲಿಸಲಾಗಿದೆ.
ಇನ್ನು ಮರವನ್ನು ತೆರವು ಮಾಡಲಾಗುತ್ತಿದೆ. ಬೃಹತ್ ಮರವಾಗಿರುವ ಕಾರಣ ಇನ್ನಷ್ಟು ಸಮಯವಾಗಬಹುದು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ