For the best experience, open
https://m.kannadavani.news
on your mobile browser.
Advertisement

Uttara kannada| ಲೋಕನ್ ಸುದ್ದಿ |ಇಂದು ಏನು?

Uttara Kannada Latest News Today (16 Sept 2025): ಗೋಕರ್ಣದಲ್ಲಿ ಗಾಂಜಾ ಸೇವನೆ ಯುವಕ ಬಂಧನ, ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಣೆ ವಾಹನ ವಶ, ಇಂದಿನ ಚಿನ್ನ-ಬೆಳ್ಳಿ ದರ ಇಳಿಕೆ, ಮಳೆ ಅಲರ್ಟ್ ಮತ್ತು ಜಲಾಶಯದ ನೀರಿನ ಮಟ್ಟ ವಿವರ.
10:34 AM Sep 16, 2025 IST | ಶುಭಸಾಗರ್
Uttara Kannada Latest News Today (16 Sept 2025): ಗೋಕರ್ಣದಲ್ಲಿ ಗಾಂಜಾ ಸೇವನೆ ಯುವಕ ಬಂಧನ, ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಣೆ ವಾಹನ ವಶ, ಇಂದಿನ ಚಿನ್ನ-ಬೆಳ್ಳಿ ದರ ಇಳಿಕೆ, ಮಳೆ ಅಲರ್ಟ್ ಮತ್ತು ಜಲಾಶಯದ ನೀರಿನ ಮಟ್ಟ ವಿವರ.
uttara kannada  ಲೋಕನ್ ಸುದ್ದಿ  ಇಂದು ಏನು

Uttara kannada| ಲೋಕನ್ ಸುದ್ದಿ |ಇಂದು ಏನು?

Uttara Kannada Latest News Today (16 Sept 2025): ಉತ್ತರ ಕನ್ನಡ ಜಿಲ್ಲೆ(uttara kannada) ಯಲ್ಲಿ ಕಳೆದ 24 ಗಂಟೆಯಲ್ಲಿ ಏನೆಲ್ಲಾ ನಡೆದಿದೆ. ಕೆಲವು ಪ್ರಮುಖ ಸುದ್ದಿಯ ಒಳನೋಟ ಇಲ್ಲಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಗೋಕರ್ಣ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ; ಯುವಕನ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಪ್ರದೀಪ್ ಕುಮಾರ್ (39) ಎಂಬ ಯುವಕನನ್ನು ಗೋಕರ್ಣ (gokarna)ಪೊಲೀಸರು ಬಂಧಿಸಿದ್ದಾರೆ. ಬಂಗ್ಲೆಗುಡ್ಡದ ವೇದಿಕಾ ವಿಲೇಜ್ ಹೋಂ ಸ್ಟೇ ಬಳಿ ಅನುಮಾನಾಸ್ಪದವಾಗಿ ಕಂಡುಬಂದ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿ

ಹೊನ್ನಾವರ: ಅಕ್ರಮ ಮರಳು ಸಾಗಣೆ; ವಾಹನ ವಶ, ಚಾಲಕ ಪರಾರಿ

ಹೊನ್ನಾವರ (honnavar) ಹೈವೇ ಸರ್ಕಲ್ ಬಳಿ  ಪೊಲೀಸರು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಬೊಲೆರೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕಾಸರಕೋಡಿನಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಕೆಎ-19/ಸಿ-6226 ನಂಬರ್‌ನ ವಾಹನವನ್ನು ತಡೆದಾಗ ಈ ಘಟನೆ ನಡೆದಿದೆ. ವಾಹನದಲ್ಲಿ ಸುಮಾರು 3,000 ರೂಪಾಯಿ ಮೌಲ್ಯದ ಮರಳು ಪತ್ತೆಯಾಗಿದೆ. ಚಾಲಕ ಧರ್ಮಾ ಸುಬ್ರಾಯ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?

 ಚಿನ್ನದ ಬೆಲೆಯಲ್ಲಿ(gold) ಕೊಂಚ ಇಳಿಕೆ-ಇಂದಿನ ದರ ವಿವರ:-

ಕಳೆದ ವಾರದಲ್ಲಿ ನಿತ್ಯ ಏರಿಕೆಯ ಹಾದಿ ಹಿಡಿದಿದ್ದ ಬಂಗಾರದ ಬೆಲೆ (gold rate) ಈ ವಾರದ ಆರಂಭದಿದಂದ ಇಳಿಕೆಯತ್ತ ಸಾಗಿದೆ. ಮಂಗಳವಾರ ಮುಂಜಾನೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ ₹10 ರಷ್ಟು ಇಳಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ ₹1,11,050 ಆಗಿದೆ ಎಂದು ಗುಡ್‌ರಿಟರ್ನ್ಸ್‌ ವೆಬ್‌ಸೈಟ್ ತಿಳಿಸಿದೆ. ಬೆಳ್ಳಿ ಬೆಲೆಯೂ ₹100 ರಷ್ಟು ಇಳಿಕೆಯಾಗಿದ್ದು, ಒಂದು ಕಿಲೋಗ್ರಾಂ ಬೆಲೆ ₹1,32,900 ಇದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೂಡ ₹10 ಇಳಿಕೆಯಾಗಿದ್ದು, 10 ಗ್ರಾಮ್ ಗೆ ₹1,01,790 ರೂ ಆಗಿದೆ.

Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ 

ಉತ್ತರ ಕನ್ನಡ ಮಳೆ ಅಲರ್ಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹಲವು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಅಲ್ಪ ಚದುರಿದ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸೆ.17 ರ ವರೆಗೂ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ.

ಉತ್ತರ ಕನ್ನಡ ಇಂದಿನ ಜಲಾಶಯದ ನೀರಿನ ಮಟ್ಟ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ