Rain|ಉತ್ತರ ಕನ್ನಡ ದಲ್ಲಿ ಮುಂದುವರೆದ ಮಳೆ |ಕಾಳಜಿ ಕೇಂದ್ರದಲ್ಲಿ 368 ಸಂತ್ರಸ್ತರಿಗೆ ಆಶ್ರಯ
ಉತ್ತರ ಕನ್ನಡ ದಲ್ಲಿ ಮುಂದುವರೆದ ಮಳೆ |ಕಾಳಜಿ ಕೇಂದ್ರದಲ್ಲಿ 368 ಸಂತ್ರಸ್ತರಿಗೆ ಆಶ್ರಯ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಶನಿವಾರವೂ ಮುಂದುವರೆದಿದೆ.
ಶರಾವತಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ.
ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೆರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗೇರುಸೊಪ್ಪ ಜಲಾಶಯದಿಂದ ನೀರು ಹೊರಬಿಡಲಾಗಿದ್ದು ,
ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ, ಮೇಲಿನ ಇಡಗುಂಜಿ, ಜಲವಳ್ಳಿ, ಗುಂಡಬಾಳಾ ನದಿ ದಂಡೆಗಳ ಪ್ರದೇಶಗಳಾದ ಚಿಕ್ಕನಕೋಡ, ಗುಂಡಬಾಳಾ, ಖರ್ವಾ, ಬೇರೊಳ್ಳಿ, ಭಾಸ್ಕೆರಿ ಹಳ್ಳ ದಂಡೆಗಳ ಪ್ರದೇಶಗಳಾದ ಹೊಸಾಕುಳಿ, ಮುಗ್ಧ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 368 ಸಂತ್ರಸ್ತರು ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 55.1, ಮಿಮೀ, ಭಟ್ಕಳದಲ್ಲಿ 24.2, ಹಳಿಯಾಳ 8.7, ಹೊನ್ನಾವರ 60.9, ಕಾರವಾರ 62.1, ಕುಮಟಾ 53.5, ಮುಂಡಗೋಡ 9.6, ಸಿದ್ದಾಪುರ 38.3, ಶಿರಸಿ 26.4, ಸೂಪಾ 46.8, ಯಲ್ಲಾಪುರ 21.5, ದಾಂಡೇಲಿಯಲ್ಲಿ 16.7, ಮಿಲಿ ಮೀಟರ್ ಮಳೆ ಸುರಿದಿದೆ.ಮಳೆಯಿಂದ ಜಿಲ್ಲೆಯಲ್ಲಿ 1 ಮನೆಗೆ ಸಂಪೂರ್ಣ ಹಾನಿಯಾಗಿದೆ.