For the best experience, open
https://m.kannadavani.news
on your mobile browser.
Advertisement

Ankola ಶಿರೂರು ದುರಂತದಲ್ಲಿ ಜೀವ ಉಳಸಿಕೊಂಡಾತ ಸಿಡಿಲಿಗೆ ಬಲಿ!

ಕಾರವಾರ :- ಸಿಡಿಲು ಬಡಿದು ವೃದ್ಧ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ಉಳವರೆಯಲ್ಲಿ ಇಂದು ಸಂಜೆ ನಡೆದಿದೆ.ಉಳವರೆ ಗ್ರಾಮದ ತಮ್ಮಣ್ಣಿ ಅನಂತ ಗೌಡ (65)ಮೃತ ವೃದ್ಧನಾಗಿದ್ದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ
10:04 PM May 19, 2025 IST | ಶುಭಸಾಗರ್
ಕಾರವಾರ :- ಸಿಡಿಲು ಬಡಿದು ವೃದ್ಧ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ಉಳವರೆಯಲ್ಲಿ ಇಂದು ಸಂಜೆ ನಡೆದಿದೆ.ಉಳವರೆ ಗ್ರಾಮದ ತಮ್ಮಣ್ಣಿ ಅನಂತ ಗೌಡ (65)ಮೃತ ವೃದ್ಧನಾಗಿದ್ದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ
ankola ಶಿರೂರು ದುರಂತದಲ್ಲಿ ಜೀವ ಉಳಸಿಕೊಂಡಾತ ಸಿಡಿಲಿಗೆ ಬಲಿ

Ankola ಶಿರೂರು ದುರಂತದಲ್ಲಿ ಜೀವ ಉಳಸಿಕೊಂಡಾತ ಸಿಡಿಲಿಗೆ ಬಲಿ!

Advertisement

ಕಾರವಾರ :- ಸಿಡಿಲು ಬಡಿದು ವೃದ್ಧ ಸಾವುಕಂಡ ಘಟನೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ಉಳವರೆಯಲ್ಲಿ ಇಂದು ಸಂಜೆ ನಡೆದಿದೆ.ಉಳವರೆ ಗ್ರಾಮದ ತಮ್ಮಣ್ಣಿ ಅನಂತ ಗೌಡ (65)ಮೃತ ವೃದ್ಧನಾಗಿದ್ದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಇದನ್ನೂ ಓದಿ:-Ankola: ದೇಶಸೇವೆಗಾಗಿ 30 ಕ್ಕೂ ಹೆಚ್ಚು ಶ್ವಾನಗಳನ್ನು ನೀಡಿದ ಅಂಕೋಲದ ರಾಘವೇಂದ್ರ ಭಟ್ 

ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಅಂಕೋಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರೂರು ದುರಂತದಲ್ಲಿ ಜೀವ ಉಳಿಸಿಕೊಂಡಿದ್ದ ತಮ್ಮಣ್ಣಿ ಗೌಡ.

2024 ರ ಜುಲೈ 16 ರಂದು ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ ಇದರ ಮಣ್ಣು ಗಂಗಾವಳಿ ನದಿಗೆ ಬಿದ್ದು ಪಕ್ಕದಲ್ಲೇ ಇದ್ದ ಉಳವರೆ ಗ್ರಾಮಕ್ಕೆ ನದಿ ನೀರು ಅಪ್ಪಳಿಸಿತ್ತು. ಈ ದುರಂತದಲ್ಲಿ 11 ಜನ ಸಾವು ಕಂಡಿದ್ದರು.

ಇನ್ನು ಇದೇ ಘಟನೆಯಲ್ಲಿ ಉಳವೆರೆ ಗ್ರಾಮದ ಮನೆಗಳು ಕೊಚ್ಚಿಹೋಗಿದ್ದು, ಈ ಸಂದರ್ಭದಲ್ಲಿ ಸ್ಪಲ್ಪದರಲ್ಲೇ ಪಾರಾಗಿ ಜೀವ ಉಳಸಿಕೊಂಡಿದ್ದ ತಮ್ಮಣ್ಣಿ ಗೌಡ ಇದೀಗ ಸಿಡಿಲು ಬಡಿದು ಸಾವು ಕಂಡಿದ್ದಾನೆ. ಪ್ರಕೃತಿ ವಿಕೋಪದಲ್ಲಿ ಬೀಸುವ ದೊಣ್ಣೆಯಿಂದ ಪಾರಾಗಿ ಜೀವ ಉಳಿಸಿಕೊಂಡಾತ ಮತ್ತೆ ಪ್ರಕೃತಿ ಸಿಡಿಲಿನ ರೂಪದಲ್ಲಿ ಈತನ ಜೀವ ಪಡೆದಿದ್ದು ಮಾತ್ರ ದುರಂತ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ